ಮತ್ತೆ ಬರ್ತಿದ್ದಾರೆ ಅಮಿತ್ ಶಾ, ಈ ಬಾರಿ ಯಾವ ಮಠಗಳಿಗೆ ಭೇಟಿ ಕೊಡ್ತಾರೆ?

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಾಳೆ (ಏಪ್ರಿಲ್ 27)ರಂದು ಮೂರು ದಿನಗಳ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ಈ ಬಾರಿಯೂ ಅವರ ಪ್ರವಾಸ ಪಟ್ಟಿಯಲ್ಲಿ ಮಠ ಹಾಗೂ ದೇವಸ್ಥಾನಗಳ ಭೇಟಿಗೆ ಸಾಕಷ್ಟು ಅವಕಾಶ ನೀಡಲಾಗಿದೆ.

ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಲಿರುವ ಅಮಿತ್ ಶಾ ಅವರು, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಚಿತ್ರದುರ್ಗ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಮತಕ್ಷೇತ್ರಗಳಲ್ಲಿ ರೋಡ್ ಶೋ, ಸಮಾವೇಶ ಮತ್ತು ಸಭೆಗಳನ್ನು ನಡೆಸಲಿದ್ದಾರೆ.

ನಾಳೆ ಮೊದಲಿಗೆ ಬಿಸಿಲ ನಾಡು ಬಳ್ಳಾರಿಗೆ ಬಂದಿಳಿಯುವ ಅಮಿತ್ ಶಾ ಅವರ ಮೂರು ದಿನದ ರಾಜ್ಯ ಪ್ರವಾಸ ವೇಳಾಪಟ್ಟಿ ಇಂತಿದೆ ನೋಡಿ...

Amit Shah visiting Karnataka for 3 days from April 27
ಏಪ್ರಿಲ್ 27
* ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ
* ಕನಕ ದುರ್ಗಮ್ಮ ದೇವಾಲದಿಂದ ರೋಡ್‌ ಶೋ
* ಬಳ್ಳಾರಿಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರೊಂದಿಗೆ ಸಭೆ
* ಕೊಪ್ಪಳದ ಗವಿ ಮಠಕ್ಕೆ ಭೇಟಿ
* ಕುಕನೂರಿನಲ್ಲಿ ಸಾರ್ವಜನಿಕ ಸಭೆ
* ಗಂಗಾವತಿಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ
Amit Shah visiting Karnataka for 3 days from April 27

ಏಪ್ರಿಲ್ 28
* ಕೂಡಲ ಸಂಗಮಕ್ಕೆ ಭೇಟಿ
* ಬೀಳಗಿಯಲ್ಲಿ ಸಾರ್ವಜನಿಕರೊಂದಿಗೆ ಸಭೆ
* ಬಾಗಲಕೋಟೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಸಭೆ
* ತಿಕೋಟಾದಲ್ಲಿ ಸಾರ್ವಜನಿಕರೊಂದಿಗೆ ಸಂವಾದ
* ವಿಜಯಪುರದಲ್ಲಿ ರೋಡ್ ಶೋ
* ಸಿದ್ದೇಶ್ವರ ದೇವಾಲಯಕ್ಕೆ ಭೇಟಿ
* ಖಾಸಗಿ ಹೋಟೆಲ್‌ನಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಸಭೆ

Amit Shah visiting Karnataka for 3 days from April 27

ಏಪ್ರಿಲ್ 29
* ದಾವಣಗೆರೆ ದುಗ್ಗಮ್ಮ ದೇವಾಲಯಕ್ಕೆ ಭೇಟಿ
* ಜಿಎಂಐಟಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಸಭೆ
* ಹಿರಿಯೂರಿನಲ್ಲಿ ಸಾರ್ವಜನಿಕ ಸಭೆ
* ತುಮಕೂರಿನಲ್ಲಿ ರೋಡ್‌ ಶೋ
* ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಸಾರ್ವಜನಿಕರೊಂದಿಗೆ ಸಂವಾದ
* ಗೌರಿಬಿದನೂರಿನಲ್ಲಿ ಸಾರ್ವಜನಿಕರೊಂದಿಗೆ ಸಭೆ
* ರಾತ್ರಿಯೇ ದೆಹಲಿಗೆ ಪ್ರಯಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+