Almatti Dam: ಡ್ಯಾಂ ಎತ್ತರ ಹೆಚ್ಚಳ, 15 ಗ್ರಾಮಗಳ ಮುಳುಗಡೆ; 5,600 ಎಕ್ರೆಗೆ ಪರಿಹಾರ ಕೇಳಿದ ಎಂಬಿ ಪಾಟೀಲ

ಬೆಂಗಳೂರು: ಆಲಮಟ್ಟಿ ಅಣೆಕಟ್ಟು (Almatti Dam) ಎತ್ತರ ಹೆಚ್ಚಳದಿಂದ ತಾವು ಪ್ರತಿನಿಧಿಸುತ್ತಿರುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ಗ್ರಾಮಗಳ 5,600 ಎಕರೆ ಮುಳುಗಡೆ ಆಗುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 1,000 ಎಕರೆಗಾದರೂ ಪರಿಹಾರ‌ ಕೊಡಬೇಕು ಎಂದು ಬೃಹತ್ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಜಲಸಂಪನ್ಮೂಲ ಸಚಿವ ಎನ್.ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಅವರು, ಅಣೆಕಟ್ಟೆಯನ್ನು ಈಗಿರುವ 519.60 ಮೀಟರ್ ನಿಂದ 524.256 ಮೀಟರ್ ಗೆ ಎತ್ತರಿಸಲಾಗುತ್ತಿದೆ. ಇದರಿಂದಾಗಿ 184 ಗ್ರಾಮಗಳ 75,563 ಎಕರೆ ಮುಳುಗಡೆ ಆಗುತ್ತಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ 31 ಗ್ರಾಮಗಳಿದ್ದು, ಬಬಲೇಶ್ವರ ವಿಧಾನಸಭೆ ಕ್ಷೇತ್ರದ 15 ಹಳ್ಳಿಗಳಿವೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ 5,600 ಎಕರೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.

Almatti Dam

ಈ ಸಂಬಂಧ ಸದ್ಯ ಪ್ರಸ್ತಾಪಿಸಿರುವ ಅಂದಾಜು 3,000 ಕೋಟಿ ರೂಪಾಯಿ ಪಾವತಿ ಸಂದರ್ಭದಲ್ಲಿ ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ಜಮೀನುಗಳಿಗೆ ಕನಿಷ್ಠ 500 ಕೋಟಿ ಮೀಸಲಿಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಈಗಾಗಲೇ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವ ಚಿಕ್ಕಗಲಗಲಿ, ಶಿರಬೂರು, ಹೊಸೂರು ಮತ್ತು ಕಣಬೂರು ಗ್ರಾಮಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ, ಮೊದಲ ಸುತ್ತಿನಲ್ಲಿ 500 ಕೋಟಿ ರೂ.ಗಳಷ್ಟು ಪರಿಹಾರ ಕೊಡಬೇಕು.‌ ಉಳಿದ 10 ಗ್ರಾಮಗಳಿಗೆ ಕೂಡ ಅಧಿಸೂಚನೆ ಹೊರಡಿಸಿ, ಪರಿಹಾರ ವಿತರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ ಮನವಿ ಮಾಡಿದ್ದಾರೆ.

ಇಂದಿನ ಆಲಮಟ್ಟಿ ನೀರಿನ ಮಟ್ಟ ಎಷ್ಟಿದೆ?

ಈ ವರ್ಷ ಮಳೆಗಾಲದಲ್ಲಿ ಮಳೆ ಕೊರತೆ ನಡುವೆಯು ಕಬಿನಿ ನಂತರ ಆಲಮಟ್ಟಿ ಜಲಾಶಯವರು ಭರ್ತಿ ಹಂತಕ್ಕೆ ತಲುಪಿತ್ತು. ಒಳಹರಿವು ಹೆಚ್ಚಿಸಿಕೊಳ್ಳುತ್ತಲೇ ಇದ್ದ ಈ ಅಣೆಕಟ್ಟಿನ ಜಲಾನಯನ ಪ್ರದೇಶಗಳ ರೈತರು, ಕುಡಿಯುವ ನೀರಿನ ಬಳಕೆಯ ಚಿಂತೆಯನ್ನು ದೂರು ಮಾಡಿತು. ಇಂದು ಸೆಪ್ಟೆಂಬರ್ 30ರಂದು ಆಲಮಟ್ಟಿ ಡ್ಯಾಂ ಹೊರ ಹರಿವು ಒಳಹರಿವಿಗಿಂತ ಹೆಚ್ಚಿದೆ.

ಕಳೆದ ವರ್ಷಕ್ಕಿಂತ ಡ್ಯಾಂನಲ್ಲಿ ನೀರು ಕಡಿಮೆ

ಹೌದು, ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಸಾಮರ್ಥ್ಯ 151.74ಟಿಎಂಸಿ ಪೈಕಿ ಇವತ್ತಿಗೆ 84.24 ಟಿಸಿಎಂ ನೀರಿನ ಸಂಗ್ರಹವಿದೆ. ಈ ವರ್ಷದ ಬರಗಾಲ ಪರಿಸ್ಥಿತಿಗೆ ಇದು ಉತ್ತಮ ನೀರಿನ ಸ್ಥಿತಿ ಎನ್ನಬಹುದು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 2025ರ ಸೆಪ್ಟೆಂಬರ್ 30ರಂದು ಇದೇ ಅವಧಿಯಲ್ಲಿ ನೀರಿನ ಸಂಗ್ರಹ 143.92ಟಿಎಂಸಿ ಇತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ಮಾಹಿತಿ ನೀಡಿದೆ.

ಇನ್ನು ಡ್ಯಾಂ ಒಳಹರಿವು ಇಂದು 1713 ಕ್ಯೂಸೆಕ್‌ಗಳಷ್ಟಿದ್ದು, ಹೊರ ಹರಿವು 6864 ಕ್ಯೂಸೆಕ್ಸ್‌ಗಳಷ್ಟಿವೆ. ಹೊರ ಹರಿವು ಹೆಚ್ಚಾದಂತೆಲ್ಲ ಜಲಾಶಯದಲ್ಲಿನ ನೀರಿನ ಸಂಗ್ರವು ಕಡಿಮೆ ಆಗುತ್ತಾ ಸಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+