ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲಾ, ಊಬರ್ ಆಟೋ ಶೇ. 5ರ ದರ ನಿಗದಿ ಆದೇಶಕ್ಕೆ ತಡೆ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜನವರಿ 05; ಪರವಾನಗಿ ಹೊಂದಿರುವ ಆಪ್ ಆಧಾರಿತ ಸಾರಿಗೆ ಸೇವೆ ಒದಗಿಸುವ ಸಂಸ್ಥೆಗಳಿಗೆ ಶೇ.5ರ ದರ ನಿಗದಿ ಮಾಡಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಹೀಗಾಗಿ ಸಾರಿಗೆ ಇಲಾಖೆ ಹಾಗೂ ಆಟೋ ಸೇವೆ ನೀಡುವ ಕಂಪನಿಗಳ ನಡುವೆ ನಡೆಯುತ್ತಿದ್ದ ಜಟಾಪಟಿ ಸದ್ಯಕ್ಕೆ ಬಗೆಹರಿಯುವ ಸಾಧ್ಯತೆಗಳಿಲ್ಲ. ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ. 5 ಸೇವಾ ಶುಲ್ಕ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಿ ರಾಜ್ಯ ಸರ್ಕಾರ ಕಳೆದ ನ.25ಕ್ಕೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಓಲಾ, ಊಬರ್‌ ಆಟೋ ದರ ನಿಗದಿಗೆ ಸಾರಿಗೆ ಇಲಾಖೆ ಒಪ್ಪಿಗೆ ಓಲಾ, ಊಬರ್‌ ಆಟೋ ದರ ನಿಗದಿಗೆ ಸಾರಿಗೆ ಇಲಾಖೆ ಒಪ್ಪಿಗೆ

ಓಲಾ, ಉಬರ್‌ ಸೇರಿ ಸಾರಿಗೆ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಬುಧವಾರ ಮಧ್ಯಂತರ ಆದೇಶ ಕೊಟ್ಟಿದೆ. ಅರ್ಜಿಗಳ ಕುರಿತು ಕೋರ್ಟ್‌ ಮುಂದಿನ ದಿನಗಳಲ್ಲಿ ವಿಸ್ತೃತ ವಿಚಾರಣೆಯನ್ನು ನಡೆಸಲಿದೆ.

ಓಲಾ, ಉಬರ್ ಆಟೋ ಬಿಕ್ಕಟ್ಟು: ದರ ನಿಗದಿಓಲಾ, ಉಬರ್ ಆಟೋ ಬಿಕ್ಕಟ್ಟು: ದರ ನಿಗದಿ

ದರ ನಿಗದಿ ಕುರಿತಂತೆ ಕರ್ನಾಟಕ ಹೈಕೋರ್ಟ್‌ನಲ್ಲಿಆಕ್ಷೇಪಣೆ ಸಲ್ಲಿಸದೆ ಪ್ರಕರಣ ಮುಂದೂಡಿಕೆ ಮಾಡಿಕೊಂಡು ಬರುತ್ತಿದ್ದ ಸರಕಾರ ಕೊನೆಗೆ ನ.25ರಂದು ಜಿಎಸ್‌ಟಿ ಸೇರಿ ಶೇ.5ರಷ್ಟು ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿ ಅಯಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆದೇಶ ಹೊರಡಿಸಲು ನಿರ್ದೇಶನ ನೀಡಿತ್ತು.

ಓಲಾ, ಉಬರ್ ಆಟೋ ಬಿಕ್ಕಟ್ಟು: ಸದ್ಯಕ್ಕೆ ಬಗೆಹರಿಯುವುದು ಡೌಟು!ಓಲಾ, ಉಬರ್ ಆಟೋ ಬಿಕ್ಕಟ್ಟು: ಸದ್ಯಕ್ಕೆ ಬಗೆಹರಿಯುವುದು ಡೌಟು!

ಇದಕ್ಕೆ ತಕರಾರು ಎತ್ತಿದ್ದ ಕಂಪನಿಗಳು ಶೇ. 5ರಷ್ಟು ದರ ಹೆಚ್ಚಳ ನಿಗದಿಯಿಂದ ಸಾರಿಗೆ ಸೇವೆ ನೀಡಲಾಗದು. ಮೊದಲೇ ಸಂಕಷ್ಟದಲ್ಲಿರುವ ಕಂಪನಿಗಳು ಇನ್ನು ಹೆಚ್ಚು ನಷ್ಟಕ್ಕೆ ಒಳಗಾಗಲಿವೆ. ಹಾಗಾಗಿ ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕೆಂದು ಕೋರಿದ್ದವು.

ಆಟೋ ಸೇವೆ ನೀಡುವ ಕಂಪನಿಗಳ ತರಕಾರು

ಆಟೋ ಸೇವೆ ನೀಡುವ ಕಂಪನಿಗಳ ತರಕಾರು

ದರ ನಿಗದಿ ಕುರಿತಂತೆ ಕರ್ನಾಟಕ ಹೈಕೋರ್ಟ್‌ನಲ್ಲಿಆಕ್ಷೇಪಣೆ ಸಲ್ಲಿಸದೆ ಪ್ರಕರಣ ಮುಂದೂಡಿಕೆ ಮಾಡಿಕೊಂಡು ಬರುತ್ತಿದ್ದ ಸರಕಾರ ಕೊನೆಗೆ ನ.25ರಂದು ಜಿಎಸ್‌ಟಿ ಸೇರಿ ಶೇ.5ರಷ್ಟು ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿ ಅಯಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆದೇಶ ಹೊರಡಿಸಲು ನಿರ್ದೇಶನ ನೀಡಿತ್ತು.

