• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಾಸ್ಟ್‌ಟ್ಯಾಗ್ ಹಾಕಿಸಿಕೊಳ್ಳದ ವಾಹನ ಸವಾರರ ಪರದಾಟ ದೇವರಿಗೇ ಪ್ರೀತಿ

|

ಕೇಂದ್ರ ಸರಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದುಕೊಡುತ್ತಿರುವ ಹೆದ್ದಾರಿ ಸುಂಕ ವೆಚ್ಚದಲ್ಲಿ (ಟೋಲ್) ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎನ್ನುವಂತೆ, ಭಾರೀ ಪ್ರಮಾಣದಲ್ಲಿ ದುಡ್ಡು ಸೋರಿಕೆಯಾಗುತ್ತಿದ್ದ ನಂತರ, ಕೇಂದ್ರ ಭೂಸಾರಿಗೆ ಇಲಾಖೆ, ಫಾಸ್ಟ್‌ಟ್ಯಾಗ್ ಎನ್ನುವ ಹೊಸ ಪದ್ದತಿಯನ್ನು ಜಾರಿಗೆ ತಂದಿತು.

ಮೋದಿ ಸರಕಾರದಲ್ಲಿ ಎನರ್ಜಿಟಿಕ್ ಆಗಿ ಕೆಲಸ ಮಾಡುತ್ತಿರುವ ಸಚಿವರಲ್ಲಿ ನಿತಿನ್ ಗಡ್ಕರಿ ಪ್ರಮುಖರು. "ಹೆದ್ದಾರಿಯಲ್ಲಿ ಪ್ರಯಾಣಿಸುವವರು ಗಂಟೆಗಟ್ಟಲೆ ಟೋಲ್ ನಲ್ಲಿ ಕಾಯುವುದು ತಪ್ಪುತ್ತದೆ ಜೊತೆಗೆ, ಸರಕಾರಕ್ಕೆ ಬರಬೇಕಾದ ಸುಂಕಗಳೂ ಸರಿಯಾಗಿ ಬರಲಿ ಎನ್ನುವದಷ್ಟೇ ನಮ್ಮ ಉದ್ದೇಶ" ಎಂದು ಸಚಿವರು ಹೇಳಿದ್ದರು.

ಯಾವುದೇ ಹೊಸ ಬದಲಾವಣೆ ಜಾರಿಗೆ ತಂದಾಗ, ಅಪಸ್ವರಗಳು ಏಳುವುದು ಸಹಜ. ಅದಕ್ಕೆ ಫಾಸ್ಟ್‌ಟ್ಯಾಗ್ ಸಿಸ್ಟಂ ಕೂಡಾ ಹೊರತಾಗಿಲ್ಲ. ಈ ಪದ್ದತಿಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರಕಾರ ಮುಂಚಿತವಾಗಿಯೇ ಹೇಳಿತ್ತು. ಡಿಸೆಂಬರ್ ಒಂದರಿಂದ ಇದನ್ನು ಕಡ್ಡಾಯ ಮಾಡಲಾಗಿತ್ತಾದರೂ, ಗಡುವನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು,

FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?

ಕೇಂದ್ರ ಭೂಸಾರಿಗೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, RTOಗಳು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸತತವಾಗಿ ಮಾಡುತ್ತಲೇ ಬರುತ್ತಿದೆ. ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಲದಿದ್ದರೆ ದುಪ್ಪಟ್ಟು ಹಣ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ, ವಾಹನ ಸವಾರರು ಇದನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಟೋಲ್ ನಲ್ಲಿನ ಕ್ಯಾಷ್ ವಿಭಾಗದಲ್ಲಿ ಕಾಣುವ ವಿಪರಿಮೀತ ದಟ್ಟಣಿಯೇ ಸಾಕ್ಷಿ.

