Get Updates
Get notified of breaking news, exclusive insights, and must-see stories!

ಜೂನ್ 2ನೇ ವಾರದಿಂದ ಅಪೋಲೋ ಆಸ್ಪತ್ರೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆ

ಬೆಂಗಳೂರು, ಮೇ 27: ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆ ವಿತರಣೆ ಆರಂಭಿಸುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆಯನ್ನು ಜೂನ್ ಎರಡನೇ ವಾರದಿಂದ ವಿತರಿಸುವುದಾಗಿ ಅಪೋಲೋ ಆಪೋಲೋ ಆಸ್ಪತ್ರೆ ಘೋಷಿಸಿದೆ.

"ದೇಶದಲ್ಲಿ ಅನುಮೋದನೆ ಪಡೆದಿರುವ ಕೊರೊನಾವೈರಸ್ ಸೋಂಕಿನ ಮೂರನೇ ಲಸಿಕೆಯ ವಿತರಣೆ ಪ್ರಕ್ರಿಯೆ ಜೂನ್ ಎರಡನೇ ವಾರದಿಂದ ಆರಂಭವಾಗಲಿದೆ. ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವ ಮೊದಲು ಯಾರೊಬ್ಬರೂ ಸುರಕ್ಷಿತರು ಎಂದು ನಂಬುವುದಕ್ಕೆ ಸಾಧ್ಯವಿಲ್ಲ" ಎಂದು ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ ನ ಎಕ್ಸಿಕ್ಯೂಟಿವ್ ವೈಸ್-ಚೇರ್ ಮನ್ ಶೋಭನಾ ಕಾಮಿನೇನಿ ತಿಳಿಸಿದ್ದಾರೆ.

ಭಾರತದಾದ್ಯಂತ ಅಪೋಲೋ ಆಸ್ಪತ್ರೆಯ 80 ಕೇಂದ್ರಗಳಲ್ಲಿ 10 ಲಕ್ಷ ಜನರಿಗೆ ಸ್ಪುಟ್ನಿಕ್-ವಿ ಲಸಿಕೆಯನ್ನು ವಿತರಿಸುವ ಗುರಿ ಹೊಂದಲಾಗಿದೆ. ಮೊದಲ ಶ್ರೇಣಿ ಕಾರ್ಮಿಕರು, ಕಾರ್ಪೋರೇಟ್ ಉದ್ಯೋಗಿಗಳು ಮತ್ತು ಆದ್ಯತೆ ವಲಯವನ್ನು ಗುರುತಿಸಿ ಲಸಿಕೆ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Apollo Hospitals Will Start Administering Sputnik-V Vaccine From 2nd Week Of June; Minister Sudhakar Tweet

ಲಸಿಕೆ ವಿತರಣೆ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಟ್ವೀಟ್:

"ಜೂನ್ ಎರಡನೇ ವಾರದಿಂದ ಅಪೋಲೋ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ವಿತರಿಸುವುದಕ್ಕೆ ಆರಂಭಿಸಲಾಗುತ್ತಿದೆ. ಪ್ರತಿನಿತ್ಯ 1 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಜುಲೈ ವೇಳೆಗೆ ಈ ಸಂಖ್ಯೆಯನ್ನು ಡಬಲ್ ಮಾಡಲಾಗುವುದು. ಸಪ್ಟೆಂಬರ್ ವೇಳೆಗೆ 2 ಕೋಟಿ ಜನರಿಗೆ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವ ಗುರಿಯನ್ನು ಹೊಂದಲಾಗಿದೆ" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಸಪ್ಟೆಂಬರ್ 2021ರ ವೇಳೆಗೆ 2 ಕೋಟಿ ಲಸಿಕೆ ವಿತರಣೆ:

ಖಾಸಗಿ ವಲಯದ ಬೃಹತ್ ಲಸಿಕೆ ವಿತರಣಾ ಸಂಸ್ಥೆಯು ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಕೈ ಜೋಡಿಸುವುದಾಗಿ ತಿಳಿಸಿದೆ. ಮೊದಲ 10 ಲಕ್ಷ ಜನರಿಗೆ ಲಸಿಕೆ ನೀಡುವುದಕ್ಕೆ 3 ವಾರಗಳನ್ನು ತೆಗೆದುಕೊಳ್ಳಲಾಗುವುದು. ಜೂನ್ ತಿಂಗಳಿನಲ್ಲಿ ಪ್ರತಿವಾರ 10 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು. ಜುಲೈ ವೇಳೆಗೆ ಈ ಸಂಖ್ಯೆಯನ್ನು ಇಮ್ಮಡಿಕೊಳಿಸಲಾಗುವುದು. ಸಪ್ಟೆಂಬರ್ ತಿಂಗಳ ವೇಳೆಗೆ 2 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ ನ ಎಕ್ಸಿಕ್ಯೂಟಿವ್ ವೈಸ್-ಚೇರ್ ಮನ್ ಶೋಭನಾ ಕಾಮಿನೇನಿ ತಿಳಿಸಿದ್ದಾರೆ.

ದೇಶದಲ್ಲಿ ಅನುಮೋದನೆ ಪಡೆದ 2 ಲಸಿಕೆಗಳು:

ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+