ಇದಕ್ಕೆ ತಕರಾರು ಎತ್ತಿದ್ದ ಕಂಪನಿಗಳು ಶೇ. 5ರಷ್ಟು ದರ ಹೆಚ್ಚಳ ನಿಗದಿಯಿಂದ ಸಾರಿಗೆ ಸೇವೆ ನೀಡಲಾಗದು. ಮೊದಲೇ ಸಂಕಷ್ಟದಲ್ಲಿರುವ ಕಂಪನಿಗಳು ಇನ್ನು ಹೆಚ್ಚು ನಷ್ಟಕ್ಕೆ ಒಳಗಾಗಲಿವೆ. ಹಾಗಾಗಿ ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕೆಂದು ಕೋರಿದ್ದವು.

ಸಹಮತದ ತೀರ್ಮಾನಕ್ಕೆ ಸಲಹೆ

ಸಹಮತದ ತೀರ್ಮಾನಕ್ಕೆ ಸಲಹೆ

ಇದಕ್ಕೂ ಮುನ್ನ ನ್ಯಾಯಾಲಯ ಆಪ್‌ ಆಧಾರಿತ ಆಟೋರಿಕ್ಷಾಗೆ ಸೇವೆಗೆ ನ್ಯಾಯಯುತ ದರ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸೇವೆ ನೀಡುತ್ತಿರುವ ಓಲಾ ಮತ್ತು ಉಬ್‌ ಕಂಪನಿಗಳೊಂದಿಗೆ ಸಭೆ ನಡೆಸಿ ಜನರಿಗೆ ಅನುಕೂಲವಾಗುವಂತಹ ಸಹಮತದ ತೀರ್ಮಾನ ಕೈಗೊಳ್ಳಬೇಕೆಂದು ನಿರ್ದೇಶಿಸಿತ್ತು.

ಸಹಮತ ಸಾಧಿಸುವರೆಗೂ ಕಂಪನಿಗಳು ಸಹ ಹೆಚ್ಚುವರಿ ದರ ವಿಧಿಸುವಂತಿಲ್ಲ. ಅರ್ಜಿದಾರ ಕಂಪನಿಗಳ ವಿರುದ್ಧ ಬಲವಂತದ ಕ್ರಮ ಜರುಗಿಸುವುದಿಲ್ಲಎಂಬ ಭರವಸೆಯನ್ನು ರಾಜ್ಯ ಸರ್ಕಾರ ನ್ಯಾಯಪೀಠಕ್ಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದರ ನಿಗದಿಗಾಗಿ ಜಟಾಪಟಿ

ದರ ನಿಗದಿಗಾಗಿ ಜಟಾಪಟಿ

ಆಟೋ ಸೇವೆ ನೀಡುವ ಓಲಾ, ಊಬರ್ ಕಂಪನಿಗಳು ದರ ನಿಗದಿ ವಿಚಾರದಲ್ಲಿ ಸರ್ಕಾರದ ಜೊತೆ ಜಟಾಪಟಿ ನಡೆಸಿದ್ದವು.
ಸಾರಿಗೆ ಇಲಾಖೆ ದರ ನಿಗದಿ ಕುರಿತು ಆದೇಶ ಹೊರಡಿಸಿತ್ತು. ಮೋಟಾರು ವಾಹನಗಳ ಅಧಿನಿಯಮ, 1988 (ಕೇಂದ್ರ ಅಧಿನಿಯಮ ಸಂಖ್ಯೆ 59/1988) ರ ಕಲಂ 67 ರ ಉಪಕಲಂ (1)i)ರಡಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಮಧ್ಯಂತರ ಆದೇಶದನ್ವಯ ಈ ಆದೇಶ ಹೊರಡಿಸಲಾಗಿತ್ತು.

ಅಗ್ರಿಗೇಟರ್ ನಿಯಮದ ಅಡಿಯಲ್ಲಿ ಅಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸುವ ಸಂಸ್ಥೆಗಳಿಗೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣದರಗಳಿಗೆ ಅನ್ವಯಿಸುವ ಜಿಎಸ್‌ಟಿ ತೆರಿಗೆಯನ್ನು ಪ್ರಾಧಿಕಾರ ಮತ್ತು ಸರ್ಕಾರವು ಪರಿಗಣಿಸಿ ಆದೇಶವನ್ನು ಪ್ರಕಟಿಸಲಾಗಿತ್ತು.

ಹೈಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ

ಹೈಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ

ಆಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಲೈಸೆನ್ಸ್ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣದರಗಳ ಮೇಲೆ ಶೇ 5ರಷ್ಟು ಸೇವಾಶುಲ್ಕ ಅನ್ವಯಿಸುವ ಜಿಎಸ್‌ಟಿ ತೆರಿಗೆಯನ್ನು ಸೇರಿಸಿ ಅಂತಿಮ ಪ್ರಯಾಣದರ ನಿಗದಿಪಡಿಸಲು ಕರ್ನಾಟಕ ರಾಜ್ಯದ ಎಲ್ಲಾ ಸಾರಿಗೆ ಪ್ರಾಧಿಕಾರಗಳಿಗೆ ಈ ಮೂಲಕ ನಿರ್ದೇಶನ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಕರ್ನಾಟಕ ಹೈಕೋರ್ಟ್‌ನಲ್ಲಿಯೂ ಈ ಕುರಿತು ಅರ್ಜಿ ಸಲ್ಲಿಕೆಯಾಗಿತ್ತು. ಆದ್ದರಿಂದ ಆಟೋ ಸೇವೆ ನೀಡುವ ಕಂಪನಿಗಳು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮತ್ತೊಂದು ಅರ್ಜಿಯನ್ನು ಸಲ್ಲಿಕೆ ಮಾಡಿದವು.

English summary
Karnataka high court on placed an interim stay for the Karnataka government order on capping service charge at 5 per cent for app-based aggregators offering auto service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X