Get Updates
Get notified of breaking news, exclusive insights, and must-see stories!

ಎತ್ತಿನಹೊಳೆ: ಜಲ ವಿಜ್ಞಾನದ ಬಗ್ಗೆ CWC ಯಿಂದ ಮರು ಅಧ್ಯಯನಕ್ಕೆ ಸಿಎಂಗೆ ಆಗ್ರಹ

ಬೆಂಗಳೂರು, ಮಾ. 07: ಮಳೆಯಾಶ್ರಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಬರ ಪೀಡಿತ ಬಯಲು ಸೀಮೆಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯಿಂದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಹನಿ ನೀರು ಬರಲ್ಲ. ಬದಲಿಗೆ ಗಾಳಿ ಬರುತ್ತೆ! ಗಾಳಿ ಹರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಬೊಮ್ಮಾಯಿ ಸರ್ಕಾರ ಮತ್ತೆ ಮೂರು ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದೆ!

'ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರಿಗೆ ಬದ್ಧತೆಯಿದ್ದರೆ ಮೊದಲು ಎತ್ತಿನಹೊಳೆ ಯೋಜನೆಯ ಜಲ ವಿಜ್ಞಾನದ ಬಗ್ಗೆ ಕೇಂದ್ರ ಜಲ ಆಯೋಗದಿಂದ ಮರು ಅಧ್ಯಯನ ನಡೆಸಲಿ. ಆಗಲಾದರೂ ಕನಿಷ್ಠ ಪರ್ಯಾಯತೆ ಬಗ್ಗೆ ಯೋಜಿಸಲು ಅವಕಾಶ ಸಿಗುತ್ತದೆ. ಇಲ್ಲದಿದ್ದರೆ ಸರ್ಕಾರದ ತೆರಿಗೆ ಹಣ ಪೋಲಾಗುವುದು ಖಚಿತ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ' ಎಂದು ಕೋಲಾರ- ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಆಗ್ರಹಿಸಿದ್ದಾರೆ.

ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕನಸಿಗೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಣ್ಣೆರಚಿದ್ದಾರೆ. ನೀರು ಬರಲ್ಲ ಎಂಬ ಸತ್ಯ ಗೊತ್ತಿದ್ದೂ ಎತ್ತಿನ ಹೊಳೆ ಯೋಜನೆಗೆ ಜೋತು ಬಿದ್ದಿರುವ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಮೂರು ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. ಎರಡು ವರ್ಷದಲ್ಲಿ ಕುಡಿಯುವ ನೀರು ಬರುತ್ತದೆ ಎಂದೇಳಿ ಯೋಜನೆಗೆ ಅಡಿಗಲ್ಲು ಹಾಕಿ ದಶಕ ಕಳೆದಿದೆ. ಈ ಯೋಜನೆಯ ವಾಸ್ತವತೆ ಅರಿಯದೇ ಗುತ್ತಿಗೆದಾರರು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಕಮೀಷನ್ ಆಸೆಗೆ ಬಿದ್ದು ಬಡ ಪೀಡಿತ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Anjaneya Reddy Request to CM Basavaraj Bommai to Order CWC to Re Study on Yetthinahole Project

ಪರಮ ಶಿವಯ್ಯ ವರದಿ ಮತ್ತು ಎತ್ತಿನಹೊಳೆ ಜನನ :

