RSS ಅಭ್ಯರ್ಥಿ ಪರ ಸೋನಿಯಾ ಗಾಂಧಿ ಪ್ರಚಾರ: ಕಾಂಗ್ರೆಸ್‌ನ ತತ್ವ ಸಿದ್ಧಾಂತ ಬಗ್ಗೆ ಓವೈಸಿ ಪ್ರಶ್ನೆ
ಹುಬ್ಬಳ್ಳಿ, ಮೇ 06: ಆರ್‌ಎಸ್‌ಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಚಾರ ಮಾಡಿದ್ದಾರೆ. ಮೊದಲು ಕಾಂಗ್ರೆಸ್ ಯಾವ ತರಹದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದೆ ಎಂಬದನ್ನು ತಿಳಿಸಬೇಕು ಎಂದು ಎಐಎಂಐಎಂ (AIMIM) ಮುಖ್ಯಸ್ಥ ಅಸ್ಸಾವುದ್ದಿನ್ ಓವೈಸಿ ಪ್ರಶ್ನೆ ಮಾಡಿದ್ದಾರೆ.
Madam Sonia Gandhi ji, mujhe aapse ye ummid nahi thi ki aap ek @RSSorg ke aadmi ke liye campaign karne aayengi, Jagadish Shettar to RSS se hai. - Barrister @asadowaisi #Karnataka #hubli #OwaisiInKarnataka #KarnatakaAssemblyElection2023 #KarnatakaElections2023 pic.twitter.com/XxKFeHE57v
— AIMIM (@aimim_national) May 7, 2023
ಹುಬ್ಬಳ್ಳಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಡಿದ ಅವರು, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಚಾರ ಮಾಡಿದ್ದಾರೆ. ಅದನ್ನು ಖಂಡಿಸಿದ ಅಸ್ಸಾವುದ್ದಿನ್ ಓವೈಸಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಅವರ ಈ ಮಾತುಗಳು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳು ಹುಟ್ಟುಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜಗದೀಶ್ ಶೆಟ್ಟರ್ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ವ್ಯಕ್ತಿ. ಅವರ ಪರ ನೀವು ಚುನಾವಣಾ ಪ್ರಚಾರ ನಡೆಸಿರುವ ನಿಮ್ಮ ನಡೆ ಸರಿಯಾದುದ್ದಲ್ಲ ಎಂದು ಕಿಡಿ ಕಾರಿದರು. ಬಹಿರಂಗ ಸಭೆಯಲ್ಲಿಯೇ ಮಾತನಾಡಿದ ಅವರು, ಕಾಂಗ್ರೆಸ್ ಯಾವ ತರಹದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದೆ ಎಂಬುದನ್ನು ತಿಳಿಸಲಿ ಎಂದು ಪ್ರಶ್ನಿಸಿದರು.
ಸೈದ್ಧಾಂತಿಕ ಹೋರಾಟದಲ್ಲಿ ಕಾಂಗ್ರೆಸ್ ವಿಫಲ: ಓವೈಸಿ
ಆರ್‌ಎಸ್‌ಎಸ್ ಹಿನ್ನೆಲೆಯ ವ್ಯಕ್ತಿ ಜಗದೀಶ್ ಶೆಟ್ಟರ್ ಪರ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ ನೀವು, ನಿಮ್ಮ ಸೆಕ್ಯೂಲರ್ ತತ್ವ ನೀತಿಗಳು ಮೋದಿ ವಿರುದ್ಧ ಹೋರಾಡುವುದು ಹೀಗೆಯೇ?. ಸೈದ್ಧಾಂತಿಕ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರ ಹಾಕಿದರು.
ಬಿಜೆಪಿ ಪಕ್ಷದ ಗುಲಾಮರು ಹಾಗೂ ಜೋಕರ್‌ಗಳು ನನ್ನ ಮೇಲೆ ಆರೋಪಿಸುತ್ತಿದ್ದು, ಕಾಂಗ್ರೆಸ್ ಬಿಜೆಪಿಯ ಬಿ ಟೀಂ ರೀತಿ ವರ್ತಿಸುತ್ತಿದೆ. ಕಾಂಗ್ರೆಸ್ ವಿರುದ್ಧ ಕೇಸರಿ ಪಕ್ಷದ ಅವರ ಸದಸ್ಯರು ಆರೋಪಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ?. ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಹೋರಾಟ ವಿಫಲವಾಗಿದೆ ಎಂದು ಹೇಳಿದರು.

ಶೆಟ್ಟರ್ ಪರ ಶನಿವಾರ ಪ್ರಚಾರ ಮಾಡಿದ್ದ ಸೋನಿಯಾ ಗಾಂಧಿ
ಸುಮಾರು ಆರು ಭಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಗೆದ್ದಿರುವ ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿಗಳು. ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದಾ ಅವರಿಗೆ 2023ರ ಚುನಾವಣೆಯಲ್ಲಿ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಅವರು ಬಂಡಾಯವೆದ್ದು ಕಾಂಗ್ರೆಸ್ ಪಕ್ಷ ಸೇರಿದರು. ಅವರು ಅದೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಬಿಜೆಪಿಯ ಮಹೇಶ್ ತೆಂಗಿನ ಕಾಯಿ ಅವರು ಸ್ಪರ್ಧಿಸಲಿದ್ದಾರೆ. ಶೆಟ್ಟರ್ ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇನ್ನಿತರ ನಾಯಕರು ಪಾಲ್ಗೊಂಡಿದ್ದರು.












Click it and Unblock the Notifications