ಆಂಬುಲೆನ್ಸ್ ತಡೆದ ಪೊಲೀಸರು, ನಿಜಕ್ಕೂ ಆಗಿದ್ದೇನು?

Written By:
Subscribe to Oneindia Kannada

ಬೆಂಗಳೂರು, ಜೂನ್, 29: ಮುಖ್ಯಮಂತ್ರಿ ಬರುತ್ತಾರೆ ಎಂಬ ಕಾರಣಕ್ಕೆ ರೋಗಿಯಿದ್ದ ಆಂಬುಲೆನ್ಸ್ ತಡೆದ ಪೊಲೀಸರು, ಪೊಲೀಸರ ವರ್ತನೆಗೆ ಜನರ ಆಕ್ರೋಶ, ಅಂತಿಮವಾಗಿ 20 ನಿಮಿಷಗಳ ನಂತರ ಆಂಬುಲೆನ್ಸ್ ಗೆ ದಾರಿ, ಜನರಿಂದ ಸಾಮಾಜಿಕ ತಾಣದಲ್ಲಿ ಆಕ್ರೋಶ. ಬುಧವಾರ ಚಿಕಿತ್ಸೆ ನಂತರ ಚೇತರಿಸಿಕೊಂಡ ರೋಗಿ.. ಇದು ಸಿಎಂ ಬರುತ್ತಾರೆ ಎಂದು ಹೊಸಕೋಟೆ ಬಳಿ ಪೊಲೀಸರು ಆಂಬುಲೆನ್ಸ್ ತಡೆದ ಪ್ರಕರಣದ ವಿವರ.

ಪೊಲೀಸರ ಪರ ಬುಧವಾರ ಬ್ಯಾಟಿಂಗ್ ನಡೆಸಿದ ಐಜಿಪಿ ಸೀಮಂತ್ ಕುಮಾರ್" ಆಂಬುಲೆನ್ಸ್ ತಡೆಯಲಾಗಿಲ್ಲ, ಎರಡು ನಿಮಿಷದ ಒಳೆಗೆ ದಾರಿ ಮಾಡಿಕೊಡಲಾಗಿದೆ" ಎಂದು ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ್ದಾರೆ. [ಶಾಲಾ ಮಕ್ಕಳು ಯಾಕೆ ಓದಬೇಕು ಸಿದ್ದು ರಾಜಕೀಯ ಜೀವನ?]

ಅಲ್ಲದೇ ವಿಡಿಯೋ ಹಾಕಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದವರ ವಿರುದ್ಧ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ವಿಡಿಯೋನೇ ಮೂರುವರೆ ನಿಮಿಷ ಇದೆ, ನೀವು ಹೇಗೆ ಎರಡು ನಿಮಿಷ ಅಂತೀರಾ? ಅನ್ನೋದು ಜನರ ಪ್ರಶ್ನೆ.

karnataka

ಆಗಿದ್ದೇನು?
ಇದು ಜೂನ್ 25ರಂದು ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಅಂದು ಮುಖ್ಯಮಂತ್ರಿಗಳು ಈ ಮಾರ್ಗದಲ್ಲಿ ಹಾದು ಹೋಗುವ ಸಂದರ್ಭ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು. ಹೊಸಕೋಟೆ ಜಂಕ್ಷನ್ ಸಮೀಪ ಮುಖ್ಯಮಂತ್ರಿಗಳು ಕಾರ್ಯಕ್ರಮವೊಂದಕ್ಕೆ ಹೋಗಬೇಕಾಗಿದ್ದರಿಂದ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಪಕ್ಕದ ಮಾರ್ಗದಿಂದ ಬರಬೇಕಾಗಿದ್ದ ಎಲ್ಲರನ್ನೂ ನಿಲ್ಲಿಸಲಾಗಿತ್ತು. ಅದರಲ್ಲಿ ಆಂಬುಲೆನ್ಸ್ ಸಹ ಇತ್ತು.['ಹಾಳಾಗಿ ಹೋಗ್ತೀಯಾ' ಸಿಎಂಗೆ ಕೊಳ್ಳೇಗಾಲದ ವ್ಯಕ್ತಿಯಿಂದ ಶಾಪ]

10-15ನಿಮಿಷವಾದರೂ ಟ್ರಾಫಿಕ್ ಕದಲಲಿಲ್ಲ. ಕೊನೆಗೆ ಆಂಬುಲೆನ್ಸ್‌ನಿಂದ ಇಳಿದು ಬಂದು ಯುವಕನೊಬ್ಬ ಪೊಲೀಸರಲ್ಲಿ ಪರಿ ಪರಿಯಾಗಿ ಮನವಿ ಮಾಡಿಕೊಂಡ. ಜನ ಸಹ ಆಂಬುಲೆನ್ಸ್ ಗೆ ದಾರಿ ಮಾಡಿಕೊಡಲು ಹೇಳಿದ್ದರು. ಆಂಬುಲೆನ್ಸ್ ತಡೆದ ವಿಡಿಯೋ ಇಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking and shameless case of misuse of VIP treatment, an ambulance was reportedly stopped to allow Karnataka Chief Minister Siddaramaiah's convoy in Bengaluru. The incident took place at Hoskote Junction in Bengaluru on June 25, Tuesday night, when an ambulance carrying a patient, who was battling for life, was made to halt in a traffic jam to pave way for CM's convoy.
Please Wait while comments are loading...