ಅಮಿತ್ ರಾಜ್ಯ ಪ್ರವಾಸ; ನಿಗದಿಯಾದ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಡಿಸೆಂಬರ್ 30 : ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಆಗಮಿಸಿದ್ದಾರೆ. ನಿಗದಿಯಾಗಿರುವಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ತಮ್ಮ ಆರ್.ಟಿ.ನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ (ಗುರುವರ) ಸಚಿವ ಸಂಪುಟದಲ್ಲಿ ಮೀಸಲಾತಿ ಬಗ್ಗೆ ಮಾಡಿರುವ ತೀರ್ಮಾನಗಳ ಬಗ್ಗೆ ಸ್ಥೂಲವಾದ ವಿವರಣಗಳನ್ನು ಇಂದು ಮಧ್ಯಾಹ್ನದೊಳಗೆ ಬಿಡುಗಡೆ ಮಾಡಲಾಗುವುದು . ಕೇಂದ್ರ ಸಚಿವರ ಪ್ರವಾಸದ ನಂತರ ಈ ನಿರ್ಣಯಗಳನ್ನು ಹಂಚಿಕೊಳ್ಳಲಾಗುವುದು. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಹಾಗೂ ಅದರ ಅನುಷ್ಠಾನದ ರೀತಿಯನ್ನು ವಿವರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು

ಗೋವಾ ಮುಖ್ಯಮಂತ್ರಿಗಳಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ದೇಶ ಕಾನೂನಿನಿಂದ ನಡೆಯುತ್ತಿದೆ. ಅಂತರ ರಾಜ್ಯ ಜಲ ವಿವಾದ ಕಾಯ್ದೆ ಇದೆ. ಸುಪ್ರೀಂಕೋರ್ಟ್ ಇದೆ, ನ್ಯಾಯ ಮಂಡಳಿಯಿದೆ. ಈ ಪ್ರಕರಣದಲ್ಲಿ ನ್ಯಾಯ ಮಂಡಳಿ ನಿರ್ಧಾರವನ್ನು ತಿಳಿಸಿದೆ. ನರೇಂದ್ರ ಮೋದಿಯವರ ಸರ್ಕಾರ 2018 ರಲ್ಲಿಯೇ ಅಧಿಸೂಚನೆ ಹೊರಡಿಸಿದೆ. ಈಗ ಡಿಪಿಆರ್ ಅನುಮೋಡಿಸಿದ್ದಾರೆ. ಇದೆಲ್ಲವೂ ಕಾನೂನು ಬದ್ಧವಾಗಿದೆ. ಕರ್ನಾಟಕ ಏನೇ ಮಾಡಿದರೂ ಕಾನೂನು ಬದ್ಧವಾಗಿ ಮಾಡುತ್ತೇವೆ. ಡಿಪಿಆರ್ ಅನುಮೋದನೆಯ ಮೂಲಕ ಮುಂದಿನ ಕೆಲಸಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಕಾನೂನು ಬದ್ಧವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನ್ಯಾಯಮಂಡಲಿಯು ನಮ್ಮ ಹಾಗೂ ಗೋವಾ ಬೇಡಿಕೆಯನ್ನು ಆಲಿಸಿದೆ. ಯಾರಿಗೂ ಧಕ್ಕೆಯಾಗದಂತೆ ನ್ಯಾಯಮಂಡಲಿ ತೀರ್ಪು ನೀಡಿದೆ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು.

Amit Shah State Visit No Change In Scheduled Programs Basavaraj Bommai Said

ಆದರ್ಶಮಯವಾದ ತಾಯಿ ಮಗನ ಸಂಬಂಧ: ಬಸವರಾಜ ಬೊಮ್ಮಾಯಿ

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ನಿಧನಕ್ಕೆ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿ, ಪ್ರಧಾನಿ ಮೋದಿಯವರು ಹಾಗೂ ಪೂಜ್ಯ ತಾಯಿ ಹೀರಾಬೇನ್ ಅವರದು ಆದರ್ಶಮಯವಾದ ತಾಯಿ ಮಗನ ಸಂಬಂಧವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ತಾಯಿಯವರು ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ನಮಗೆಲ್ಲರಿಗೂ ದು:ಖದ ಸಂಗತಿಯಾಗಿದೆ. ಪ್ರಧಾನಿ ಮೋದಿಯವರು ತೋರಿಸಿರುವ ಗೌರವ, ಪ್ರೀತಿ ಅನನ್ಯವಾದುದು. ಹೀರಾಬೇನ್ ತಾಯಿ ಮಗನಿಗೆ ತೋರಿಸಿರುವ ಪ್ರೀತಿ ವಾತ್ಸಲ್ಯವನ್ನು ನಾವೆಲ್ಲ ನೋಡಿದ್ದೇವೆ. ತಾಯಿ ಬಹಳ ಸರಳ, ಆದರೆ ಅಷ್ಟೇ ವಿಶೇಷ ಎಂದು ನರೇಂದ್ರ ಮೋದಿಯವರು ಹಲವು ಬಾರಿ ಹೇಳಿದ್ದಾರೆ. ಇಡೀ ದೇಶಕ್ಕೆ ಆದರ್ಶಮಯವಾದ ತಾಯಿ ಮತ್ತು ಮಗನ ಸಂಬಂಧವಾಗಿತ್ತು. ಆ ತಾಯಿ ಎಂದೂ ಕೂಡ ಮಗ ಯಾವುದೇ ಹುದ್ದೆಯಲ್ಲಿದ್ದರೂ, ಮಗನಾಗಿಯೇ ನೋಡಿದ್ದಾರೆಯೇ ಹೊರತು , ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ನೋಡಿರಲಿಲ್ಲ. ಇದು ಆ ತಾಯಿಯ ತಾಯ್ತನ ತೋರಿಸುತ್ತದೆ. ಅವರು ತನ್ನ ಕರ್ತವ್ಯವನ್ನು ಮಾಡಿ ನರೇಂದ್ರ ಮೋದಿಯವರಿಗೆ ಆದರ್ಶ, ತತ್ವನಿಷ್ಠೆ, ದೇಶಭಕ್ತಿಯನ್ನು ತುಂಬಿದ್ದಾರೆ. ಅವೆಲ್ಲ ಗುಣಗಳು ಮೋದಿಯವರಲ್ಲಿ ನೋಡುತ್ತಿದ್ದೇವೆ ಎಂದರು.