ಮಳೆಯಾಶ್ರಿತ ಕೋಲಾರ- ಚಿಕ್ಕಬಳ್ಳಾಪುರ- ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಮತ್ತು ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂಬ ಹೋರಾಟ ಕಳೆದ ಎರಡೂವರೆ ದಶಕದಿಂದ ನಡೆಯುತ್ತಿದೆ. ಡಾ. ಜಿ.ಎಸ್. ಪರಮಶಿವಯ್ಯ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರು. ಬರ ಪೀಡಿತ ಜಿಲ್ಲೆಗಳಲ್ಲಿ ಕೆರಗಳನ್ನು ಪುನರುಜ್ಜೀವನಗೊಳಿಸಿ ಮೊದಲು ಶುದ್ಧ ಕುಡಿಯುವ ನೀರು ಕಲ್ಪಿಸಬೇಕು. ಈ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡುವುದು, ಬಳಿಕ ತುಂಗಭದ್ರಾ, ಕೃಷ್ಣ ಮತ್ತಿತರ ನದಿಗಳ ಪ್ರವಾಹದ ನೀರನ್ನು ಈ ಭಾಗದ ಜಿಲ್ಲೆಗಳ ಕೆರೆಗಳಿಗೆ ನೀರು ಹರಿಸಲು ತನ್ನ ವರದಿಯಲ್ಲಿ ಉಲ್ಲೇಖಿಸಿದ್ದರು.

ಈ ಮೂಲಕ ಬರ ಪೀಡಿತ ಜಿಲ್ಲೆಗಳಲ್ಲಿ ಉದ್ಯೋಗ ಉಂಟಾಗಿ ಸಸ್ಯ ಶ್ಯಾಮಲ ಹಸಿರಿನಿಂದ ಕಂಗೊಳಿಸಲಿದೆ. ಫಲವತ್ತಾದ ಭೂಮಿ, ಹವಾಗುಣ ಹೊಂದಿರುವ ಈ ಜಿಲ್ಲೆಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿ, ರೈತಾಪಿ ವರ್ಗ ಸ್ವತಂತ್ರ ಜೀವನ ನಡೆಸಲಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದರು.

Anjaneya Reddy Request to CM Basavaraj Bommai to Order CWC to Re Study on Yetthinahole Project

ವಿಪರ್ಯಾಸವೆಂದರೆ, ಖಾಸಗಿ ಕಂಪನಿಯಿಂದ ಕಲ್ಪನಾತೀತ ಎತ್ತಿನಹೊಳೆ ಯೋಜನೆ ಬಗ್ಗೆ ಸಮಗ್ರ ಯೋಜನಾ ವರದಿ ತಯಾರಿಸಿ ಅದನ್ನು ಜಾರಿಗೊಳಿಸಲು ಸರ್ಕಾರ ಮುಂದಾಯಿತು. ಈ ಯೋಜನೆಯಿಂದ ಕುಡಿಯುವ ನೀರು ಬರಲ್ಲ. ಜಲ ವಿಜ್ಞಾನದ ಅಧ್ಯಯನವೇ ನಡೆಸಿಲ್ಲ. ಕಲ್ಪನಾತೀತವಾಗಿ ಯೋಜನಾ ವರದಿ ತಯಾರಿಸಲಾಗಿದೆ. ಇದರಿಂದ ಜನರಿಗೆ ಜನರಿಗೆ ಮೋಸ ಮಾಡಿದಂತಾಗುತ್ತದೆ ಎಂದು 2012 ರಲ್ಲಿಯೇ ಕೇಂದ್ರ ಜಲ ಆಯೋಗ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಪಡಿಸಿತ್ತು. ಮಾತ್ರವಲ್ಲ, ಕನಿಷ್ಠ ಈಗಲಾದರೂ ಮಳೆ ಬೀಳುವ ಪ್ರಮಾಣ ಬಗ್ಗೆ ವೈಜ್ಞಾನಿಕವಾಗಿ ಜಲ ವಿಜ್ಞಾನದ ಬಗ್ಗೆ ಅಧ್ಯಯನ ನಡೆಸಿ ನಾವೇ ವರದಿ ತಯಾರಿಸಿಕೊಡುತ್ತೇವೆ ಎಂದು ಸಿಡಬ್ಲೂಸಿ ಹೇಳಿತ್ತು. ಅದನ್ನು ಕಿವಿಗೆ ಹಾಕಿಕೊಳ್ಳದೇ ರಾಜ್ಯ ಸರ್ಕಾರಗಳು ಎತ್ತಿನಹೊಳೆ ಯೋಜನೆಗೆ ಅಡಿಗಲ್ಲು ಹಾಕಿಯೇ ಬಿಟ್ಟರು.

