Get Updates
Get notified of breaking news, exclusive insights, and must-see stories!

AI ಜಮಾನಕ್ಕೆ ಮಕ್ಕಳನ್ನು ಸಜ್ಜುಗೊಳಿಸೋಣ, ಭವಿಷ್ಯವಂತೂ ಹೀಗಿರಲ್ಲ ನೋಡಿ: ಡಾ ರೂಪಾ ರಾವ್ ಬರಹ

ಒಂದು ವರ್ಷದ ಒಳಗೆ ಸಾಫ್ಟ್‌ವೇರ್ ಎಂಜಿನಿಯರಿಂಗ್ ನಾವು ತಿಳಿದಿರುವ ರೀತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಒಳಗಾಗಬಹುದು ಎಂದು ಬಹಿರಂಗವಾಗಿ ಹೇಳಿದ್ದರೆ. ಅದೇ ಸಮಯದಲ್ಲಿ, Zoho ಸಂಸ್ಥೆಯ ಸಂಸ್ಥಾಪಕ ಶ್ರಿಧರ್ ವೆಂಬು ಅವರು, ಕೋಡಿಂಗ್ ಮತ್ತು ಐಟಿ ಕ್ಷೇತ್ರದಲ್ಲಿ ಇರುವ ಅನೇಕರು ಭಾರಿ ಅಸ್ತವ್ಯಸ್ತತೆಗೆ ಮಾನಸಿಕವಾಗಿ ಸಿದ್ಧರಾಗಬೇಕು ಅವಶ್ಯಕವಾದರೆ ಪರ್ಯಾಯ ಜೀವನೋಪಾಯಗಳ ಬಗ್ಗೆ ಕೂಡ ಯೋಚಿಸಬೇಕು ಎಂದು ಎಚ್ಚರಿಸಿದ್ದಾರೆ.(ಬರಹ: ಡಾ ರೂಪಾ ರಾವ್)

ಈ ಹೇಳಿಕೆಗಳು ಒಂದು ದೊಡ್ಡ ಜಾಗತಿಕ ಹಾಗು ಔದ್ಯೋಗಿಕ , ಸಾಮಾಜಿಕ ಬದಲಾವಣೆಯನ್ನು ಸೂಚಿಸುತ್ತಿವೆ, ಈ ಹಂತದಲ್ಲಿ ಭಾರತದ ಐಟಿ ಪರಿಸರವು ಔಟ್‌ಸೋರ್ಸಿಂಗ್, ಬಿಲ್ಲೆಬಲ್ ಅವರ್ಸ್, ಪುನರಾವರ್ತಿತ, ವಿಸ್ತರಿಸಬಹುದಾದ ಕೆಲಸ‌ಗಳ‌ ಔದ್ಯೋಗಿಕ ಕ್ಷೇತ್ರವನ್ನು ಹೆಚ್ಙು ಅವಲಂಬಿಸಿದೆ. ಆದರೆ AI ನೇರವಾಗಿ ಈ ಮಾದರಿಯನ್ನೇ ಹೊಡೆದು ಬೀಳಿಸುತ್ತದೆ ಎಂದು ಬಹಳಷ್ಟು ಉದ್ಯೋಗ ರಂಗದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

