'ಕೊಲೆ ಬೆದರಿಕೆ ಹಾಕ್ತೀರಾ? ದೆವ್ವವಾಗಿ ಬಂದು ಕಾಡ್ತೀನಿ'

Posted By:
Subscribe to Oneindia Kannada

ಬೆಂಗಳೂರು, ಜೂನ್ 08 : ಕೂಡ್ಲಿಗಿ ಉಪವಿಭಾಗದ ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ ನೀಡಿದ್ದು ಏಕೆ? ಎಂಬುದು ಇನ್ನೂ ಬಹಿರಂಗವಾಗಿಲ್ಲ. ಅನುಪಮಾ ಅವರು ಫೇಸ್‌ಬುಕ್‌ನಲ್ಲಿ ಸಚಿವ ಪರಮೇಶ್ವರ ನಾಯಕ್ ಅವರ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಸರಣಿ ಸ್ಟೇಟಸ್‌ಗಳನ್ನು ಹಾಕುತ್ತಿದ್ದಾರೆ.

ಬುಧವಾರ ಬೆಳಗ್ಗೆ ಅನುಪಮಾ ಅವರು, 'CD ಬಿಡುಗಡೆ ಮಾಡ್ತೀನಿ ಅಂದ್ರೆ ಕೊಲೆ ಬೆದರಿಕೆ ಹಾಕ್ತೀರಾ?! ದೆವ್ವವಾಗಿ ಬಂದು ಕಾಡ್ತೀನಿ' ಎಂದು ಸ್ಟೇಟಸ್ ಹಾಕಿದ್ದಾರೆ. ಈ ಸ್ಟೇಟಸ್ ಅನುಪಮಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು ಯಾರು? ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಬೆದರಿಕೆ ಹಾಕಿದವರು ಯಾರು? ಎಂದು ಅನುಪಮಾ ಅವರು ಹೇಳಿಲ್ಲ. [ಈಸಬೇಕು ಇದ್ದು ಜಯಿಸಬೇಕು ಅನುಪಮಾ ಶೆಣೈ ಮೇಡಂ]

anupama shenoy

ಜೂನ್ 4ರ ಶನಿವಾರ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದಾರೆ. ನಂತರ ಅವರು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಯಾವ ಮಾಧ್ಯಮಗಳ ಜೊತೆಯೂ ಮಾತನಾಡಿಲ್ಲ. ಆದರೆ, ಫೇಸ್‌ಬುಕ್‌ನಲ್ಲಿ ಸರ್ಕಾರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ['ಪರಮೇಶ್ವರ ನಾಯ್ಕರೇ ನಿಮ್ಮ ರಾಜೀನಾಮೆ ಯಾವಾಗ?']

ಈ ನಡುವೆ ಅನುಪಮಾ ಶೆಣೈ ಅವರ ಮನವೊಲಿಸಲು ಗೃಹ ಇಲಾಖೆ ಮುಂದಾಗಿದೆ. ಅನುಪಮಾ ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಜಿಪಿಗೆ ಸೂಚಿಸಿದ್ದಾರೆ. ಡಿಜಿಪಿ ಓಂಪ್ರಕಾಶ್ ಅವರು ಬಳ್ಳಾರಿ ಎಸ್ಪಿ ಮೂಲಕ ಅನುಪಮಾ ಅವರ ಮನವೊಲಿಕೆಗೆ ಮುಂದಾಗಿದ್ದಾರೆ. [ಪರಮೇಶಿಪ್ರೇಮ ಪ್ರಸಂಗ... ಸಿಡಿ ಬೇಕೆ, ಆಡಿಯೋ ಬೇಕೆ?]

ಅನುಪಮಾ ಅವರ ಸ್ಟೇಟಸ್

-
-
-
-
-

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಓಂಪ್ರಕಾಶ್ ಅವರು, ' ಅನುಪಮಾ ಅವರ ರಾಜೀನಾಮೆ ಅರ್ಜಿಯನ್ನು ಪರಿಶೀಲಿಸಿದ್ದೇನೆ. ಅವರ ಜತೆ ಮಾತುಕತೆ ನಡೆಸಿ, ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಲು ಬಳ್ಳಾರಿ ಎಸ್ಪಿ ಆರ್.ಚೇತನ್ ಅವರಿಗೆ ನಿರ್ದೇಶಿಸಿದ್ದೇನೆ' ಎಂದು ಹೇಳಿದ್ದಾರೆ. [ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kudligi DYSP Anupama Shenoy continued social media war against Ballari district in-charge Minister P.T. Parameshwar Naik. Here are the top 5 facebook statuses.
Please Wait while comments are loading...