‘ಕರುನಾಡ ಜಾಗೃತಿ ಯಾತ್ರೆ' ಅಮಿತ್ ಶಾ ಪ್ರವಾಸ, ಕಾರ್ಯಕ್ರಮಗಳು
ಬೆಂಗಳೂರು, ಮಾರ್ಚ್ 25 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಮಾ.26 ಮತ್ತು 27ರಂದು ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.
'ಕರುನಾಡ ಜಾಗೃತಿ ಯಾತ್ರೆ' ಹೆಸರಿನಲ್ಲಿ ಅಮಿತ್ ಶಾ ರಾಜ್ಯ ಪ್ರವಾಸ ಮಾಡಲಿದ್ದಾರೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಅವರು ಭೇಟಿ ನೀಡಲಿದ್ದಾರೆ.
ಮಾ.26ರ ಬೆಳಗ್ಗೆ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದು, ಮೊದಲು ತುಮಕೂರಿಗೆ ಭೇಟಿ ನೀಡಲಿದ್ದಾರೆ. ಸೋಮವಾರ ತುಮಕೂರು, ತಿಪಟೂರು, ಶಿವಮೊಗ್ಗ, ತೀರ್ಥಹಳ್ಳಿಗೆ ಅಮಿತ್ ಶಾ ಭೇಟಿ ನೀಡಲಿದ್ದಾರೆ.

ಮಾ.27ರಂದು ದಾವಣಗೆರೆ, ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಅಮಿತ್ ಶಾ ಕಾರ್ಯಕ್ರಮಗಳು
ಮಾರ್ಚ್ 26
* ಬೆಳಗ್ಗೆ 9.40 : ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ
* 11 ರಿಂದ 12 : ತೆಂಗುಬೆಳೆಗಾರರ ಸಮಾವೇಶ ತಿಪಟೂರು
* 1.20 ರಿಂದ 1.50 : ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ
* 2.45 ರಿಂದ 3.45 : ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶ
* 4.30 ರಿಂದ 5.15 : ಶಿವಮೊಗ್ಗದಲ್ಲಿ ರೋಡ್ ಶೋ
* 6.20 ರಿಂದ 7.20 : ಉದ್ಯಮಿಗಳ ಜೊತೆ ಸಂವಾದ, ಶಿವಮೊಗ್ಗ ನಗರ
* 7.30 ರಿಂದ 8.30 : ಬೆಕ್ಕಿನ ಕಲ್ಮಠಕ್ಕೆ ಭೇಟಿ
* 8.45 ಭೋಜನ
ಮಾರ್ಚ್ 27
* ಬೆಳಗ್ಗೆ 10 ರಿಂದ 10.40 : ಮುಷ್ಠಿ ಧ್ಯಾನ ಅಭಿಯಾನದಲ್ಲಿ ಭಾಗಿ. ದೊಡ್ಡಬಾತಿ ದಾವಣಗೆರೆ
* 11.15 ರಿಂದ 11.45 : ಪತ್ರಿಕಾಗೋಷ್ಠಿ, ದಾವಣಗೆರೆ
* 12.30 ರಿಂದ 1.50 : ಸಿರಿಗೆರೆ ಮಠಕ್ಕೆ ಭೇಟಿ
* 1.50 ರಿಂದ 2.20 : ಮಾದರ ಚೆನ್ನಯ್ಯ ಮಠಕ್ಕೆ ಭೇಟಿ
* 2.30 ರಿಂದ 2.50 : ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ
* 3 ರಿಂದ 3.20 : ಮದಕರಿ ನಾಯಕ, ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ
* 3.30ರಿಂದ 4.30 : ಮೂರು ಜಿಲ್ಲೆಗಳ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶ
* 5 ರಿಂದ 6 : ಎಸ್.ಟಿ.ಸಮಾವೇಶ : ಚಳ್ಳಕೆರೆ, ಚಿತ್ರದುರ್ಗ












Click it and Unblock the Notifications