AI Disruption in IT Jobs

ಇದರಿಂದ ಎಲ್ಲರೂ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದಲ್ಲವಾದರೂ ಸಾಂಪ್ರದಾಯಿಕ ಕೆಲಸಗಳು ಕಡಿಮೆಯಾಗಿ, ಸಾಮಾಜಿಕ ಅಸ್ಥಿರತೆ ಹೆಚ್ಚುತ್ತದೆ ಪಾತ್ರ ಬದಲಾವಣೆಗಳು ಹೆಚ್ಚುತ್ತವೆ, ಮರುಆವಿಷ್ಕಾರ ಅನಿವಾರ್ಯವಾಗುತ್ತದೆ. ಇದು ಸಹಜವಾಗಿಯೇ‌ ಅನೇಕ ಕುಟುಂಬಗಳಿಗೆ, ವಿಶೇಷವಾಗಿ ನಗರ ಮಧ್ಯಮ ವರ್ಗದ ಐಟಿ ಹಾಗು ಅದರ ಮೇಲೆ ಡಿಪೆಂಡ್ ಆಗಿರುವ ವರಮಾನದ ಕುಟುಂಬಗಳಿಗೆ, ಆರ್ಥಿಕ ಅನಿಶ್ಚಿತತೆ ಮತ್ತು ಮಾನಸಿಕ ಒತ್ತಡ ಉಂಟುಮಾಡಬಹುದು, ಇದು ಬಹುತೇಕ ಚರ್ಚಿತವಾಗುತ್ತಿರುವ ವಿಷಯ. ಆದರೆ ಈ ಚರ್ಚೆಯಲ್ಲಿ ಮಿಸ್ ಆಗುತ್ತಿರುವ ಒಂದು ಮಹತ್ತರ ವಿಷಯ ಈ ಸ್ಥಿತ್ಯಂತರಕ್ಕೆ (ಟ್ರಾನ್ಸಿಷನ್) ಈಗಿನ ಜನರೇಷನ್ನಿನ ಮಕ್ಕಳು‌ ಹಾಗೂ ಹದಿಹರೆಯದವರು ಹೇಗೆ ಅಡಾಪ್ಟ್ ಆಗಬಲ್ಲರು ಅನ್ನುವುದು. ಅಂದ ಹಾಗೆ ಈ ಕಾಳಜಿ ಯಾಕೆ ಅಂದುಕೊಂಡಿರಾ?

ಈ ಪೀಳಿಗೆಯ ಪೋಷಕರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಕೋಡಿಂಗ್ ಮೇಲೆ ಅವಲಂಬಿತರಾಗಿರುವವರು ಟೆಕ್ ಆಧಾರಿತ ಉದ್ಯೋಗಗಳ ಮೇಲೆ ನಂಬಿಕೆ ಇಟ್ಟಿರುವವರು, ಇವರು ತಮ್ಮ‌ಮಕ್ಕಳಿಗೆ ಅತ್ಯಾಧುನಿಕ ಸೌಕರ್ಯ, ಅತಿ ಮುದ್ದು, ಬೇಕಾದ್ದನ್ನು ಕೊಡಿಸಿ, ಬಾಲ್ಯದಿಂದಲೇ ಸ್ಕ್ರೀನ್ ಕೊಟ್ಟು ಅಡಿಕ್ಷನ್‌ಗೆ ಕಳಿಸಿರುವವರು. ಆದರೆ ಮುಂದೆ ಆರ್ಥಿಕ ಅನಿಶ್ಚಿತತೆ ಮತ್ತು ಒತ್ತಡ ಎದುರಿಸುವವರೂ ಇವರೇ.

AI Disruption in IT Jobs

ಇನ್ನು ಅವರ ಮಕ್ಕಳು Gen Alpha ಮತ್ತು ಅದಕ್ಕೂ ಸ್ವಲ್ಪ ಮುಂಚೆ ಜನಿಸಿದ ಮಕ್ಕಳು ಇವರಿಗೆ ನಿರಂತರ ಉದ್ಧೀಪನ (stimulation) ಬಯಸುವವರು, ವೇಗದ ಪರದೆಗಳು, ತಕ್ಷಣದ ರಿವಾರ್ಡ್ ಬೇಕು, impulsiveness, ಅಸಹನಶೀಲತೆ ಕಡಿಮೆಯಾದ ಗಮನಾವಧಿ ಕಾಯುವ ಸಾಮರ್ಥ್ಯದ ಕೊರತೆ ಭಾವನಾತ್ಮಕ ಅಸ್ಥಿರತೆ ಇವು ಈಗಿನ ಮಕ್ಕಳಲ್ಲಿ ಬಹುತೇಕರಿಗೆ ಕಾಡುತ್ತಿರುವ ಸಮಸ್ಯೆಗಳು. ಈ ರೀತಿ ಬೆಳೆದ ಮಕ್ಕಳಿಗೆ ಮುಂದೆ ಕಷ್ಟವಾಗುವ ಸಾಧ್ಯತೆ ಹೆಚ್ಚು ಏಕೆ ಎಂದರೆ, ಅವರ demands ಜಾಸ್ತಿ, ಆದರೆ ಅವುಗಳನ್ನು ನಿಭಾಯಿಸುವ ಸಾಮರ್ಥ್ಯ ಕಲಿತಿಲ್ಲ.

ಎಷ್ಟೊ ಮಕ್ಕಳಿಗೆ ಮನೆಯ ಕೆಲಸ ಮಾಡುವ ಅಭ್ಯಾಸವೇ ಇಲ್ಲ, ಕಷ್ಟಪಟ್ಟು ಮಾಡುವ ಕೆಲಸದ ಅನುಭವವೇ ಇಲ್ಲ "ಇದು ನನ್ನ ಜವಾಬ್ದಾರಿ" ಎಂದು ಹಿಡಿದುಕೊಳ್ಳುವ ಮನಸ್ಥಿತಿ ಇಲ್ಲ ಅಟೆನ್ಷನ್ ಸ್ಪಾನ್ ಕಡಿಮೆ ಆದ್ದರಿಂದ, ಒಂದು ಕೆಲಸಕ್ಕೆ ಬದ್ಧರಾಗಿರುವ (commitment) ಶಕ್ತಿ ಕಡಿಮೆಯಾಗುತ್ತಿದೆ.

ಏನೋ ಒಂದು ಇಷ್ಟವಾಗದಿದ್ದರೆ ಬಿಡುವುದು, ತಕ್ಷಣ ಫಲಿತಾಂಶ ಕಾಣದಿದ್ದರೆ ಕೈಬಿಡುವುದು, ಸ್ವಲ್ಪ ಬೇಸರ ಬಂದರೆ ಹಿಂದೆ ಸರಿಯುವುದು ಇವೆಲ್ಲಾ ಈಗ ಸಾಮಾನ್ಯವಾಗಿವೆ. ಈಗ ಐಟಿ, ಟೆಕ್, ಕೋಡಿಂಗ್ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ಪೋಷಕರಿಗೆ ಈಗಾಗಲೇ ಉದ್ಯೋಗ ಭದ್ರತೆಯ ಬಗ್ಗೆ ಆತಂಕ ಆದಾಯ ಕಡಿಮೆಯಾಗುವ ಭೀತಿ, ಜೀವನಶೈಲಿಯನ್ನು ಬದಲಾಯಿಸಬೇಕಾದ ಪರಿಸ್ಥಿತಿಯ ಅರಿವು ಇದೆ‌. ಪೋಷಕರಿಗೆ ಈ ಬದಲಾವಣೆ ಅಷ್ಟು ದೊಡ್ಡ ತೊಂದರೆ ಆಗಲಿಕ್ಕಿಲ್ಲ ಆದರೆ ಅವರ ಮಕ್ಕಳ ಡಿಮ್ಯಾಂಡ್ ಅದೇ ಜೀವನಶೈಲಿಯಲ್ಲೇ ಇರುತ್ತೆ. ಇಲ್ಲಿಯೇ ನಿಜವಾದ ಘರ್ಷಣೆ ಶುರುವಾಗುತ್ತದೆ. ಇಷ್ಟಕ್ಕೇ ನಿಲ್ಲುವುದಿಲ್ಲ‌ ಮುಂದೆ, ಈ ಮಕ್ಕಳು ಉದ್ಯೋಗರಂಗಕ್ಕೆ‌ ಹೋಗುವಾಗ ಕಂಫರ್ಟ್‌ ಕಡಿಮೆ‌, ಜಾಸ್ತಿ ಶ್ರಮ ಕೇಳುವ ಸಾಧ್ಯತೆಗಳಿರುವ ಹುದ್ದೆ ಸಿಗಬಹುದು. ಗಳಿಕೆಗಿಂತ ಜವಾಬ್ದಾರಿ ಜಾಸ್ತಿ ಇರುತ್ತೆ ಬಹುಶಃ ಕೆಲಸದ ವೇಗಕ್ಕಿಂತ ಅದರಲ್ಲಿ ಸ್ಥಿರತೆ ಬೇಕಾಗುತ್ತದೆ , "ನಾನು ಕಲಿಯುತ್ತೇನೆ" ಎನ್ನುವ ಮನಸ್ಥಿತಿ ಅಗತ್ಯವಾಗುತ್ತದೆ.