ಇಳಿವಯಸ್ಸಿನಲ್ಲಿಯೂ ಕರ್ತವ್ಯ ಪಾಲನೆ

ಅವರು ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಊಟ ಮಾಡಿಸಿದ್ದಾರೆ. ಹಣವನ್ನೂ ನೀಡಿದ್ದಾರೆ. ತಾಯಿಯಾಗಿ ತನ್ನ ಕರ್ತವ್ಯವನ್ನು ಇಳಿ ವಯಸ್ಸಿನಲ್ಲಿಯೂ ಕೂಡ ಅವರು ಮರೆತಿರಲಿಲ್ಲ. ನರೇಂದ್ರ ಮೋದಿಯವರು ಅಷ್ಟೇ ಪ್ರೀತಿ ಪ್ರೇಮ ತೋರಿಸಿದದು, ತಾಯಿಯ ಭಾವನೆಗಳನ್ನು ಅರಿತು ನಡೆದುಕೊಂಡ ರೀತಿ ಆದರ್ಶವಾಗಿದೆ. ಅವರು ಎಲ್ಲ ಪ್ರಮುಖ ಸಂದರ್ಭದಲ್ಲಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ದೇಶಕ್ಕೆ ಇದು ಮಾದರಿ. ತಾಯಿ ಮಕ್ಕಳ ಸಂಬಂಧ,ಅಣ್ಣ ತಮ್ಮಂದಿರ ಸಂಬಂಧ, ಅಕ್ಕತಂಗಿಯರ ಸಂಬಂಧ ಈ ದೇಶದ ಪರಂಪರೆ ಹಾಗೂ ಸಂಸ್ಕೃತಿ. ಈ ಸಂಬಂಧಗಳಲ್ಲಿ ನಮ್ಮ ದೇಶದ ಐಕ್ಯತೆ ಇದೆ. ಹೀರಾಬೇನ್ ಅವರು ಆದರ್ಶ ತಾಯಿಯಾಗಿ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಅಂತೆಯೇ ಒಬ್ಬ ಆದರ್ಶ ಮಗನಾಗಿ ನರೇಂದ್ರ ಮೋದಿಯವರು ದೇಶದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.

Amit Shah State Visit No Change In Scheduled Programs Basavaraj Bommai Said

ಕರ್ಮಯೋಗಿ

ಮೋದಿಯವರು ಸಂತಾಪ ಸಂದೇಶದಲ್ಲಿ ತಾಯಿಯನ್ನು ಕರ್ಮಯೋಗಿ ಎಂದು ಬಣ್ಣಿಸಿದ್ದರು. ನರೇಂದ್ರ ಮೋದಿಯವರೂ ಕರ್ಮಯೋಗಿಯಾಗಿದ್ದಾರೆ. ತಾಯಿಯವರ ಕೊನೆಯ ಕರ್ಮಗಳನ್ನು ಮಗನಾಗಿ ಮಾಡುತ್ತಿದ್ದಾರೆ. ಅದರ ನಂತರ ಯಥಾಪ್ರಕಾರ ತಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಭಗವಹಿಸಲಿದ್ದಾರೆ. ಇದು ನರೇಂದ್ರ ಮೋದಿಯವರ ಕರ್ತವ್ಯ ಪ್ರಜ್ಞೆಯನ್ನು ಬಿಂಬಿಸುತ್ತದೆ. ತಾಯಿ ಆತ್ಮಕ್ಕೆ ಭಗವಂತ ಶಾಂತಿ ದೊರಕಲಿ. ಈ ದು:ಖವನ್ನು ಭರಿಸುವ ಶಕ್ತಿಯನ್ನು ಪ್ರಧಾನಿ ಮೋದಿ ಹಾಗೂ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+