Get Updates
Get notified of breaking news, exclusive insights, and must-see stories!

ಬಿಜೆಪಿ ಆಡಳಿತದಲ್ಲಿ ಬೆಂಗಳೂರಿನ ಕಥೆ ಗೋವಿಂದ ಗೋವಿಂದ ಎಂದಿದ್ದೇಕೆ ಡಿಕೆಶಿ?

ಬೆಂಗಳೂರು, ಸೆಪ್ಟೆಂಬರ್ 03: ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ಶಾಸಕರಾಗಿ ಇರುವುದಕ್ಕೆ ಅರ್ಹರಲ್ಲ. ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಕ್ಕೆ ಅರ್ಹವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಷ್ಟ ಹೇಳಿಕೊಂಡ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಲಿಂಬಾವಳಿ ಅವರು ಶಾಸಕರಾಗಿ ಮುಂದುವರಿಯಲು ಅರ್ಹರಲ್ಲ ಎಂದರು.

ಬೆಂಗಳೂರು ಹೊರವಲಯದ ಜನರು ತಮ್ಮ ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಅನಾಹುತ, ನಷ್ಟದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಯಾವುದೇ ಪಕ್ಷದವರಾಗಲಿ ಜನ ಆ ಕ್ಷೇತ್ರದ ಶಾಸಕರ ಬಳಿ ಹೋಗಿ ತಮಗಾಗಿರುವ ಅನ್ಯಾಯವನ್ನು ಕೇಳುತ್ತಾರೆ. ಮಹಿಳೆಯರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಅದನ್ನು ಕೇಳದಿರುವುದು ಸಮಂಜಸವಲ್ಲ ಎಂದು ಹೇಳಿದರು.

Aravinda Limbavali is not deserve to be an MLA, says KPCC President DK Shivakumar

ರಾಮನಗರ ಭೇಟಿ ಬಗ್ಗೆ ಉಲ್ಲೇಖಿಸಿದ ಡಿಕೆಶಿ:
ಮಳೆಯಿಂದಾಗಿ ರಾಮನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಜನರು ಅವರ ಸಮಸ್ಯೆ, ದುಃಖವನ್ನು ಹೇಳಿಕೊಂಡರು. ಜನರ ಕಷ್ಟ ಕೇಳುವ ತಾಳ್ಮೆ ಇಲ್ಲವಾದರೆ ಅರವಿಂದ ಲಿಂಬಾವಳಿ ಶಾಸಕರಾಗಿರಲು ಅರ್ಹರಲ್ಲ ಎಂದು ಹೇಳಿದರು.
ಉದ್ಯೋಗ ಸೃಷ್ಟಿ ಮೂಲಕ ಸರ್ಕಾರಕ್ಕೆ ನೆರವು ನೀಡುತ್ತಿರುವ ಕಂಪನಿಗಳು ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಹೊರವಲಯ ರಿಂಗ್ ರೋಡ್ ಕಂಪನಿಗಳ ಸಂಘದವರು ಸರ್ಕಾರಕ್ಕೆ ಪತ್ರ ಬರೆದು ತಮಗಾದ ತೊಂದರೆ, ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ರೀತಿ ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಿದೆ. ರಾಮನಗರದ ಉಸ್ತುವಾರಿ ಸಚಿವರು ಜಿಲ್ಲೆ ಕ್ಲೀನ್ ಮಾಡುವುದಾಗಿ ಹೇಳಿದ್ದು, ಅವರು ದಯವಿಟ್ಟು ಕ್ಲೀನ್ ಮಾಡಲಿ ಎಂದರು ತಿಳಿಸಿದ್ದಾರೆ.

ಬೆಂಗಳೂರಿನ ಕಥೆ ಗೋವಿಂದ ಗೋವಿಂದ:
ಬೆಂಗಳೂರಿನ ಬ್ರ್ಯಾಂಡ್ ಹಾಳಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ತಂದುಕೊಟ್ಟಿದ್ದ ಘನತೆಯನ್ನು ಈ ಸರ್ಕಾರ ಹಾಳುಮಾಡಿದೆ. ಬೆಂಗಳೂರು ಸ್ಥಿತಿ ಗೋವಿಂದಾ ಗೋವಿಂದಾ ಗೋವಿಂದ ಎನ್ನುವಂತಾಗಿದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+