'ಇನ್ವೆಸ್ಟ್ ಕರ್ನಾಟಕ-2016' ಕ್ಕೆ ಯಾರ್ಯಾರು ಬರ್ತಿದ್ದಾರೆ?

Subscribe to Oneindia Kannada

ಬೆಂಗಳೂರು, ಜನವರಿ, 13: ಫೆಬ್ರವರಿ 3ರಿಂದ 5ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದ್ದು ರಾಜ್ಯದಲ್ಲಿ ಬಂಡವಾಳ ಹೂಡಲು ಅನೇಕ ಕಂಪನಿಗಳು ಮುಂದೆ ಬಂದಿವೆ ಎಂದು ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಮಾಹಿತಿ ನೀಡಿದರು.

'ಇನ್ವೆಸ್ಟ್ ಕರ್ನಾಟಕ-2016' ಸಮಾವೇಶವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಉದ್ಘಾಟಿಸುವರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.[ಬಂಡವಾಳ ಹೂಡಿಕೆ ಸಮಾವೇಶ ಯಾಕಾಗಿ?]

ಬೆಂಗಳೂರಿನ ಖನಿಜ ಭವನದಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆಯ ನಂತರ ದೇಶಪಾಂಡೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಜಾಗತಿಕ ಬಂಡವಾಳ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಹಲವಾರು ಕಂಪನಿಗಳು ಮುಂದೆ ಬಂದಿದವೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.

karnataka

ರಾಜ್ಯದಲ್ಲಿ ಬಂಡವಾಳ ಹೂಡಲು ಜಪಾನ್‌, ಇಟಲಿ, ಸ್ವೀಡನ್‌, ದಕ್ಷಿಣ ಕೊರಿಯಾ ,ಯುನೈಟೆಡ್‌ ಕಿಂಗ್‌ಡಮ್‌,ಫ್ರಾನ್ಸ್‌,ಮತ್ತು ಜರ್ಮನಿ ಉದ್ಯಮಿಗಳು ಮುಂದೆ ಬಂದಿದ್ದಾರೆ. ಹೂಡಿಕೆ ಕುರಿತಂತೆ ಸುಮಾರು 145 ಪ್ರಸ್ತಾವನೆಗಳು ಬಂದಿದ್ದು, ಈ ಪೈಕಿ 45 ಮೂಲಸೌಕರ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಬೆಂಗಳೂರಿನಲ್ಲೇ ಹೂಡಿಕೆಯಾಗಲಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ಜನವರಿ 20ರಂದು ಮತ್ತೊಂದು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯಾವ ಕಂಪನಿ ಮತ್ತು ಹೂಡಿಕೆದಾರರಿಗೆ ಸಬಂಧಿಸಿದ ವಿವರಗಳು ಅಂತಿಮವಾಗುತ್ತದೆ. ಏರೋಸ್ಪೇಸ್‌, ಆಹಾರ ಸಂಸ್ಕರಣೆ, ಆಟೋಮೊಬೈಲ್‌, ಕೃಷಿ ಸಂಬಂಧಿ ಕೈಗಾರಿಕೆಗಳು, ಔಷಧ ಮತ್ತು ರಸಗೊಬ್ಬರ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.[ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್ VS ಅರುಣ್ ಜೇಟ್ಲಿ]

ಜನವರಿ 20ರ ಸಭೆಯಲ್ಲಿ ಅಜೀಂ ಪ್ರೇಮ್‌ಜಿ, ರತನ್‌ ಟಾಟಾ, ಸಜ್ಜನ್‌ ಜಿಂದಾಲ್‌ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಇದೆ ವೇಳೆ ತಿಳಿಸಿದರು.[ಹೊಸ ವರ್ಷಕ್ಕೆ ಎಲ್ಲಿ ಹೂಡಿಕೆ ಮಾಡೋದು ಬೆಸ್ಟ್]

ಉದ್ಯಮಿಗಳಿಗೆ 500 ಎಕರೆ ಭೂಮಿ
ಏರೋಸ್ಪೇಸ್‌, ಆಹಾರ ಸಂಸ್ಕರಣೆ, ಆಟೋಮೊಬೈಲ್‌, ಕೃಷಿ ಸಂಬಂಧಿ ಕೈಗಾರಿಕೆಗಳು, ಔಷಧ ಮತ್ತು ರಸಗೊಬ್ಬರ ಕ್ಷೇತ್ರಗಳಿಗೆ ರಾಜ್ಯದಲ್ಲಿ ರಸಗೊಬ್ಬರ ಪಾರ್ಕ್‌ ನಿರ್ಮಾಣಕ್ಕೆ 500 ಎಕರೆ ಭೂಮಿ ನೀಡಲು ಸರ್ಕಾರ ಒಪ್ಪಿದೆ. ಅದೇ ರೀತಿ ಔಷಧ ಪಾರ್ಕ್‌ ಸ್ಥಾಪನೆಗೆ ಯಾದಗಿರಿ ಮತ್ತು ಮಂಗಳೂರಿನಲ್ಲಿ ಭೂಮಿ ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್‌ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Karnataka set to host its much-delayed global investors' meet, ‘Invest Karnataka 2016' in February. Union Finance Minister Arun Jaitley will be the chief guest at the inaugural ceremony for Invest Karnataka 2016, a three-day event beginning February 3, state government officials said.
Please Wait while comments are loading...