Darshan: ಒಂದು ಹೆಣ್ಣಿನಿಂದ ತನ್ನ ಬದುಕು ಹಾಳು ಮಾಡಿಕೊಂಡಿದೆ ಮಗನೇ..: ದರ್ಶನ್ ನೋಡಲು ಹುಬ್ಬಳ್ಳಿಯಿಂದ ಬಂದ ವೃದ್ಧೆ
ಬೆಂಗಳೂರು,ಜುಲೈ 01: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಹಲವರು ಜೈಲು ಸೇರಿದ್ದು, ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಕನ್ನಡ ಚಿತ್ರತಂಡದ ಕೆಲ ನಾಯಕರು ಸೇರಿದಂತೆ ಹಲವು ಜಿಲ್ಲೆಗಳಿಂದ ದರ್ಶನ್ ನೋಡುವ ಅಭಿಮಾನಿಗಳ ದಂಡೆ ಪರಪ್ಪನ ಅಗ್ರಹಾರದ ಬಳಿ ಬರುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನ ನೋಡಲು ವಯೋಮಾನದ ಅಭಿಮಾನಿ ಹುಬ್ಬಳ್ಳಿಯಿಂದ ಬಂದಿದ್ದಾರೆ. ಹಿರಿಯ ಮಹಿಳೆ ದರ್ಶನ್ ರನ್ನು ಕಂಡು ಮಾತಾಡಲು ಹುಬ್ಬಳ್ಳಿಯಿಂದ ಬಂದಿದ್ದಾರೆ. ತಾನು ದರ್ಶನ್ ಅಭಿನಯದ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ದರ್ಶನ್ ಅವರ ಮೇಲೆ ಅತೀವ ಪ್ರೀತಿ,ವಾತ್ಸಲ್ಯ ಮತ್ತು ಮಮತೆಯನ್ನ ವ್ಯಕ್ತಪಡಿಸಿದ್ದಾರೆ.

ದರ್ಶನ್ ಒಂದು ಹೆಣ್ಣಿನಿಂದ ತನ್ನ ಬದುಕು ಹಾಳು ಮಾಡಿಕೊಂಡಿದ್ದಾರೆ. ದರ್ಶನ್ ನೋಡಲು ಅವಕಾಶ ಕೊಟ್ಟರೆ ನಾನು ಆ ಮಗ ಬಳಿ ಮಾತನಾಡಿ, ಮತ್ತೆ ನಮ್ಮ ಊರಿಗೆ ಹೋಗುತ್ತೇನೆ ಎಂದು ಟಿವಿ 9 ಕನ್ನಡದ ಬಳಿ ತಮ್ಮ ಮನದ ಮಾತನ್ನ ವೃದ್ಧೆ ಹೇಳಿಕೊಂಡಿದ್ದಾರೆ. ಅಲ್ಲದೇ ದರ್ಶನ್ ನೋಡುವ ಅವಕಾಶ ಸಿಕ್ಕರೇ ಎಲ್ಲಾನೂ ಮಾತಾಡ್ತೀನಿ, ನಿಂಗೆ ಎಲ್ಲ್ಲವೂ ಇತ್ತು, ನನ್ನಂಥ ಕೋಟ್ಯಾಂತರ ಅಭಿಮಾನಿಗಳಿದ್ದಾರೆ, ನಿನ್ನ ಕೈಯಾರೆ ಜೀವನ ಹಾಳುಮಾಡಿಕೊಂಡೆಯಲ್ಲ? ಯಾಕೆ ಹೀಗೆ ಮಾಡಿದೆ ಮಗಾ ಅಂತ ಕೇಳ್ತೀನಿ ಎಂದು ವೃದ್ಧ ಮಹಿಳೆ ತಿಳಿಸಿದ್ದಾರೆ.












Click it and Unblock the Notifications