ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಉರುಳಿಸುವ ಬಗ್ಗೆ ರಾಜ್ಯ ಬಿಜೆಪಿಗೆ ಅಮಿತ್ ಶಾ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಮೈತ್ರಿ ಸರ್ಕಾರ ಪಥನವಾದರೂ ಅಥವಾ ಬಿಜೆಪಿಯೇ ಸರ್ಕಾರವನ್ನು ಉರುಳಿಸಿದರೂ ಸಹ ಅದರ ಕಪ್ಪುಚುಕ್ಕೆ ಪಕ್ಷಕ್ಕೆ ತಗುಲದಂತೆ ನೋಡಿಕೊಳ್ಳಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಮೈತ್ರಿ ಸರ್ಕಾರವನ್ನು ಪಥನಗೊಳಿಸಲು ರಾಜ್ಯ ಬಿಜೆಪಿಯ ಕೆಲವು ನಾಯಕರು ಉತ್ಸುಕರಾಗಿದ್ದಾರೆ ಆದರೆ ಹೈಕಮಾಂಡ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿತ್ತು. ಅದಕ್ಕೆ ಪೂರಕವೆಂಬಂತೆ ಬಿಜೆಪಿ ಹೈಕಮಾಂಡ್‌ನಿಂದ ಹೀಗೊಂದು ಸೂಚನೆ ರಾಜ್ಯ ಬಿಜೆಪಿಗೆ ಸಿಕ್ಕಿದೆ.

ಸಿದ್ದರಾಮಯ್ಯ ನಿವಾಸಕ್ಕೆ ಅತೃಪ್ತ ಶಾಸಕರು, ಮಹತ್ವದ ಚರ್ಚೆ ಸಿದ್ದರಾಮಯ್ಯ ನಿವಾಸಕ್ಕೆ ಅತೃಪ್ತ ಶಾಸಕರು, ಮಹತ್ವದ ಚರ್ಚೆ

ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಬಿದ್ದರೆ ಅಥವಾ ಬೀಳಿಸಿದರೆ ಅದರ ಆಪಾದನೆ ಮಾತ್ರ ಪಕ್ಷದ ಮೇಲೆ ಬರದಂತೆ ಎಚ್ರವಹಿಸಿ ಎಂದು ಅಮಿತ್ ಶಾ ಸೂಚಿಸಿದ್ದಾರೆ. ನಡೆಯುತ್ತಿರುವ ಸರ್ಕಾರವನ್ನು ಅಧಿಕಾರದ ಆಸೆಗೆ ಬೀಳಿಸಿದರು ಎಂಬ ನಿಂದನೆಯಿಂದ ಒಳಗಾಗುವುದು ಬೇಡ ಎಂದು ಶಾ ಕಾಳಜಿ ವಹಿಸಿದ್ದಾರೆ.

ಸರ್ಕಾರ ಬೀಳಿಸಿದ ಪಕ್ಷಕ್ಕೆ ಕಳಂಕ ಖಂಡಿತ

ಸರ್ಕಾರ ಬೀಳಿಸಿದ ಪಕ್ಷಕ್ಕೆ ಕಳಂಕ ಖಂಡಿತ

ಸರ್ಕಾರವನ್ನು ಬೀಳಿಸಿದ ಪಕ್ಷ ಆ ಸಮಯದಲ್ಲಿ ಅಧಿಕಾರ ಅನುಭವಿಸಿದರೂ ಸಹ ಮುಂದಿನ ದಿನಗಳಲ್ಲಿ ಜನರ ಮೂದಲಿಕೆಗೆ ಗುರಿ ಆಗಿರುವುದು ರಾಜಕೀಯ ಇತಿಹಾಸದಲ್ಲಿ ಸಾಕಷ್ಟಿದೆ ಹಾಗಾಗಿ ಅಮಿತ್ ಶಾ ಈ ಎಚ್ಚರಿಕೆ ವಹಿಸಿದ್ದಾರೆ. ಲೋಕಸಭೆ ಚುನಾವಣೆ ಬೇರೆ ಹತ್ತಿರದಲ್ಲಿರುವ ಕಾರಣ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಅಮಿತ್ ಶಾ ಸಿದ್ಧರಿಲ್ಲ ಎನ್ನಲಾಗಿದೆ.

ಬ್ರೇಕಿಂಗ್ ನ್ಯೂಸ್ : ಶಾಸಕಾಂಗ ಪಕ್ಷದ ಸಭೆ ಕರೆದ ಯಡಿಯೂರಪ್ಪ! ಬ್ರೇಕಿಂಗ್ ನ್ಯೂಸ್ : ಶಾಸಕಾಂಗ ಪಕ್ಷದ ಸಭೆ ಕರೆದ ಯಡಿಯೂರಪ್ಪ!