ಬೆಂಗಳೂರು-ಹಾಸನ ಹೆದ್ದಾರಿ

ಬೆಂಗಳೂರು-ಹಾಸನ ಹೆದ್ದಾರಿ

ರಾಜ್ಯದ ಹೆಚ್ಚಿನ ಹೆದ್ದಾರಿಗಳ ಟೋಲ್ ಬೂತ್ ನಲ್ಲಿ ದುಡ್ಡು ಕಟ್ಟಿ ಸಾಗುವವರಿಗೆ ಒಂದೆರಡು ಕೌಂಟರ್ ಅನ್ನು ಮಾತ್ರ ಮೀಸಲಿಡಲಾಗಿದೆ. ಉದಾಹರಣೆಗೆ ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಬರುವ ನಾಲ್ಕು ಟೋಲ್ ಗಳಲ್ಲಿ, ನೆಲಮಂಗಲದ ಬಳಿಯಿರುವ ಟೋಲ್ ನಲ್ಲಿ ಮಾತ್ರ ಮೂರು ಕೌಂಟರ್ ಗಳಿದ್ದರೆ, ಮಿಕ್ಕ ಕಡೆ ಎರಡು ಕೌಂಟರ್ ಗಳು ಮಾತ್ರ. ಮಿಕ್ಕಂತೆ, ಎಲ್ಲಾ ಕೌಂಟರ್ ಗಳು ಫಾಸ್ಟ್ ಟ್ಯಾಗ್ ಗೆ ಮೀಸಲು. ಹೊಸ ಪದ್ದತಿಯನ್ನು ಜನ ಇನ್ನೂ ಅಳವಡಿಸಿಕೊಂಡಿಲ್ಲ ಎನ್ನುವುದಕ್ಕೆ ಕ್ಯಾಷ್ ಕೌಂಟರ್ ನಲ್ಲಿ ಕಂಡು ಬರುವ ಕ್ಯೂ ಸಾಕ್ಷಿ ಎನ್ನಬಹುದು.

ವಾರಾಂತ್ಯದಲ್ಲಂತೂ ಟೋಲ್ ಅನ್ನು ಕ್ರಾಸ್ ಮಾಡಿಕೊಂಡು ಹೋಗುವುದೇ ದೊಡ್ಡ ಸಾಹಸ

ವಾರಾಂತ್ಯದಲ್ಲಂತೂ ಟೋಲ್ ಅನ್ನು ಕ್ರಾಸ್ ಮಾಡಿಕೊಂಡು ಹೋಗುವುದೇ ದೊಡ್ಡ ಸಾಹಸ

ವಾರಾಂತ್ಯದಲ್ಲಂತೂ ಟೋಲ್ ಅನ್ನು ಕ್ರಾಸ್ ಮಾಡಿಕೊಂಡು ಹೋಗುವುದೇ ದೊಡ್ಡ ಸಾಹಸವಾಗಿದೆ. ನಮಗೆ ಬಂದ ಮಾಹಿತಿಯ ಪ್ರಕಾರ, ನೆಲಮಂಗಲ ಟೋಲ್ ನಲ್ಲಿ ಸುಮಾರು ಎರಡು ಕಿಲೋಮೀಟರ್ ನಷ್ಟು ಕ್ಯೂ ಭಾನುವಾರದಂದು (ಜ 19) ಇತ್ತು. ಟೋಲ್ ಬರುವ ಐನೂರು ಮೀಟರ್ ಮುನ್ನವೇ ಲೈನ್ ಬೈಫರ್ಕೇಶನ್ (ಕ್ಯಾಷ್ ಮತ್ತು ಫಾಸ್ಟ್ ಟ್ಯಾಗ್) ಮಾಡಲಾಗಿದ್ದರೂ, ಪ್ರಯಾಣಿಕರು ಜಾಗ ಸಿಕ್ಕಲ್ಲಿ ತೂರುವ ಮೂಲಕ, ಇನ್ನಷ್ಟು ದಟ್ಟಣೆಗೆ ಕಾರಣವಾಗುತ್ತಿದ್ದಾರೆ.

FASTag ಇಂದಿನಿಂದ ಕಡ್ಡಾಯ: ತಪ್ಪಿದರೆ ದುಪ್ಪಟ್ಟು ದಂಡ

ಒಂದು ನಿಮಿಷಕ್ಕೊಮ್ಮೆ ಫಾಸ್ಟ್ ಟ್ಯಾಗ್ ಸಂಬಂಧ ಅನೌನ್ಸಮೆಂಟ್

ಒಂದು ನಿಮಿಷಕ್ಕೊಮ್ಮೆ ಫಾಸ್ಟ್ ಟ್ಯಾಗ್ ಸಂಬಂಧ ಅನೌನ್ಸಮೆಂಟ್

ಪ್ರತೀ ಒಂದು ನಿಮಿಷಕ್ಕೊಮ್ಮೆ ಫಾಸ್ಟ್ ಟ್ಯಾಗ್ ಸಂಬಂಧ ಅನೌನ್ಸಮೆಂಟ್ ಟೋಲ್ ನಲ್ಲಿ ಬರುತ್ತಲೇ ಇರುತ್ತದೆ. "ಜನವರಿ ಹದಿನಾರರಿಂದ ಜಾರಿಗೆ ಬರುವಂತೆ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಲದ ವಾಹನಗಳು ನಿಗದಿತ ಶುಲ್ಕಕ್ಕಿಂತ ದುಪ್ಪಟ್ಟು ಪಾವತಿಸಬೇಕು" ಎನ್ನುವ ಅನೌನ್ಸಮೆಂಟ್ ಬರುತ್ತಿದ್ದರೂ, ಪ್ರಯಾಣಿಕರು ಅದರ ಬಗ್ಗೆ ಹೆಚ್ಚಿನ ಗಮನ ನೀಡದೇ ಇರುವುದಕ್ಕೆ, ಕ್ಯಾಷ್ ಕೌಂಟರ್ ನಲ್ಲಿನ ವಾಹನ ಸಂದಣಿಯೇ ಉದಾಹರಣೆ.