ಕೇವಲ ಎರಡು ವರ್ಷದಲ್ಲಿ ಕುಡಿಯುವ ನೀರು ಒದಗಿಸುತ್ತೇವೆ ಎಂದು ಹೇಳಿ 2014 ರಲ್ಲಿ 13,000 ಕೋಟಿ ರೂ. ಬಿಡುಗಡೆ ಮಾಡಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಅಡಿಗಲ್ಲು ಹಾಕಿದರು. ವಾಸ್ತವ ವರದಿ ಬಿಟ್ಟು ಎತ್ತಿನಹೊಳೆ ಘೋಷಣೆ ಮಾಡಿದ ಕೊರಗಿನಲ್ಲಿ ಜಿ.ಎಸ್. ಪರಮಶಿವಯ್ಯ ಅದೇ ವರ್ಷ ಮೃತಪಟ್ಟರು. ಆ ಬಳಿಕ ಎತ್ತಿನಹೊಳೆ ಯೋಜನೆ ನೀರು ಬರಬೇಕಾದರೆ ರಿಸರ್ವ ವಾಯರ್ ಕಟ್ಟಬೇಕು ಎಂಬ ಕಥೆ ಕಟ್ಟಿ ಅಧಿಕಾರಿಗಳು ಎತ್ತಿನಹೊಳೆ ಯೋಜನೆ ನೀರನ್ನು ವೇದಾವತಿ ನದಿಗೆ ಜೋಡಣೆ ಮಾಡುವ ಪ್ರಸ್ತಾಪವಿಟ್ಟು ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ ಅವರ ಕಾಲಾವಧಿಯಲ್ಲಿ 1500 ಕೋಟಿ ರೂ. ಬಿಡುಗಡೆ ಮಾಡಿಸಿದರು.

Anjaneya Reddy Request to CM Basavaraj Bommai to Order CWC to Re Study on Yetthinahole Project

ಇದೀಗ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಯೋಜನಾ ಗಾತ್ರವನ್ನು 24,000 ಕೋಟಿಗೆ ಹೆಚ್ಚಿಸಲಾಗುತ್ತಿದೆ. ಯೋಜನೆ ಭಾಗವಾಗಿ ಹಾಲಿ ಸಿಎಂ ಕೂಡ 3 ಸಾವಿರ ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಟ್ಟಿದ್ದು, ಇದು ಗುತ್ತಿಗೆದಾರರನ್ನು ಬದುಕಿಸಿ ಕಾಸು ಎತ್ತುವ ಸ್ಕೀಮ್ ಎಂದು ಆಂಜನೇಯರಡ್ಡಿ ವಾಸ್ತವ ಚಿತ್ರಣವನ್ನು ವಿವರಿಸಿದ್ದಾರೆ.

ಐವತ್ತು ಸಾವಿರ ಕೋಟಿ ಖರ್ಚು ಮಾಡಿದರೂ ಎತ್ತಿನಹೊಳೆ ಯೋಜನೆಯಿಂದ ಈ ಭಾಗದ ಜನರಿಗೆ ನೀರು ಬರಲ್ಲ. ಗಾಳಿ ಬರುತ್ತದೆ ಅಷ್ಟೇ. ನಿಜವಾಗಿಯೂ ಕೋಲಾರ- ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜನತೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಬದ್ಧತೆ ಇದ್ಧರೆ ಹಾಲಿ ಸಿಎಂ ಎತ್ತಿನಹೊಳೆಯ ಜಲ ವಿಜ್ಞಾನದ ಬಗ್ಗೆ ಕೇಂದ್ರ ಜಲ ಆಯೋಗದಿಂದ ಮರು ಅಧ್ಯಯನ ನಡೆಸಲಿ. ಸುಳ್ಳು ಹೇಳಿ ಜನರನ್ನು ಮರಳು ಮಾಡುವ ಬದಲಿಗೆ ವಾಸ್ತವ ಅರ್ಥ ಮಾಡಿಕೊಂಡು ಪರ್ಯಾಯದ ಬಗ್ಗೆ ಚಿಂತನೆ ಮಾಡಲು ಅವಕಾಶ ಸಿಗುತ್ತದೆ. ಕನಿಷ್ಠ ಪಕ್ಷ ರಾಜ್ಯದ ತೆರಿಗೆ ಹಣ ಉಳಿಯುತ್ತದೆ ಎಂಬುದು ಕೋಲಾರ- ಮತ್ತು ಚಿಕ್ಕಬಳ್ಳಾಪುರ ರೈತರ ಆಗ್ರಹ.

