ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19; ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30.

ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ನೀಡಲಿದೆ. ಈ ಯೋಜನೆಗಾಗಿ ಅರ್ಹರಿಂದ ಅರ್ಜಿ ಕರೆಯಲಾಗಿದೆ.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸಿಗುವ 5 ಸೌಲಭ್ಯಗಳುವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸಿಗುವ 5 ಸೌಲಭ್ಯಗಳು

2022-23ನೇ ಸಾಲಿನಲ್ಲಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ವಾರ್ಷಿಕ 3.50 ಲಕ್ಷಗಳಂತೆ ಕೋರ್ಸ್‌ನ ಅವಧಿಗೆ ಗರಿಷ್ಠ 10 ಲಕ್ಷ ರೂ.ಗಳ ಸಾಲವನ್ನು ಶೇ 2ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.

 ಚುನಾವಣೆಗೂ ಮುನ್ನ ಒಕ್ಕಲಿಗ ಮತದ ಮೇಲೆ ದೃಷ್ಠಿ ನೆಟ್ಟರಾ ಡಿಕೆಶಿ-ಎಚ್ಡಿಕೆ? ಚುನಾವಣೆಗೂ ಮುನ್ನ ಒಕ್ಕಲಿಗ ಮತದ ಮೇಲೆ ದೃಷ್ಠಿ ನೆಟ್ಟರಾ ಡಿಕೆಶಿ-ಎಚ್ಡಿಕೆ?

Apply For Education Loan From Karnataka Vokkaliga Community Development Corporation

ಸಾಲ ಮಂಜೂರು ಮಾಡಲು ಸಮುದಾಯದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಬಯಸುವ ವಿದ್ಯಾರ್ಥಿಗಳು ನವೆಂಬರ್ 30ರೊಳಗಾಗಿ ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಒಕ್ಕಲಿಗ ಸಂಘದ ಚುನಾವಣೆ; ಚಿಕ್ಕಮಗಳೂರಲ್ಲಿ ಎ.ಪೂರ್ಣೇಶ್ ಗೆಲುವು ಒಕ್ಕಲಿಗ ಸಂಘದ ಚುನಾವಣೆ; ಚಿಕ್ಕಮಗಳೂರಲ್ಲಿ ಎ.ಪೂರ್ಣೇಶ್ ಗೆಲುವು

ಕೋರ್ಸ್‌ಗಳ ವಿವರ; ಸಾಲ ಪಡೆಯುವ ವಿದ್ಯಾರ್ಥಿಗಳು ಈ ಕೆಳಕಂಡ ಕೋರ್ಸ್‌ಗಳ ವ್ಯಾಸಂಗಕ್ಕೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಬೇಕು.

ಮಾಸ್ಟರ್ ಡಿಗ್ರಿ ಫಸ್ಟ್ ಕ್ಲಾಸ್ ಶೇ 60ರಷ್ಟು ಅಂಕ ಅಥವ ತತ್ಸಮಾನ ಗ್ರೇಡ್ ಬ್ಯಾಚುಲರ್ ಡಿಗ್ರಿ. ಪಿಎಚ್‌ಡಿ ಫಸ್ಟ್ ಕ್ಲಾಸ್ ಶೇ 60ರಷ್ಟು ಅಂಕ ಅಥವ ತತ್ಸಮಾನ ಗ್ರೇಡ್ ಇನ್ ಮಾಸ್ಟರ್ ಡಿಗ್ರಿ.
ಪೋಸ್ಟ್ ಡಾಕ್ಟರಲ್ ಫಸ್ಟ್ ಕ್ಲಾಸ್ ಶೇ 60ರಷ್ಟು ಅಂಕ ಅಥವ ತತ್ಸಮಾನ ಗ್ರೇಡ್ ಮಾಸ್ಟರ್ ಡಿಗ್ರಿ/ ಪಿಎಚ್‌ಡಿ.

ಹೆಚ್ಚಿನ ಮಾಹಿತಿಗಾಗಿ ನಿಗಮದ https://kvcdc.karnataka.gov.in ವೆಬ್‍ಸೈಟ್ ಅಥವಾ ನಿಗಮದ ದೂರವಾಣಿ ಸಂಖ್ಯೆ 0836-2957829 ಸಂಪರ್ಕಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Apply For Education Loan From Karnataka Vokkaliga Community Development Corporation

ಸೂಚನೆಗಳು; ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕೇವಲ world university rankings molecular courses ಗಳಲ್ಲಿ ಟಾಪ್ 50 ಕೋರ್ಸ್‌ಗಳಿಗೆ ಮಾತ್ರ ಸಾಲ ಸೌಲಭ್ಯ ನೀಡಲಾಗುತ್ತದೆ.

ಅರ್ಜಿಗಳನ್ನು ಸಲ್ಲಿಕೆ ಮಾಡುವ ವಿದ್ಯಾರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ರೂ. 3.50 ಲಕ್ಷಗಳ ಮಿತಿಯಲ್ಲಿರಬೇಕು.

ವಿದ್ಯಾರ್ಥಿಗೆ ಮಂಜೂರು ಮಾಡುವ ಸಾಲದ ಭದ್ರತೆಗೆ ಪೋಷಕರು/ ಜಮೀನುದಾರರು ಸ್ತಿರಾಸ್ಥಿ ಭದ್ರತೆಯನ್ನು ನೀಡಬೇಕು.

ವಿದ್ಯಾರ್ಥಿಗಳು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್‌ನಲ್ಲಿರುವಂತೆಯೇ ವಿದ್ಯಾರ್ಥಿಗಳ ಹೆಸರು ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮುತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು ನೋಂದಣಿಯಾಗಿರಬೇಕು.

ಈ ಯೋಜನೆಯಲ್ಲಿ ವಿದ್ಯಾರ್ಥಿಗಳು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಿಗಮದ https://kvcdc.karnataka.gov.in ವೆಬ್‍ಸೈಟ್ ಅಥವಾ ನಿಗಮದ ದೂರವಾಣಿ ಸಂಖ್ಯೆ 0836-2957829.

English summary
Karnataka Vokkaliga community development corporation invited applications for the education loan. Students can submit applications till November 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X