ಹೈಕಮಾಂಡ್‌ ಸೂಚನೆ: ತುರ್ತಾಗಿ ಯಡಿಯೂರಪ್ಪ ರಾಜ್ಯಕ್ಕೆ ವಾಪಸ್

ಬೆಂಗಳೂರು, ಆಗಸ್ಟ್ 7: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತಿಮ ದರ್ಶನ ಪಡೆದು ವಿಮಾನದ ಮೂಲಕ ವಾಪಸಾಗುತ್ತಿದ್ದಾರೆ.ಕರ್ನಾಟಕ ಸಂಪುಟ ಸಭೆ ವಿಸ್ತರಣೆ ಕುರಿತು ಗೃಹ ಸಚಿವ ಅಮಿತ್ ಶಾ ಜೊತೆ ಯಡಿಯೂರಪ್ಪ ಭೇಟಿ ಬೆಳಗ್ಗೆ 11 ಗಂಟೆ ನಿಗದಿಯಾಗಿತ್ತು.

ಆದರೆ ಸುಷ್ಮಾ ಸ್ವರಾಜ್ ಅವರ ನಿಧನದಿಂದಾಗಿ ಇನ್ನು ಒಂದೆರೆಡು ದಿನ ಸಂಪುಟ ವಿಸ್ತರಣೆ ವಿಚಾರ ಬೇಡ, ರಾಜ್ಯದಲ್ಲಿ ನೆರೆ ಇದೆ, ಅದರ ವೀಕ್ಷಣೆ ಮಾಡಿ ಬನ್ನಿ ಎಂದು ಹೈಕಮಾಂಡ್ ನೀಡಿರುವ ಆದೇಶದ ಮೇರೆಗೆ ಯಡಿಯೂರಪ್ಪ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.

Amit Shah Meeting Canceled Yeddyurappa Return To Bengaluru

ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿರುವಾಗ ಹೇಗೆ ಮುಖ್ಯಮಂತ್ರಿ ದೆಹಲಿ ಪ್ರವಾಸ ತೆರಳಿದ್ದಾರೆ ಎನ್ನುವ ಕುರಿತು ಮಾತುಗಳು ಕೂಡ ಕೇಳಿಬಂದಿದ್ದವು. ಕರ್ನಾಟಕದಲ್ಲಿ ಸ್ಥಿತಿ ಸುಧಾರಿಸಿದ ಬಳಿಕ ದೆಹಲಿಗೆ ಬನ್ನಿ ಚರ್ಚಿಸೋಣ ಎಂದು ಹೈಕಮಾಂಡ್ ತಿಳಿಸಿದೆ. ಇದೀಗ ಅಧಿಕಾರಿಗಳ ಜೊತೆ ವಿಮಾನದಲ್ಲಿ ವಾಪಸಾಗಲಿದ್ದಾರೆ.

ಯಡಿಯೂರಪ್ಪ ಹೇಳಿದ್ದಿಷ್ಟು'' ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇದೆ, ಅದರ ಸಮೀಕ್ಷೆ ನಡೆಸಿ, ಅಲ್ಲಿಯ ಸ್ಥಿತಿ ಸುಧಾರಿಸಿದ ಮೇಲೆ ದೆಹಲಿಗೆ ಬನ್ನಿ ಎಂದು ಹೈಕಮಮಾಂಡ್ ಹೇಳಿದೆ. ಹಾಗಾಗಿ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ'' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+