ಇಲ್ಲಿ ಮಾನವನಿಗೆ ಮಾತ್ರ ಇರುವ ಕೌಶಲ್ಯಗಳು ಅತ್ಯಂತ ಮುಖ್ಯವಾಗುತ್ತವೆ

ಕೆಲಸಕ್ಕೆ ಶ್ರದ್ದೆ, ಸಹನೆ, ಜವಾಬ್ದಾರಿ, ತಂಡದ ಜೊತೆ ಹೊಂದಿಕೊಳ್ಳುವಿಕೆ ಒತ್ತಡದಲ್ಲಿ ಕೆಲಸ ಮಾಡುವ ಶಕ್ತಿ, ದೈಹಿಕ ಶ್ರಮ‌ಬೇಡುವ ಕೆಲಸಗಳು. ಆದರೆ ಲಕ್ಸುರಿಯಿಂದ ಬೆಳೆದ ಮಕ್ಕಳಿಗೆ, ಸರಳತೆಯಲ್ಲಿ ಬದುಕುವುದು ಮತ್ತು ಕೆಲಸ ಮಾಡುವುದು ಮಾನಸಿಕವಾಗಿ ಕಷ್ಟವಾಗಬಹುದು.

ಇದು ಅಸಲಿ ಸವಾಲು

ಲಕ್ಸುರಿಯಿಂದ ಸರಳತೆಗೆ ಬರುವ ಬದಲಾವಣೆ,ಆರಾಮದಿಂದ ಶ್ರಮದ ಕಡೆಗೆ ನಡೆಯುವ ಪಥ, ಬಯಕೆಯಿಂದ ಹೊಣೆಗಾರಿಕೆಯ ಕಡೆಗೆ ಸಾಗುವ ಪ್ರಯಾಣ ಇವೆಲ್ಲವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಅವರ ಮುಂದಿನ ಬದುಕನ್ನು ನಿರ್ಧರಿಸುತ್ತದೆ.

ಹಾಗಾದರೆ ಪೋಷಕರು ಈಗ ಏನು ಮಾಡಬೇಕು?

1. ಕೆಲಸ ಮಾಡುವುದು ಸಹಜವಾಗುವಂತೆ ಮಾಡುವುದು
2. ಕಾಯುವುದನ್ನು ಕಲಿಸುವುದು
3. ಬದ್ಧತೆ (ಕಮಿಟ್‌ಮೆಂಟ್) ಎಂದರೇನು ಅನ್ನೋದನ್ನು ಅನುಭವಿಸಲು ಬಿಡುವುದು
4. ಸರಳತೆಯಲ್ಲೂ ಬದುಕಬಹುದು ಅನ್ನೋದನ್ನು ತಿಳಿಸುವುದು
5. ನಿದ್ರೆ ಮತ್ತು ದೈನಂದಿನ ಲಯವನ್ನು ವೇಗದ ಜಗತ್ತಿನಿಂದ ಸ್ಲೋ ಡೌನ್‌ಗೆ ತರುವುದು
6. ದೈಹಿಕ ಆಟಕ್ಕೆ ಆದ್ಯತೆ ನೀಡುವುದು
7. ಬೋರ್ ಆದಾಗ ತಕ್ಷಣ ಪರದೆ ಕೊಡುವುದನ್ನು ತಪ್ಪಿಸುವುದು
8. ನಿಧಾನವಾಗಿ, ಶ್ರಮ ಬೇಡುವ ಚಟುವಟಿಕೆಗಳನ್ನು ಪರಿಚಯಿಸುವುದು
9. ಫಲಿತಾಂಶಕ್ಕಿಂತ ನಿರಂತರ ಪ್ರಯತ್ನಕ್ಕೆ ಮೌಲ್ಯ ನೀಡುವುದು
10. ಬೇಸರವನ್ನು ಸಹಿಸಬಹುದೆಂಬುದನ್ನು ಮಕ್ಕಳಿಗೆ ಕಲಿಸುವುದು.

