Anna Bhagya Scheme: ʼಕೇಂದ್ರ ಸರ್ಕಾರದ ಅಕ್ಕಿ ಬೇಡ ಎನ್ನುತ್ತಿರುವುದೇಕೆ ರಾಜ್ಯ ಸರ್ಕಾರʼ ?
Anna Bhagya Scheme: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ಹಣವನ್ನು ಸರಿಯಾಗಿ ಸಾರ್ವಜನಿಕರಿಗೆ ನೀಡುತ್ತಿಲ್ಲ. ಅಲ್ಲದೆ ಕೇಂದ್ರ ಸರ್ಕಾರ ನೆರವು ನೀಡುವುದಕ್ಕೆ ಮುಂದೆ ಬಂದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಅದನ್ನು ಸ್ವೀಕರಿಸುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ ಕೆಲವು ಸರ್ಕಾರಿ ನೌಕರರಿಗೆ ವೇತನ ನೀಡದೆ ಇರುವುದು. ಗ್ಯಾರಂಟಿ ಯೋಜನೆಗಳು ಪ್ರತಿ ತಿಂಗಳೂ ಸರಿಯಾಗಿ ಬರದೆ ಇರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ರಾಜ್ಯಕ್ಕೆ ಕೇಂದ್ರ ಸರ್ಕಾರವೇ ಸಹಕಾರ ನೀಡಲು ಸಿದ್ಧ ಎಂದರೂ ರಾಜಕೀಯ ಪ್ರದರ್ಶಿಸುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆಯಾದರೂ. ಅದನ್ನು ಪ್ರತಿ ತಿಂಗಳೂ ಜನರಿಗೆ ತಲುಪಿಸುವಲ್ಲಿ ಎಡವುತ್ತಿದ್ದೆ ಎನ್ನುವ ಆರೋಪ ಕೇಳಿ ಬಂದಿದ್ದು. ಇದೀಗ ಮತ್ತೊಂದು ಗಂಭೀರ ಆರೋಪವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಡಿದ್ದಾರೆ.

ಕರ್ನಾಟಕ ಸರ್ಕಾರ ದಿವಾಳಿಯಾಗಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಕಣ್ಮುಂದೆಯೇ ಕಾಣುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಈಗ ಗೃಹ ಲಕ್ಷ್ಮಿ, ಅನ್ನ ಭಾಗ್ಯದ ಹೆಚ್ಚುವರಿ ಅಕ್ಕಿ ಇಲ್ಲ, ಹಣನೂ ಇಲ್ಲ. ಹಲವು ವಿಷಯಗಳಿಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಸರ್ಕಾರ ಅಂತ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ಬೆಟ್ಟು ಮಾಡತ್ತಾರೆ. ಮೆಟ್ರೋ ದರ ಏರಿಕೆ ಮಾಡಿ ಇಲ್ಲ ಎಂದಿದ್ದರು. ಆಮೇಲೆ ಕಡಿಮೆ ನಾವೇ ಮಾಡಿದ್ದೇವೆ ಎಂದರು. ಇದೆಲ್ಲ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ನಾವು ಅಕ್ಕಿ ಕೊಡುವುದಕ್ಕೆ ಸಿದ್ಧರಿದ್ದೇವೆ: ಇನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ 28 ರೂಪಾಯಿಗೆ ಅಕ್ಕಿ ನೀಡಿಲು ಸಿದ್ಧವಿದೆ. ಈ ಬಗ್ಗೆ ಸಚಿವ ಕೆ.ಎಚ್ ಮುನಿಯಪ್ಪ ಮೊದಲಿಗೆ ಸ್ಪಂದಿಸಿದ್ದರು. ಆದರೆ, ಇಲ್ಲಿಯವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್ಡರ್ ಕೊಟ್ಟಿಲ್ಲ. ಕೇಂದ್ರದಿಂದ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಕೇಂದ್ರದಿಂದ ಅಕ್ಕಿ ಖರೀದಿ ಮಾಡಿದರೆ 2.80 ಸಾವಿರ ಕೋಟಿ ರೂಪಾಯಿ ರಾಜ್ಯಕ್ಕೆ ಉಳಿತಾಯವಾಗುತ್ತದೆ. ಆದರೆ, ಇದನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ರಾಜ್ಯ ಸರ್ಕಾರವು ಒಂಬತ್ತು ವಿಶ್ವ ವಿದ್ಯಾಲಯಗಳನ್ನು ಬಂದ್ ಮಾಡುವ ತೀರ್ಮಾನ ಮಾಡಿದೆ. ಇದರ ಅರ್ಥ ರಾಜ್ಯ ಸರ್ಕಾರ ದಿವಾಳಿ ಹಂತಕ್ಕೆ ಬಂದು ನಿಂತಿದೆ ಎನ್ನುವುದೇ ಆಗಿದೆ. ಹಾಲಿನ ದರ, ಪೆಟ್ರೋಲ್, ಜನನ ಮರಣ ಪತ್ರದ ದರ ಸಹ ರಾಜ್ಯದಲ್ಲಿ ಜಾಸ್ತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನ ನಿರುದ್ಯೋಗಿ ನಾಯಕರ ಕಡೆ ಮಾತನಾಡುಸುತ್ತಿದ್ದಾರೆ. ಆರ್ಎಸ್‌ಎಸ್ ಬಗ್ಗೆ ನಿರುದ್ಯೋಗಿ ಲೀಡರ್‌ಗಳು ಹೇಳಿಕೆ ನೀಡುತ್ತಿದ್ದಾರೆ. ದೇಶದ ಹಿತವನ್ನು ಕಡೆಗಣಿಸಿಯಾದರೂ, ಅಧಿಕಾರದಲ್ಲಿ ಇರಬೇಕು ಎನ್ನುವುದು ಕಾಂಗ್ರೆಸ್ ನೀತಿ. ಹಿಂದೂ ವಿರೋಧ ನೀತಿಗೆ ಬಗ್ಗೆ ಮಾತನಾಡಿದರೆ ಅವರಿಗೆ ಕಾಂಗ್ರೆಸ್‌ನಲ್ಲಿ ಹುದ್ದೆ ಕೊಡತ್ತಾರೆ. ಹರಿಯಾಣ ಉಸ್ತುವಾರಿಗಳು ತಾವೇ ಪ್ರಧಾನಿಗಳಂತೆ ಮಾತನಾಡುತ್ತಿದ್ದಾರೆ ಎಂದರು ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications