ಅಮೂಲ್‌ ಕರ್ನಾಟಕದ ಮಾರುಕಟ್ಟೆಗೆ ಬರುವುದಿಲ್ಲ: ಬಿಜೆಪಿ ವಕ್ತಾರ

ನವದೆಹಲಿ, ಏಪ್ರಿಲ್‌ 10: ಕರ್ನಾಟಕದಲ್ಲಿ ಅಮುಲ್ ಪ್ರವೇಶದ ಬಗ್ಗೆ ಕಾಂಗ್ರೆಸ್ ತಪ್ಪು ಮಾಹಿತಿಯನ್ನು ಪ್ರಚಾರ ಮಾಡಿದೆ. ಗುಜಾರತ್‌ ರಾಜ್ಯದ ಅಮೂಲ್‌ ಕರ್ನಾಟದ ಮಾರುಕಟ್ಟೆಗೆ ಬರುವುದಿಲ್ಲ ಎಂದು ಬಿಜೆಪಿ ವಕ್ತಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

"ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ. ಅಮುಲ್ ಮತ್ತು ಕೆಎಂಎಫ್ ಎರಡೂ ತಮ್ಮ ಉತ್ಪನ್ನಗಳನ್ನು ಕ್ವಿಕ್‌ ಕಾಮರ್ಸ್‌ ವೇದಿಕೆಗಳಲ್ಲಿ ಮಾರಾಟ ಮಾಡುತ್ತವೆ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೆಎಂಎಫ್ ವಹಿವಾಟು (ರೂ) 10,000 ಕೋಟಿಗಳಷ್ಟು ಹೆಚ್ಚಾಗಿದೆ. 2022ರಲ್ಲಿ ವಹಿವಾಟು 25,000 ಕೋಟಿ ರೂ. ಇತ್ತು. ಅದರಲ್ಲಿ 20,000 ಕೋಟಿ ರೂ. ಕರ್ನಾಟಕದ ರೈತರಿಗೆ ವಾಪಸ್ ಬಂದಿದೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

Amul will not enter Karnataka market: BJP spokesperson

ಬೆಂಗಳೂರು ಮಾರುಕಟ್ಟೆಯಲ್ಲಿ ಹಾಲು ಮತ್ತು ಮೊಸರು ಮಾರಾಟ ಮಾಡುವ ಯೋಜನೆಯನ್ನು ಅಮುಲ್ ಘೋಷಿಸಿದ ನಂತರ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಅಮಿತ್ ಮಾಳವಿಯಾ ಈ ಟ್ವೀಟ್‌ಗಳನ್ನು ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ತಮ್ಮ ಪ್ರವಾಸದ ಉದ್ದೇಶ "ರಾಜ್ಯವನ್ನು ಲೂಟಿ ಮಾಡುವುದು" ಎಂದು ಹೇಳಿದ್ದರು. ಅದಕ್ಕೆ ಮಾಳವಿಯಾ ಅವರು, "ಭಾರತವು ಕಾಂಗ್ರೆಸ್ ಅನ್ನು ನಂಬದಿರಲು ಒಂದು ಕಾರಣವಿದೆ. ಅವರು ಸುಳ್ಳು ಹೇಳುತ್ತಾರೆ. ಇತ್ತೀಚಿಗೆ ನಂದಿನಿ ಮಾಲೀಕತ್ವದ ಕರ್ನಾಟಕ ಹಾಲು ಒಕ್ಕೂಟವು ಅಮುಲ್‌ನೊಂದಿಗೆ ವಿಲೀನಗೊಳ್ಳಲಿದೆ ಎಂಬ ತಪ್ಪು ಪ್ರಚಾರವಾಗಿದೆ. ಕೆಎಂಎಫ್ ಅನ್ನು ಬಲಪಡಿಸಲು ಬಿಜೆಪಿ ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ಮಾಡಲು ಹೆಚ್ಚಿನ ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ.

Amul will not enter Karnataka market: BJP spokesperson

KMF ದೇಶದ ಎರಡನೇ ಅತಿದೊಡ್ಡ ಹಾಲಿನ ಸಹಕಾರಿ ಸಂಸ್ಥೆಯಾಗಿದ್ದು, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ಡಿಪೋಗಳನ್ನು ಹೊಂದಿದೆ. ಕೆಎಂಎಫ್‌ ಉತ್ಪನ್ನಗಳಲ್ಲಿ ಒಟ್ಟು ಶೇಕಡಾ 15 ರಷ್ಟು ಕರ್ನಾಟಕದಿಂದ ಹೊರಗೆ ಮಾರಾಟವಾಗುತ್ತದೆ. ನಂದಿನಿಯನ್ನು ಸಿಂಗಾಪುರ, ಯುಎಇ ಮತ್ತು ಇತರ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಮುಲ್ ಮತ್ತು ಕೆಎಂಎಫ್ ವಿಲೀನಗೊಳ್ಳುತ್ತಿಲ್ಲ ಎಂದು ಅವರು ಹೇಳಿದರು.

ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಮಾಲೀಕತ್ವದ ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ ಮತ್ತು ಅಮುಲ್ ಮತ್ತು ಕೆಎಂಎಫ್ ಎರಡೂ ತಮ್ಮ ಉತ್ಪನ್ನಗಳನ್ನು ಕ್ವಿಕ್‌ ಕಾಮರ್ಸ್‌ ವೇದಿಕೆಗಳಲ್ಲಿ ಮಾತ್ರ ಮಾರಾಟ ಮಾಡುತ್ತವೆ. ಕರ್ನಾಟಕವು ಹಾಲನ್ನು ಹೆಚ್ಚಾಗು ಉತ್ಪಾದಿಸುವ ರಾಜ್ಯವಾಗಿದೆ. ಹೈನುಗಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರಾಂಡ್ ನಂದಿನಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್, ಗೋಹತ್ಯೆ ವಿರೋಧಿ ಮಸೂದೆಯನ್ನು ವಿರೋಧಿಸಿ, ನಮ್ಮ ನಂದಿನಿಗಳ ಹತ್ಯೆಗೆ ಅನುಮೋದನೆ ನೀಡಿದೆ, ಬಿಜೆಪಿ ಯೋಜನೆ ನಂದಿನಿಯನ್ನು ದೊಡ್ಡ ಬ್ರ್ಯಾಂಡ್ ಮಾಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ ಕರ್ನಾಟಕದಲ್ಲಿ ಭದ್ರವಾಗಿ ನೆಲೆಯೂರಿರುವ 'ನಂದಿನಿ' ಬ್ರ್ಯಾಂಡ್ ಅನ್ನು ಅಳಿಸಿ ಹಾಕುವ ಶಕ್ತಿ ಯಾರಿಗೂ ಇಲ್ಲ. ಗುಜರಾತ್‌ನ ಅಮುಲ್ ಜೊತೆ ನಂದಿನಿಯನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪವು ಇಲ್ಲ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಭಾನುವಾರ ಸ್ಪಷಪಡಿಸಿದ್ದಾರೆ.

ಅಮುಲ್ ಕರ್ನಾಟಕ ಪ್ರವೇಶ ಕುರಿತು ಮಾತನಾಡಿದ ಅವರು, ಕರ್ನಾಟಕದ ನಂದಿನಿ ಹಾಲಿನ ಬ್ರ್ಯಾಂಡ್ ಎಲ್ಲ ಪ್ರತಿಸ್ಪರ್ಧಿಗಳಿಗಿಂತ ಮುಂದಿದೆ. ಅಮುಲ್ ಸಂಸ್ಥೆ ಒಂದು ಲೀಟರ್ ಹಾಲನ್ನು ಲೀಟರ್‌ಗೆ 57 ರೂಪಾಯಿಗೆ ಪೂರೈಸಲಿದೆ. ಆನ್‌ಲೈನ್ ಮೂಲಕವೇ ಮಾರಾಟಕ್ಕೆ ಮುಂದಾಗಿದೆ. ಕರ್ನಾಟಕ ಹಾಲು ಒಕ್ಕೂಟವು ಅದೇ 1 ಲೀಟರ್ ಹಾಲನ್ನು ಲೀಟರ್‌ಗೆ 39 ರೂಪಾಯಿಗೆ ಪೂರೈಸಲು ಸಿದ್ಧವಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+