ಕೋವಿಡ್ ಚಿಕಿತ್ಸೆಗೆ ನೆರವಾಗಲಿದೆ ಆರೋಗ್ಯ ಸಂಜೀವಿನಿ ಪಾಲಿಸಿ
ಬೆಂಗಳೂರು, ಆಗಸ್ಟ್ 28: ಕರ್ನಾಟಕದಲ್ಲಿ ಗುರುವಾರ 9386 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 309792ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 84,987.
Recommended Video
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಚಿಕಿತ್ಸೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಕೋವಿಡ್ ಸೋಂಕಿತರ ಚಿಕಿತ್ಸಾ ವೆಚ್ಚಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಖಾಸಗಿ ಆಸ್ಪತ್ರೆಗಳಲ್ಲಿ ವೆಚ್ಚ ಅಧಿಕವಾಗುತ್ತಿದೆ.
ಕೋವಿಡ್ ಸೋಂಕಿತರು ಕೊರೊನಾ ಕವಚ ಮತ್ತು ಆರೋಗ್ಯ ಸಂಜೀವಿನಿ ವಿಮೆ ಪಾಲಿಸಿಗಳ ಮೂಲಕ ಚಿಕಿತ್ಸಾ ವೆಚ್ಚವನ್ನು ಭರಿಸಬಹುದಾಗಿದೆ. ಆರೋಗ್ಯ ಇಲಾಖೆಯೇ ಈ ಕುರಿತು ಟ್ವೀಟ್ ಮಾಡಿದೆ.
ಆರೋಗ್ಯ ಸಂಜೀವಿನಿ ವಿಮೆ ಪಾಲಿಸಿಯನ್ನು ಯಾರು ಪಡೆಯಬಹುದು?. ಎಷ್ಟು ವೆಚ್ಚದ ಚಿಕಿತ್ಸೆ ಲಭ್ಯವಿದೆ?. ಯಾವ-ಯಾವ ಆಸ್ಪತ್ರೆಗಳು ಈ ವ್ಯಾಪ್ತಿಗೆ ಬರುತ್ತವೆ ಎಂಬ ಮಾಹಿತಿ ಇಲ್ಲಿದೆ.

ಯಾರು ವಿಮೆ ಪಡೆಯಬಹುದು?
ಆರೋಗ್ಯ ಸಂಜೀವಿನಿ ಪಾಲಿಸಿಯನ್ನು 18 ರಿಂದ 25 ವರ್ಷದೊಳಗಿನ ಜನರು ಪಡೆಯಬಹುದಾಗಿದೆ. ಈ ಪಾಲಿಸಿಯಿಂದಾಗಿ ವೈಯಕ್ತಿಕ ಭದ್ರತೆ ದೊರೆಯಲಿದೆ. ತಂದೆ-ತಾಯಿ, ಪತಿ-ಪತ್ನಿ, ಅತ್ತೆ-ಮಾವ, 25 ವರ್ಷದೊಳಗಿನ ಅವಲಂಬಿತ ಮಕ್ಕಳು ಇದರ ಪ್ರಯೋಜನ ಪಡೆಯಬಹುದಾಗಿದೆ.

ಕೊರೊನಾ ಕವಚ
ಕೊರೊನಾ ಕವಚದ ಮೂಲಕ ವೈಯಕ್ತಿಕ ಅಥವ ಕುಟುಂಬ ಸಹಿತ ವಿಮೆ ಯೋಜನೆಯನ್ನು ಆಯ್ದುಕೊಳ್ಳಿ. ಕೊವಿಡ್ 19 ಕಾರಣದಿಂದ ಆಸ್ಪತ್ರೆಗೆ ದಾಖಲಾದಲ್ಲಿ ಮೂಲ ವೆಚ್ಚವನ್ನು ಸುಭದ್ರತೆಯ ಆಧಾರದಲ್ಲಿ ಭರಿಸಲಾಗುತ್ತದೆ ಅಥವ ಆಸ್ಪತ್ರೆಯ ಪ್ರತಿ ದಿನದ ವೆಚ್ಚ ಐಚ್ಛಿಕ ಭದ್ರತೆಯನ್ನು ಲಾಭದಾಯಕವಾಗಿ ಭರಿಸಲಾಗುವುದು. ವಿಮೆಯ ಮೊತ್ತ 50,000 ರಿಂದ 5,00,000.

ಯಾವ-ಯಾವ ವಿಮಾ ಕಂಪನಿ
ಕೊರೊನಾ ಕವಚ ಮತ್ತು ಆರೋಗ್ಯ ಸಂಜೀವಿನಿ ಪಾಲಿಸಿಗಳನ್ನು ಮಾರುಕಟ್ಟೆಗೆ ತರಲು ಐಆರ್‌ಡಿಎಐ 30 ಸಾಮಾನ್ಯ ಮತ್ತು ಆರೋಗ್ಯ ವಿಮಾನ ಕಂಪನಿಗಳಿಗೆ ಅನುಮತಿ ನೀಡಿದೆ. ಅವುಗಳ ವಿವರಗಳು ಚಿತ್ರದಲ್ಲಿವೆ ನೋಡಿ.

ವಿಮಾ ಕಂಪನಿಗಳ ವಿವರ
ಕೋವಿಡ್ ಸೋಂಕಿತರು ಕೊರೊನಾ ಕವಚ ಮತ್ತು ಆರೋಗ್ಯ ಸಂಜೀವಿನಿ ವಿಮೆ ಪಾಲಿಸಿಗಳ ಮೂಲಕ ಚಿಕಿತ್ಸಾ ವೆಚ್ಚವನ್ನು ಭರಿಸಬಹುದಾಗಿದೆ. ವಿಮೆ ಮಾಡಿಸಲು ಈ ಕಂಪನಿಗಳನ್ನು ಸಂಪರ್ಕಿಸಬೇಕಾಗುತ್ತದೆ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು











Click it and Unblock the Notifications