Anjaneya Reddy Request to CM Basavaraj Bommai to Order CWC to Re Study on Yetthinahole Project


ಹಗಲು ದರೋಡೆ:

ಗುತ್ತಿಗೆದಾರರನ್ನು ಸಾಕಿ ಕಿಕ್ ಬ್ಯಾಕ್ ಪಡೆಯುವ ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಹಗಲು ದರೋಡೆಗೆ ಪ್ರಯತ್ನ ನಡೆದಿದೆ. ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರು ಒಗ್ಗಟ್ಟಾಗಿರುವುದರಿಂದ ದರೋಡೆ ಚಕ್ರವ್ಯೂಹ ಬೇಧಿಸಲು ಅಸಾಧ್ಯ. ಜನರನ್ನು ಯಶಸ್ವಿಯಾಗಿ ಮರಳು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಯೋಜನೆಯ ಅಸಲಿ ಸತ್ಯ ಗೊತ್ತಾಗಬೇಕಾದರೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಅವರು ಆಗ್ರಹಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ 2100 ಕೆರೆಗಳಿವೆ. ಚಿಕ್ಕಬಳ್ಳಾಪುರದಲ್ಲಿ 1800 ಕೆರೆಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1500 ಕೆರೆಗಳಿವೆ. ಇದರೊಂದಿಗೆ ಕುಂಟೆ, ಕಾಲುವೆಗಳಿವೆ. ಮಳೆ ಬಿದ್ದರೂ ಹನಿ ನೀರು ಕೆರೆಗಳಲ್ಲಿ ಉಳಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅಷ್ಟೂ ಕೆರೆಗಳನ್ನು ಸಾಮೂಹಿಕವಾಗಿ ಅಭಿವೃದ್ಧಿ ಪಡಿಸಿ ಪುನರುಜ್ಜೀವನಕ್ಕೆ ಒತ್ತು ನೀಡಬೇಕಿತ್ತು. ಈ ಮೂಲಕ ಮೂರು ಜಿಲ್ಲೆಗಳ ಅರ್ಧ ಸಮಸ್ಯೆ ಬಗೆ ಹರಿಸಲು ಅವಕಾಶವಿದೆ. ಇನ್ನೂ ಎರಡೂ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ವೈಜ್ಞಾನಿಕ ರೀತಿಯಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಅವಕಾಶವಿತ್ತು. ಈ ಬಗ್ಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು.

ಈ ಸರ್ಕಾರಕ್ಕೆ ಬದ್ಧತೆಯಿದ್ದರೆ, ಈಗಲಾದರೂ ಎತ್ತಿನಹೊಳೆ ಯೋಜನೆ ಬಗ್ಗೆ ಕೇಂದ್ರ ಜಲ ಆಯೋಗದಿಂದ ಮರು ಅಧ್ಯಯನ ನಡೆಸಲಿ. ಇನ್ನೊಂದು ಹತ್ತು ವರ್ಷ ಯೋಜನೆ ಹೆಸರಿನಲ್ಲಿ ಹಣ ನುಂಗಿ ನೀರು ಕುಡಿಯುವುದನ್ನು ತಪ್ಪಿಸಬೇಕು. ಹಾಲಿ ಸಿಎಂ ಯಾರ ಒತ್ತಡಕ್ಕೂ ಮಣಿಯದೇ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Recommended Video

      ಸಿಂಹೀಳಿಯರಿಗೆ ಮಣ್ಣು ಮುಕ್ಕಿಸಿದ ರೋಹಿತ್ ಪಡೆ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+