Major Railway Projects: ಕರ್ನಾಟದಲ್ಲಿನ ಪ್ರಮುಖ ರೈಲ್ವೆ ಯೋಜನೆಗಳ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಅಶ್ವಿನಿ ವೈಷ್ಣವ್
New Railway Lines: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜೊತೆಗೆ ರೈಲ್ವೆ ಜಾಲ ಕೂಡ ವಿಸ್ತರಣೆಯಾಗುತ್ತಲಿದೆ. ಹಾಗೆಯೇ ಇದೀಗ ರಾಜ್ಯದ ಮಹತ್ವದ ರೈಲ್ವೆ ಯೋಜನೆಗಳು ಯಾವ ಸ್ಥಿತಿಯಲ್ಲಿವೆ? ಉದ್ದ ಎಷ್ಟು? ಯಾವೆಲ್ಲಾ ಮಾರ್ಗಗಳು ಹಾಗೂ ಅಂದಾಜು ವೆಚ್ಚ ಎಷ್ಟು ಎನ್ನುವ ಸಂಪೂರ್ಣ ವಿವರವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸವಿವರವಾಗಿ ಬಿಚ್ಚಿಟ್ಟಿದ್ದಾರೆ.
ಕರ್ನಾಕದಲ್ಲಿ ರೈಲ್ವೆ ಜಾಲ ವಿಸ್ತರಣೆಯಾಗುತ್ತಲಿದ್ದು, ಎಲ್ಲೆಲ್ಲಿ ಯಾವುದಕ್ಕೆ ಎಷ್ಟು ಹೆಕ್ಟೇರ್ ಭೂಸ್ವಾಧೀನ ಬಾಕಿ ಇದೆ. ಇದಕ್ಕೆ ಕಾರಣ ಏನು? ಇದುವರೆಗೂ ಪೂರ್ಣಗೊಂಡ ಹಾಗೂ ಬಾಕಿ ಉಳಿದ ಕಾಮಗಾರಿ ಎಷ್ಟು ಎನ್ನುವ ಇಂಚಿಂಚು ಮಾಹಿತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಜುಲೈ 30ರ ಬುಧವಾರ ತೆರೆದಿಟ್ಟಿದ್ದಾರೆ.

ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ 8,280 ಹೆಕ್ಟೇರ್ ಭೂಸ್ವಾಧೀನ ಬಾಕಿಯಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆ ರಾಯಚೂರು ಸಂಸದ ಜಿ.ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 4 ಪ್ರಮುಖ ಯೋಜನೆಗಳಿಗೆ ಒಂದೇ ಒಂದು ಹೆಕ್ಟೇರ್ ಭೂಮಿಯನ್ನು ಸ್ವಧೀನಪಡಿಸಿಕೊಂಡಿಲ್ಲ ಎಂದು ಹೇಳಿದರು. ಅಲ್ಲದೆ, ಇದೇ ವೇಳೆ ಇದಕ್ಕೆ ಕಾರಣ ಏನಂತಲೂ ಕೂಡ ತಿಳಿಸಿದ್ದಾರೆ.
ರಾಜ್ಯದಲ್ಲಿ 25 ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಗಳ ಒಟ್ಟು ಉದ್ದ 3,264 ಕಿಲೋ ಮೀಟರ್. ಇದರಲ್ಲಿ ಈವರೆಗೂ ಬರೀ 1,394 ಕಿಲೋ ಮೀಟರ್ ಪೂರ್ಣಗೊಂಡಿದೆ ಅಷ್ಟೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಆಗಿರುವುದರಿಂದ ಯೋಜನೆಗಳ ಅನುಷ್ಠಾನವೂ ವಿಳಂಬವಾಗಿದೆ. ಶೇಕಡ 37ರಷ್ಟು ಜಮೀನು ಸ್ವಾಧೀನ ಮಾಡಿಕೊಳ್ಳಬೇಕಿದೆ ಎಂದು ವಿವರಿಸಿದರು.
ಹೊಸ ಮಾರ್ಗ
* ಯೋಜನೆಗಳು -15
* ಒಟ್ಟು ಉದ್ದ - 2,034 ಕಿಲೋ ಮೀಟರ್
* ಪೂರ್ಣ - 421 ಕಿಲೋ ಮೀಟರ್
* ಈವರೆಗೂ ತಗುಲಿದ ಕಾಮಗಾರಿ ವೆಚ್ಚ - 8,794 ಕೋಟಿ ರೂಪಾಯಿ
ಜೋಡಿಹಳ್ಳಿ
* ಯೋಜನೆಗಳು -10
* ಒಟ್ಟು ಉದ್ದ - 1,230 ಕಿ.ಮೀ.
