• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಕಾವತಿ ಹಗರಣದಲ್ಲಿ ಸಿಂಗ್ ಪಾಲಿದೆ : ಜೆಡಿಎಸ್ ಬಾಂಬ್

|

ಬೆಂಗಳೂರು, ಜ.31 : ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್ ಅರ್ಕಾವತಿ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿರುವುದನ್ನು ಜೆಡಿಎಸ್ ಖಂಡಿಸಿದೆ. ಕರ್ನಾಟಕಕ್ಕೆ ತೆರಿಗೆ ಕಟ್ಟದೇ ಸಿಂಗ್ ವಂಚಿಸಿದ್ದಾರೆ ಎಂದು ಜೆಡಿಎಸ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಅಮೇಜಾನ್ ಕಂಪನಿಯಲ್ಲಿ ಪಾಲನ್ನು ಹೊಂದಿರುವ ದಿಗ್ವಿಜಯ ಸಿಂಗ್ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ವ್ಯಾಟ್ ನಿಯಮದ ಅಡಿ ರಿಯಾಯಿತಿಯನ್ನು ಕೊಡಿಸಿದ್ದಾರೆ. ಇದರಿಂದ ರಾಜ್ಯಕ್ಕೆ ದೊರೆಯಬೇಕಾದ ನ್ಯಾಯಬದ್ಧ ತೆರಿಗೆಯನ್ನು ತಪ್ಪಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಇ-ಟ್ರೇಡಿಂಗ್ ಮಾಡುತ್ತಿರುವ ಕಂಪನಿ ಸಿಂಗ್ ಉಪಯೋಗಿಸಿಕೊಂಡು ತೆರಿಗೆ ವಂಚಿಸಿದೆ ಎಂದು ಜೆಡಿಎಸ್ ದೂರಿದೆ. [ಅರ್ಕಾವತಿ ಫೈಟ್ ಯಾರು, ಏನು ಹೇಳಿದರು?]

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮೂಲಕ ಕೋಟ್ಯಾಂತರ ರೂಪಾಯಿಗಳ ಚುನಾವಣಾ ನಿಧಿಯನ್ನು ಸಿಂಗ್ ಸಂಗ್ರಹ ಮಾಡಿದ್ದಾರೆ. ಅದರಲ್ಲಿನ ಒಂದು ಪಾಲು ಅರ್ಕಾವತಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದ್ದಾಗಿದೆ. ಚುನಾವಣಾ ಪೂರ್ವದಲ್ಲಿ ಸುಮಾರು 560 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]

ಮುಖ್ಯಮಂತ್ರಿಗಳ ಜೊತೆಗೆ ಎಐಸಿಸಿ ನಾಯಕರೂ ಇದರಲ್ಲಿ ಪಾಲು ಪಡೆದಿದ್ದಾರೆ. ಸದರಿ ಪ್ರಕರಣವನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದರೆ ಎಲ್ಲಾ ಅಕ್ರಮಗಳು ಬಯಲಿಗೆ ಬರುತ್ತವೆ. ಇದರಿಂದ ಆತಂಕಗೊಂಡಿರುವ ಕಾಂಗ್ರೆಸ್ ನಾಯಕರು ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಕ್ಷ ಹೇಳಿದೆ. [ಅರ್ಕಾವತಿ ಹಗರಣ ಎಚ್ಡಿಕೆ ಹೇಳುವುದೇನು?]

ವಿಧಾನಸಭೆ ಚುನಾವಣೆಯ ಸಮಯದಲ್ಲಿ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಹಾಗೂ ಸೋನಿಯಾ ಗಾಂಧಿಯವರ ನಿಜಬಣ್ಣ ಬಯಲಾಗಿದೆ ಎಂದು ಜೆಡಿಎಸ್ ಟೀಕಿಸಿದೆ.

ದಿಗ್ವಿಜಯ್ ಸಿಂಗ್‍ ಅವರು ಒತ್ತಡ ಹಾಕಿ ರಾಜ್ಯ ಸರ್ಕಾರಕ್ಕೆ ಅಮೇಜಾನ್‌ನಿಂದ ಬರಬೇಕಿದ್ದ ಸುಮಾರು 1,500 ಕೋಟಿ ನಷ್ಟ ಮಾಡಿದ್ದಾರೆ. ಜೆಡಿಎಸ್ ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. 01.01.2014 ರಿಂದ 30.10.2014ರವರೆಗೆ ಅಮೇಜಾನ್ ಕಂಪನಿಯು ಕೇವಲ ರೂ.1,57,31,386 ತೆರಿಗೆಯನ್ನು ಪಾವತಿ ಮಾಡಿದೆ, ಸರ್ಕಾರದ ಒತ್ತಡಕ್ಕೆ ಮಣಿಯಲಿಲ್ಲ ಎಂಬ ಕಾರಣಕ್ಕೆ ಪ್ರಾಮಾಣಿಕ ಅಧಿಕಾರಿಯಾದ ಅಜಯ್ ಸೇಠ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿತ್ತು ಎಂದು ದೂರಿದೆ.

ಅರ್ಕಾವತಿ ಪ್ರಕರಣದಲ್ಲಿ ದಿಗ್ವಿಜಯ್ ಸಿಂಗ್‍ರವರು ಪಾಲುದಾರರಾಗಿದ್ದು, ವಿಧಾನಸಭೆಯ ಕಲಾಪಗಳಲ್ಲಿ ಇದು ಬಹಿರಂಗಗೊಳ್ಳಬಹುದಾದ ಮಾಹಿತಿಗಳ ಮುಜುಗರದಿಂದ ತಪ್ಪಿಸಿಕೊಳ್ಳಲು, ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿಯ ಸಭೆಯನ್ನು ಬಳಸಿಕೊಂಡು ಸಿದ್ದರಾಮಯ್ಯನವರ ಸಮರ್ಥನೆಗೆ ಮುಂದಾಗಿರುತ್ತಾರೆ ಎಂದು ಹೇಳಿದೆ.

English summary
The Janata Dal (Secular) alleged that AICC general secretary and in-charge of Karnataka Digvijay Singh beneficiary of Arkavathy Layout De-notification scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more