ಅಮಿತ್ ಶಾ ರಣತಂತ್ರ ಬೇರೆಯೇ ಇದೆ

ಅಮಿತ್ ಶಾ ರಣತಂತ್ರ ಬೇರೆಯೇ ಇದೆ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆದರೆ ಅದರ ಪರಿಣಾಮ ಬಿಜೆಪಿ ಪಕ್ಷದ ಮೇಲೆ ಬೀರದಂತೆ ತಡೆಯಲು ಕೆಲವು ಮುಖ್ಯ ನಾಯಕರನ್ನು ಕಟ್ಟಿಹಾಕುವ ತಂತ್ರವನ್ನು ಅಮಿತ್ ಶಾ ಹೆಣೆದಿದ್ದಾರೆ. ಈ ತಂತ್ರವನ್ನು ಪ್ರಯೋಗಕ್ಕೆ ತರುವ ಬಗ್ಗೆಯೂ ರಾಜ್ಯ ಬಿಜೆಪಿ ನಾಯಕರೊಂದಿಗೆ ಶಾ ಮಾತನಾಡಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಜಾರಕಿಹೊಳಿ ಇವರುಗಳನ್ನೆಲ್ಲಾ ಚುನಾವಣೆ ಸಮಯಕ್ಕೆ ಕಟ್ಟಿ ಹಾಕಲು ಅಮಿತ್ ಶಾ ತಂತ್ರ ಹೆಣೆಯುತ್ತಿದ್ದಾರೆ.

ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು

ಬಿಜೆಪಿ ಶಾಸಕರ ದಿಢೀರ್ ಸಭೆ ಕರೆದ ಬಿಎಸ್‌ವೈ

ಬಿಜೆಪಿ ಶಾಸಕರ ದಿಢೀರ್ ಸಭೆ ಕರೆದ ಬಿಎಸ್‌ವೈ

ಯಡಿಯೂರಪ್ಪ ಅವರು ಇಂದು ದಿಢೀರ್ ಬಿಜೆಪಿಯ ಶಾಸಕಾಂಗ ಸಭೆ ನಡೆಸಿದ್ದು, ರಮೇಶ್ ಜಾರಕಿಹೊಳಿ ಸಹ ಇದೇ ಸಮಯದಲ್ಲಿ ಬೆಂಗಳೂರಿಗೆ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರ ಭೇಟಿಗೆ ಬಂದಿದ್ದಾರೆ ಎನ್ನಲಾಗಿತ್ತು. ಆದರೆ ಬೆಂಗಳೂರಿಗೆ ಬಂದು ಹಲವು ಗಂಟೆಗಳಾದರೂ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ ಹಾಗಾಗಿ ಈ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

ಅತೃಪ್ತ ಶಾಸಕರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ

ಅತೃಪ್ತ ಶಾಸಕರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ

ಸ್ವತಃ ಕಾಂಗ್ರೆಸ್ ಪಕ್ಷದ ಮೇಲೆ ಅತೃಪ್ತಗೊಂಡು ಸರ್ಕಾರವನ್ನು ಅಲ್ಲಾಡಿಸುತ್ತಿರುವ ರಮೇಶ್ ಜಾರಕಿಹೊಳಿ ಇಂದು ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರನ್ನು ಭೇಟಿ ಆಗಿದ್ದಾರೆ. ಮಿನಿಸ್ಟರ್ಸ್‌ ಕ್ವಾಟ್ರಸ್‌ ನಲ್ಲಿ ತಂಗಿರುವ ರಮೇಶ್ ಜಾರಕಿಹೊಳಿ, ಭೀಮಾನಾಯಕ್, ಎಂಟಿಬಿ ನಾಗರಾಜು, ಸುಧಾಕರ್ ಅವರುಗಳನ್ನು ತಮ್ಮ ಮನೆಯಲ್ಲಿಯೇ ಭೇಟಿ ಆಗಿದ್ದಾರೆ. ಅತೃಪ್ತ ಶಾಸಕರ ಗುಂಪಿನ ನಾಯಕತ್ವ ವಹಿಸಿಕೊಳ್ಳಲು ರಮೇಶ್ ಮುಂದಾಗಿದ್ದಾರಾ ಎಂಬ ಅನುಮಾನವೂ ಇದರಿಂದ ಮೂಡಿದೆ.

English summary
BJP president Amit Shah warns Karnataka BJP about destabilizing coalition government. He said 'If government fell BJP should not be blame by people about it'. Amit Shah planing bigger things for Lok Sabha election in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X