* ಪೂರ್ಣ - 973 ಕಿಲೋ ಮೀಟರ್
* ಈವರೆಗೂ ತಗುಲಿದ ಕಾಮಗಾರಿ ವೆಚ್ಚ - 12,516 ಕೋಟಿ ರೂಪಾಯಿ
ಹೆಜ್ಜಾಲ-ಚಾಮರಾಜನಗರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದರೆ, ರಾಜ್ಯ ಸರ್ಕಾರ ಶೇಕಡ 50ರಷ್ಟು ಅನುದಾನ ನೀಡಬೇಕಿತ್ತು. ಕರ್ನಾಟಕ ಸರ್ಕಾರ ಇದೀಗ ನಿಲುವು ಬದಲಾಯಿಸಿದ್ದ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂದು ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದರು.
ಇನ್ನು ದೇಶದಲ್ಲಿ 17 ರೈಲ್ವೆ ವಲಯಗಳಿದ್ದು, ಒಟ್ಟು ರೈಲ್ವೆ ಜಾಲ 69,181 ಕಿಲೋ ಮೀಟರ್ ಆಗಿದೆ. ಬೇರೆ ವಲಯಗಳಿಗೆ ಹೋಲಿಸಿದ್ದೆ, ನೈರುತ್ಯ ವಲಯದಲ್ಲಿ ರೈಲ್ವೆ ಜಾಲ ಕಡಿಮೆ. ಇಲ್ಲಿ 3,692 ಕಿ.ಮೀ. ರೈಲ್ವೆ ಜಾಲ ಇದೆ ಎಂದು ಅವರು ತಿಳಿಸಿರು.
ಭೂಸ್ವಾಧೀನದಿಂದ ಯಾವೆಲ್ಲ ಯೋಜನೆಗಳು ವಿಳಂಬ?
ಶಿವಮೊಗ್ಗ-ರಾಣೆಬೆನ್ನೂರು
* ಉದ್ದ: 96 ಕಿ.ಮೀ.
* ಬೆಕಾಗಿರುವ ಭೂಮಿ: 559 ಹೆಕ್ಟೇರ್
* ಸ್ವಾಧೀನಪಡಿಸಿಕೊಂಡಿರುವುದು: 226 ಹೆಕ್ಟೇರ್
* ಸ್ವಾಧೀನಕ್ಕೆ ಬಾಕಿ ಉಳಿದಿರುವುದು: 333 ಹೆಕ್ಟೇರ್
ಬೆಳಗಾವಿ-ಧಾರವಾಡ
* ಉದ್ದ: 72 ಕಿ.ಮೀ.
* ಬೆಕಾಗಿರುವ ಭೂಮಿ: 531 ಹೆಕ್ಟೇರ್
* ಭೂಸ್ವಾಧೀನ ಆಗಿಲ್ಲ
ಶಿವಮೊಗ್ಗ-ಹರಿಹರ
* ಉದ್ದ: 79 ಕಿ.ಮೀ.
* ಬೆಕಾಗಿರುವ ಭೂಮಿ: 448 ಹೆಕ್ಟೇರ್
* ಭೂಸ್ವಾಧೀನ ಆಗಿಲ್ಲ
ವೈಟ್‌ಫೀಲ್ಡ್-ಕೋಲಾರ
* ಉದ್ದ: 53 ಕಿ.ಮೀ.
* ಬೆಕಾಗಿರುವ ಭೂಮಿ: 337 ಹೆಕ್ಟೇರ್
* ಭೂಸ್ವಾಧೀನ ಆಗಿಲ್ಲ
ಹಾಸನ-ಬೇಲೂರು
* ಉದ್ದ: 27 ಕಿ.ಮೀ.
* ಬೆಕಾಗಿರುವ ಭೂಮಿ: 206 ಹೆಕ್ಟೇರ್
* ಭೂಸ್ವಾಧೀನ ಆಗಿಲ್ಲ
ಹೀಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ರಾಜ್ಯದಲ್ಲಿ ರೈಲ್ವೆ ಜಾಲಗಳ ಭೂಸ್ವಾಧೀನದ ಬಗ್ಗೆ ಇಂಚಿಚು ಮಾಹಿತಿಯನ್ನು ತೆರೆದಿಟ್ಟು ಗಮನ ಸೆಳೆದರು. ಅಲ್ಲದೆ, ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ತಪ್ಪುಗಳ ಬಗ್ಗೆಯೂ ವಿವರ ನೀಡಿದರು.












Click it and Unblock the Notifications