10 ಗಂಟೆ ಬಳಿಕವೂ ಹೋಟೆಲ್‌ನಲ್ಲಿ ಪಾರ್ಸೆಲ್‌ ಪಡೆಯಲು ಅವಕಾಶ?

ಬೆಂಗಳೂರು, ಮೇ 05; ಹೋಟೆಲ್‌ಗಳಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಗ್ರಾಹಕರು ಬೆಳಗ್ಗೆ 10ರ ಬಳಿಕವೂ ಬರಲು ಅನುಮತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಮನವಿ ಮಾಡಿದೆ.

ಸಂಘದ ಸದಸ್ಯರ ನಿಯೋಗ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಕೆ ಮಾಡಿದೆ. ಪ್ರಸ್ತುತ 10 ಗಂಟೆಯ ತನಕ ಹೋಟೆಲ್‌ಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.

ಹೋಟೆಲ್‌ಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಸರ್ಕಾರ ಅನುಮತಿ ನೀಡಿದೆ. ಆದರೆ ಬೆಳಗ್ಗೆ 10 ಗಂಟೆ ಬಳಿಕ ಜನರ ಸಂಚಾರಕ್ಕೆ ನಿರ್ಬಂಧವಿದೆ. ಆದ್ದರಿಂದ ಗ್ರಾಹಕರು ಆಗಮಿಸುತ್ತಿಲ್ಲ ಎಂದು ಸಂಘ ಹೇಳಿದೆ.

Allow Parcel Service In Hotels After 10 Am

10 ಗಂಟೆಯ ಬಳಿಕ ಹೋಟೆಲ್‌ಗಳಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಜನರು ಆಗಮಿಸಿದರೂ ಪೊಲೀಸರು ಅವರನ್ನು ಹಿಡಿಯುತ್ತಾರೆ. ಈ ಪರಿಸ್ಥಿತಿಯಲ್ಲಿ ಹೋಟೆಲ್‌ಗಳಿಗೆ ಅವಕಾಶ ನೀಡಿ ಪ್ರಯೋಜನವೇನು? ಎಂದು ಸಂಘ ಪ್ರಶ್ನಿಸಿದೆ.

ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಫುಡ್ ಡೆಲಿವರಿಗೆ ಅವಕಾಶ ನೀಡಿದೆ. ಆದರೆ ಎಲ್ಲಾ ಹೋಟೆಲ್ ಸ್ವಿಗ್ಗಿ, ಝೊಮೆಟೋ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. 6 ರಿಂದ 10ರ ಸಮಯದ ಕಾರಣದಿಂದಾಗಿ ಇಂತಹ ಹೋಟೆಲ್‌ಗಳಿಗೆ ನಷ್ಟವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿರ್ಮಾಣ ಹಂತದ ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ. ಅವರು ಹೋಟೆಲ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆನ್‌ಲೈನ್ ಮೂಲಕ ಅವರು ಆಹಾರ ತರಿಸಿಕೊಳ್ಳುವುದುದ ಕಷ್ಟ. ಆದ್ದರಿಂದ, ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಳಲ್ಲಿ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+