ಒಂದು ವಿಷಯ

ಜಗತ್ತು ಇನ್ನಷ್ಟು ವೇಗವಾಗುತ್ತಲೇ ಹೋಗುತ್ತದೆ. ಉದ್ಯೋಗಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ. ಕಡಿಮೆ‌ ಆಗುತ್ತವೆ, ಇನ್ನೂ ಸಂಕಷ್ಟಗಳು ಬರುತ್ತವೆ AI ಮುಂದುವರಿಯುತ್ತಲೇ ಇರುತ್ತದೆ. ಬಹಳಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಬದಲಾವಣೆ ನಿರಂತರ ಇಲ್ಲಿ ಹೋರಾಡಿ ಬದುಕಿ ಉಳಿಯಲು ಬೇಕಿರುವುದು ಬದುಕಿಗಾಗಿ ಹೋರಾಟ ಮಾಡುವ ಶಕ್ತಿ ಆ ಶಕ್ತಿ ಗಳಿಸಿ ಉಳಿಸಿಕೊಳ್ಳುವುದೇ ಈಗಿನ ಮಕ್ಕಳ ಸವಾಲು ಆ ಸವಾಲನ್ನು ಎದುರಿಸಲು ಬೇಕಾಗಿರುವುದು ತಾಳ್ಮೆ ಕಾಯುವಿಕೆ, ನಿರಂತರವಾಗಿ ಪ್ರಯತ್ನ, ಸಹನೆ ಹಾಗು ಶ್ರಮ ವಹಿಸಿ ಗಳಿಸುವುದು.

ಇವುಗಳನ್ನು ಕಲಿತ ಮಕ್ಕಳು ಎಂದೆಂದಿಗೂ ಹಿಂದೆ ಬೀಳುವುದಿಲ್ಲ. ಮುಂದಿನ AI ಭವಿಷ್ಯದಲ್ಲಿ, ಆಂತರಿಕ ಸ್ಥಿರತೆಯೇ ನಿಜವಾದ ಶಕ್ತಿ.

ಇನ್ನು ಮೇಲೆ ಆ ಸಿದ್ಧತೆ ಕೋಡಿಂಗ್ ಅಥವಾ ರೋಬಾಟಿಕ್ ತಂತ್ರಜ್ಞಾನದಿಂದ ಶುರು ಆಗಬಾರದು, ಅದು ಮನುಷ್ಯರೊಂದಿಗೆ ಕೈ‌ಕೆಸರಾಗಿಸಿ ಬಾಯಿ‌ಮೊಸರು ಪಡೆಯಬೇಕನ್ನುವ ಬೇಸಿಕ್ ಅನುಭವದ ಅರಿವಿನೊಂದಿಗೆ ಆರಂಭವಾಗಬೇಕು .

ಪೋಷಕರೇ ಗಮನಿಸಿ ನಿಮ್ಮ ಮಗು ಸದಾ ಮೊಬೈಲ್ ಹಿಡಿದಿರುತ್ತೆ, ಮೊಬೈಲ್ ಗಾಗಿ ಹಟ ಮಾಡುತ್ತೆ, ಗೇಮಿಂಗ್ ವ್ಯಸನದ ಗೀಳಿನ ಅಪಾಯದಲ್ಲಿದೆ ಎನಿಸಿದರೆ ನಿರ್ಲಕ್ಷಿಸಬೇಡಿ. ನಿಮ್ಮ ಹತ್ತಿರದ ಆಪ್ತಸಮಾಲೋಚಕರ ನೆರವು ಪಡೆಯಿರಿ. ಡಾ ರೂಪಾ ರಾವ್ ಅವರ ಸಂಪರ್ಕ ಸಂಖ್ಯೆ: 97408 66990.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+