ಜೈಲಿಂದ ಬಂದ್ರೆ ರಾಜ್ಯ ಆಳ್ತಾನೆ, ಮುಗಿಸ್ಬೇಕು ಅಂತ ಸಂಚು ಹಾಕಿದ್ರು : ಜನಾರ್ಧನ ರೆಡ್ಡಿ ಹೇಳಿದ್ದೇನು?

ಮೂರು ಪಕ್ಷಗಳಿಗೂ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಹೊಸ ಪಕ್ಷ ಕಟ್ಟಿರುವ ಮಾಜಿ ಸಚನ ಜನಾರ್ಧನ್ ರೆಡ್ಡಿ ಚುನಾವಣಾ ಪ್ರಚಾರದ ವೇಳೆ ಹಳೆಯ ನೆನಪುಗಳನ್ನ ನೆನದು ಬೇಸರವನ್ನ ಕವ್ಯಕ್ತಪಡಿಸಿದ್ದಾರೆ.

ತುಮಕೂರು,ಫೆಬ್ರವರಿ27: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತದ್ದಂತೆ ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರವನ್ನ ನಡೆಸುತ್ತಿವೆ. ಇತ್ತ ಮೂರು ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆಯಲು ಗಾಲಿ ಜನಾರ್ಧನ ರೆಡ್ಡಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷವನ್ನ ಕಟ್ಟವ ಮೂಲಕ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಪ್ರಚಾರವನ್ನ ನಡೆಸುತ್ತಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಪ್ರಚಾರದ ವೇಳೆ ಹಳೆಯ ನೆನಪುಗಳನ್ನ ನೆನಪು ಮಾಡಿಕೊಳ್ಳುವ ಮೂಲಕ ವಿರೋಧಿಗಳ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.

Assembly Elections 2023: Some Were Going To Finish Me Off Politically Says Janardhana Reddy

ಈ ಕುರಿತು ಭಾನುವಾರ ತುಮಕೂರು ಜಿಲ್ಲೆ ಪಾವಗಡದಲ್ಲಿ ಕೆಆರ್‌ಪಿಪಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಗಾಲಿ ಜನಾರ್ಧನ ರೆಡ್ಡಿ ಜೈಲಿನಿಂದ ಹೊರ ಬಂದ್ರೆ ರಾಜ್ಯ ಆಳ್ತಾನೆ. ಇವನನ್ನ ಏನಾದರೂ ಮಾಡಿ ರಾಜಕೀಯವಾಗಿ ಮುಗಿಸಬೇಕು ಅಂತಾ ಕೆಲವರು ಸಂಚು ಮಾಡಿದ್ರು‌. ಆದರೆ, ಆ ಭಗವಂತನ ಇಚ್ಚೆಯೇ ಬೇರೆ ಆಗಿತ್ತು. ಇವತ್ತು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಅಂತಾ ಜೈಲಿನ‌ ಕಹಿ ದಿನಗಳನ್ನ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.

ಜನಾರ್ಧನ ರೆಡ್ಡಿ, ಒಬ್ಬ ಮನುಷ್ಯನನ್ನ ಮುಗಿಸಬೇಕು ಎಂದರೆ ಅಥವಾ ಬೆಳೆಸಬೇಕು ಅಂದ್ರೆ ಆ ಪರಮಾತ್ಮನೇ ಬರಬೇಕು. ಹಾಗಾಗಿ 12 ವರ್ಷಗಳ ಬಳಿಕ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಜನರ ಪ್ರೀತಿ, ಅಭಿಮಾನ ಹಾಗೂ ಭಗವಂತನ ಆಶೀರ್ವಾದದಿಂದ ಮತ್ತೆ ನಿಮ್ಮ‌ ಮುಂದೆ ಇದ್ದೇನೆ ಅಂತಾ ಕಷ್ಟದ ದಿನಗಳನ್ನ ಮೆಲುಕು ಹಾಕಿದರು.

ನನ್ನನ್ನು ಮನೆಯಲ್ಲೇ ಕೂರಿಸಬೇಕು. ಇವನು ಹೊರಗಡೆ ಎಂದೂ ಬರಬಾರದು ಅಂತ ಕೆಲವರು ಪ್ರಯತ್ನ ಮಾಡಿದರು. ಒಂದು ವೇಳೆ ಬಂದ್ರೆ ರಾಜ್ಯ ಆಳ್ತಾನೆ. ಹಾಗಾಗಿ ಆತನನ್ನ ಹೊರಗಡೆ ಬರದಂತೆ ತಡೆಯ ಬೇಕು ಎಂದು ಸಾಕಷ್ಟು ಸಂಚು ನಡೆಸಿದ್ರು ಎನ್ನುವ ಮೂಲಕ ವಿರೋಧಿಗಳಿಗೆ ಪರೋಕ್ಷ ಟಾಂಗ್ ನೀಡಿದರು. ಇನ್ನೂ ಇಡೀ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷ ಬಲವರ್ಧನೆ ಆಗ್ತಿದೆ. ಈಗಾಗಲೇ 31 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಆಗಿದೆ ಎಂದು ತಿಳಿಸಿದರು.

Assembly Elections 2023: Some Were Going To Finish Me Off Politically Says Janardhana Reddy

ಮುಖ್ಯಮಂತ್ರಿ ಆಗುವ ಆಸೆ ಇರುವವರು ಎಲ್ಲರೂ ನನ್ನ ದೂರು ಇಡುವಂತಹ ಕೆಲಸ ,ಮಾಡಿದ್ರು. ರಾಜಕೀಯವಾಗಿ ಶತ್ರುಗಳು ಕಷ್ಟ ಪಡುತ್ತಾರೆ ಎಂದ್ರೆ ಒಪ್ಪಿಕೊಳ್ಳಬಹುದು, ಆದರೆ ನಾನು ನಂಬಿದವರೇ ನನಗೆ ದ್ರೋಹ ಮಾಡುತ್ತಿದ್ದಾರೆ. ನನ್ನವರೇ ನನಗೆ ದ್ರೋಹ ಮಾಡಿದ್ರೆ ಅದನ್ನ ನಂಬಲು ಆಗಲ್ಲ ಎಂದು ಹಿಂದಿನ ದಿನಗಳನ್ನ ನೆನಪು ಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+