ಹೊಸ ರಾಜಕೀಯ ಪಕ್ಷ ಘೋಷಿಸಿದ ಸಿಎಂ ಇಬ್ರಾಹಿಂ; ಯಾವ್ಯಾವ ಪಕ್ಷದ ನಾಯಕರು ಇಬ್ರಾಹಿಂ ಸಂಪರ್ಕದಲ್ಲಿದ್ದಾರೆ ಗೊತ್ತಾ?
ಬೆಂಗಳೂರು, ಡಿಸೆಂಬರ್ 13: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಪಕ್ಷದಿಂದ ಹೊರ ಬಂದಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆ ಹೊತ್ತಲಿ ಸಿಎಂ ಇಬ್ರಾಹಿಂ ಮರಳಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿತ್ತು. ಆದರೆ, ಇದೀಗ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಸಿಎಂ ಇಬ್ರಾಹಿಂ ಅವರು ಘೋಷಿಸಿದ್ದಾರೆ.
ಈ ಕುರಿತು ಸಿಎಂ ಇಬ್ರಾಹಿಂ ಅವರು ಮಾತನಾಡಿ, ನಾನು ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ ನಾಳೆ ಕಲ್ಬುರ್ಗಿಯಲ್ಲಿ ಸಭೆ ನಡೆಸಿ ಪಕ್ಷದ ಚಿನ್ಹೆಯ ಬಗ್ಗೆ ನಿರ್ಧರಿಸುತ್ತೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಹಲವು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ನಿಮ್ಮ ಪಾರ್ಟಿಗೆ ಸೇರಲು ನಾವು ಸಿದ್ಧರಿದ್ದೇವೆ. ನಾವು ಬಸವಣ್ಣ ಮತ್ತು ಅಂಬೇಡ್ಕರ್ ಸಿದ್ಧಾಂತದಂತೆ ನಡೆಯುತ್ತೇವೆ. ರಾಹುಲ್ ಗಾಂಧಿಗೆ ಇಂದಿರಾಗಾಂಧಿಯ ಶಕ್ತಿ ಬರಲಿಲ್ಲ ಮೋದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಶಕ್ತಿ ಬರಲಿಲ್ಲ ಎಂಧು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಇವತ್ತು ರಾಜ್ಯ ಸರ್ಕಾರ ಸಂಪೂರ್ಣ ವೈಪಲ್ಯವಾಗಿದೆ. ಕುರ್ಚಿ ಕಿತ್ತಾಟದ ವಿಚಾರದಲ್ಲಿ ಕರ್ನಾಟಕ ಇಬ್ಬಾಗ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದರು. ಒಂದೊಂದು ವಸ್ತುಗಳ ಬೆಲೆ ಹೆಚ್ಚಳವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನಮ್ಮ ಹೊಸ ಪಕ್ಷಕ್ಕೆ ಎಲ್ಲಾರ ಸಹಕಾರ ಬೇಕು. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರಗಳು ಕೆಲಸ ಮಾಡುತ್ತಿಲ್ಲ. ನಾನು, ನೀನು, ಎನ್ನುವ ಹೋರಾಟ ನಡೆಯುತ್ತಿದೆ. ಬೆಳಗಾವಿಯಲ್ಲಿ ಡಿನ್ನರ್ ಮಾಡ್ತಿದ್ದಾರೆ. ಇದು ಹೀಗೆ ಮುಂದುವರೆದ್ರೆ ಕರ್ನಾಟಕ ಎರಡು ಭಾಗವಾಗುತ್ತದೆ. ಹೀಗಾಗಿ ಜನರಿಗಾಗಿ ನಾವು ಒಂದು ಪಕ್ಷವನ್ನ ಸ್ಥಾಪನೆ ಮಾಡುತ್ತಿದ್ದೇವೆ. ಎಲ್ಲಾ ಪಕ್ಷಗಳು ನಮ್ಮನ್ನ ಬಳಸಿಕೊಳ್ಳಕೊಂಡರು, ಆದ್ರೆ ಏನು ಮಾಡಲಿಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಇವತ್ತು ರೈತರ ಬೆಳೆಗೆ ಬೆಲೆ ಇಲ್ಲ. ರೈತರು ಕಂಗಾಲಾಗಿದ್ದಾರೆ. ರೈತರು ಸಾಯುತ್ತಿದ್ದಾರೆ. ರೈತರು ಬೆಲೆ ಇಲ್ಲ ಅಂತ ಸಾಯುತ್ತಿದ್ದಾರೆ, ಸಾಲದಿಂದ ಸಾಯುತ್ತಿದ್ದಾರೆ. ಇದರ ಪರಿಕಲ್ಪನೆ ಸರ್ಕಾರಕ್ಕೆ ಇಲ್ಲ. ಹೈಕಮಾಂಡ್ ಹೇಳಿದ್ದಾರೆ ಅಂತ ಮಂತ್ರಿಗಳಾಗಿದ್ದಾರೆ ಎಂದು ರಾಜ್ಯಸರ್ಕಾರದ ವಿರುದ್ದ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಹೇಳಿದರು.












Click it and Unblock the Notifications