ಫಾಸ್ಟ್ ಟ್ಯಾಗ್ ಕೌಂಟರ್ ಟೋಲ್ ನ ಬಲಭಾಗದಲ್ಲಿರುತ್ತದೆ

ಫಾಸ್ಟ್ ಟ್ಯಾಗ್ ಕೌಂಟರ್ ಟೋಲ್ ನ ಬಲಭಾಗದಲ್ಲಿರುತ್ತದೆ

ಫಾಸ್ಟ್ ಟ್ಯಾಗ್ ಇದೆ ಎಂದು ಬರುವ ವಾಹನಗಳು, ನಂತರ ಆ ಕೌಂಟರ್ ನಲ್ಲಿ ದುಡ್ಡು ಕೊಟ್ಟು ಮುಂದಕ್ಕೆ ಹೋಗುವ ಉದಾಹರಣೆಗಳೂ ಬೇಕಾದಷ್ಟು ಸಿಗುತ್ತಿವೆ. ಇದು, ಟೋಲ್ ನಲ್ಲಿ, ಫಾಸ್ಟ್ ಟ್ಯಾಗ್ ಹೊಂದಿರುವವರ ಆಕ್ರೋಶಕ್ಕೆ ಕಾರಣವಾಗಿ, ಹೊಡೆದಾಟದ ಮಟ್ಟಕ್ಕೂ ಹೋಗುತ್ತಿದೆ. ಇನ್ನು ಕೆಲವೊಮ್ಮೆ RFD ಸೆನ್ಸಾರ್ ಗಳು ಕೈಕೊಟ್ಟ ಉದಾಹರಣೆಗಳಿವೆ. ಫಾಸ್ಟ್ ಟ್ಯಾಗ್ ಕೌಂಟರ್ ಟೋಲ್ ನ ಬಲಭಾಗದಲ್ಲಿರುತ್ತದೆ.

ಫಾಸ್ಟ್‌ಟ್ಯಾಗ್ ಹಾಕಿಸಿಕೊಳ್ಳದ ವಾಹನ ಸವಾರರ ಪರದಾಟ ಮಾತ್ರ ದೇವರಿಗೇ ಪ್ರೀತಿ

ಫಾಸ್ಟ್‌ಟ್ಯಾಗ್ ಹಾಕಿಸಿಕೊಳ್ಳದ ವಾಹನ ಸವಾರರ ಪರದಾಟ ಮಾತ್ರ ದೇವರಿಗೇ ಪ್ರೀತಿ

ಸದ್ಯದ ಮಟ್ಟಿಗೆ ಟೋಲ್ ಗಳಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ, ಫಾಸ್ಟ್ ಟ್ಯಾಗ್ ಹೊಂದಿರುವವರು ಜಾಸ್ತಿ ಕಾಯದೇ ಮುಂದಕ್ಕೆ ಹೋಗಬಹುದಾಗಿದೆ. ಆದರೆ, ಫಾಸ್ಟ್‌ಟ್ಯಾಗ್ ಹಾಕಿಸಿಕೊಳ್ಳದ ವಾಹನ ಸವಾರರ ಪರದಾಟ ಮಾತ್ರ ದೇವರಿಗೇ ಪ್ರೀತಿ. ಕಿಲೋಮೀಟರ್ ಗಟ್ಟಲೇ ಅಥವಾ ಕನಿಷ್ಠ ಮೂವತ್ತರಿಂದ ನಲವತ್ತು ನಿಮಿಷ ಕಾಯಲೇ ಬೇಕಾಗಿದೆ. ಯಾಕೆಂದರೆ, ಇದಕ್ಕೆ ಹೆಚ್ಚಿನ ಕೌಂಟರ್ ಗಳಿಲ್ಲ. ಇಂದಲ್ಲಾ.. ನಾಳೆ ಫಾಸ್ಟ್ ಟ್ಯಾಗ್ ಹಾಕಿಸಿಕೊಳ್ಳಲೇ ಬೇಕಾಗಿರುವುದರಿಂದ, ಈ ಹೊಸ ಸಿಸ್ಟಂಗೆ ಪ್ರಯಾಣಿಕರು ಆದಷ್ಟು ಬೇಗ ಹೊಂದಿಕೊಳ್ಳುವುದೇ ಸೂಕ್ತ.

English summary
All Vehicle Owners Better To Have Fastag To Avoid Huge Queue In Toll Booth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X