ಡಿ. 24ರಿಂದ ಸಾಂಸ್ಕೃತಿಕ ಹಬ್ಬ ಆಳ್ವಾಸ್ ವಿರಾಸತ್-2015
ಉಡುಪಿ, ಡಿಸೆಂಬರ್, 19: ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ಹಬ್ಬದ ವೈಭವಭರಿತ ದೃಶ್ಯಗಳು ಹಸಿಯಾಗಿರುವಾಗಲೇ ಮತ್ತೊಂದು ಸಾಂಸ್ಕೃತಿಕ ಹಬ್ಬಕ್ಕೆ ವೇದಿಕೆ ಅಣಿಯಾಗುತ್ತಿದೆ. ನೂರಾರು ಗಣ್ಯರ ಆಗಮನಕ್ಕೆ ಸಾಕ್ಷಿಯಾಗಲು ಸಕಲ ಸಿದ್ಧತೆ ನಡೆಸುತ್ತಿದೆ.
'ಆಳ್ವಾಸ್ ವಿರಾಸತ್-2015' ಎಂಬ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಡಿಸೆಂಬರ್ 24ರ ಗುರುವಾರದಿಂದ 27ರ ಭಾನುವಾರದವರೆಗೆ ಉಡುಪಿಯ ಪುತ್ತಿಗೆ ಬಳಿಯ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯಲಿದೆ.[ಹೊಸತನದ ಹುಡುಕಾಟ ಇಂದಿನ ಅಗತ್ಯತೆ: ಡಾ.ಮೋಹನ್ ಆಳ್ವ ಸಂದರ್ಶನ]

ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ, ಮೂಡುಬಿದಿರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದಲ್ಲಿ ನಡೆಯುವ ಆಳ್ವಾಸ್ ವಿರಾಸತ್-2015 ಎಂಬ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಉದ್ಘಾಟಕರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಗೌರವಾಧ್ಯಕ್ಷರಾಗಿ ಮೀನುಗಾರಿಕ ಸಚಿವ ಅಭಯಚಂದ್ರ ಜೈನ್ ಆಗಮಿಸಲಿದ್ದಾರೆ.[ರಂಗಕರ್ಮಿ ಎ ಎಸ್ ಮೂರ್ತಿ ಸ್ಮರಣೆಗೆ ಕಲೋತ್ಸವ]
ಸಾಂಸ್ಕೃತಿಕ ಕಾರ್ಯಕ್ರಮ
ನಾದಸುರಭಿ : 4 ವಯೋಲಿನ್ ಗಳ ವಿಶೇಷ ಫ್ಯೂಜನ್, ಮೈಸೂರು ನಾಗರಾಜ್, ಡಾ. ಮೈಸೂರು ಮಂಜುನಾಥ್, ವಿದ್ವಾನ್ ಗಣೇಶ್, ವಿದ್ವಾನ್ ಕುಮರೇಶ್, ಚೆನ್ನೈ
ಸಂಗೀತ ರಸಮಂಜರಿ : ಡಾ. ಎಸ್ ಪಿ ಬಾಲಸುಬ್ರಹ್ಮಣ್ಯ, ಖ್ಯಾತ ಗಾಯಕರು
ಕವ್ವಾಲಿ ಮತ್ತು ಸೂಫಿ ಹಾಡುಗಳು : ಉಸ್ತಾದ್ ಮುನಾವರ್ ಮತ್ತು ಬಳಗ, ಮುಂಬೈ [ಗೆರೆಗಳೊಂದಿಗೆ ಆಟವಾಡುತ್ತಾ ಬದುಕು ಕಟ್ಟಿಕೊಂಡ ಕಲಾವಿದ]
ನಾದ ಸಂಗಮ: ವಿಶ್ವದ ಸಕಲ ಚರ್ಮವಾದ್ಯಗಳು- ಕಲೈಮಾಮಣಿ ಶಿವಮಣಿ, ಕೀ ಬೋರ್ಡ್- ಹರ್ಮೀತ್ ಮನ್ಸೇಟ, ಮ್ಯಾಂಡೋಲಿನ್ -ಯು ರಾಜೇಶ್

ಪ್ರಶಸ್ತಿ ಪ್ರದಾನ:
ಆಳ್ವಾಸ್ ವಿರಾಸತ್-2015 ಪ್ರಶಸ್ತಿ ವಿಜೇತರು: ಪದ್ಮಶ್ರೀ, ಪದ್ಮಭೂಷಣ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ, ಖ್ಯಾತ ಗಾಯಕರು
ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ ವಿಜೇತರು: ಪದ್ಮಶ್ರೀ ಡಾ. ಮನುಪರೇಖ್, ನವದೆಹಲಿ [ಕನ್ನಡದ 10 ಮೇರು ಸಾಧಕರಿಗೆ 'ಆಳ್ವಾಸ್ ನುಡಿಸಿರಿ ಪ್ರಶಸ್ತಿ]
ಚಿತ್ರಕಲಾ ಶಿಬಿರ
* ಡಿಸೆಂಬರ್ 20 ರಿಂದ 27ರವರೆಗೆ ರಾಷ್ಟ್ರಮಟ್ಟದ ಆದಿವಾಸಿ ಕಲಾವಿದರ ಚಿತ್ರಕಲಾ ಶಿಬಿರ
* ಡಿಸೆಂಬರ್ 23ರಿಂದ 27ರವರೆಗೆ ರಾಷ್ಟ್ರಮಟ್ಟದ ಸಮಕಾಲೀನ ಕಲಾವಿದರ ಚಿತ್ರಕಲಾ ಶಿಬಿರ












Click it and Unblock the Notifications