Get Updates
Get notified of breaking news, exclusive insights, and must-see stories!

Pulses price hike: ಗ್ರಾಹಕರಿಗೆ 'ಬೇಳೆ' ಕಾಳುಗಳ ದರ ಏರಿಕೆ ಬಿಸಿ: ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ?

ಬೆಂಗಳೂರು, ಡಿಸೆಂಬರ್ 20: ರಾಜ್ಯದಲ್ಲಿ ಮಳೆ ಕೊರತೆಯು ಆಹಾರೋತ್ಪನ್ನಗಳ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದಾಗಿ ಒಂದೊಂದಾಗಿ ಅಗತ್ಯ ವಸ್ತುಗಳು ಏರಿಕೆ ಆಗುತ್ತಿವೆ. ಗ್ಯಾಸ್, ತರಕಾರಿಗಳು ಆಯ್ತು ಇದೀಗ ಬೇಳೆ ಕಾಳುಗಳ (Pulses price hike) ದರವು ಏರುಗತಿಯಲ್ಲಿವೆ.

ಮಳೆ ಕೊರತೆ ಉತ್ಪಾದನೆ ಮೇಲೆ ಪರಿಣಾಮ ಬೀರಿದರೆ, ಸರಬರಾಜಿನಲ್ಲಿ ಕುಂಠಿತವಾಗುತ್ತದೆ. ಇದರಿಂದ ಎಲ್ಲ ಬಗೆಯ ನಿತ್ಯ ಬಳಕೆಯ ವಸ್ತುಗಳು ದರ ಏರಿಕೆ ಆಗುತ್ತದೆ. ಸಾಗಾಣೆ ದರದ ಜೊತೆಗೆ ಹೋಟೆಲ್ ತಿಂಡಿ-ತಿನಿಸು ದರವು ಹೆಚ್ಚಾಗುತ್ತದೆ. ಕೊನೆಗೆ ಇದೆಲ್ಲವು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತವೆ.

All Types of Pulses Price Hike in Market, Know Toor Dal and long sorghum price details

ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ ಬಳಿಕ ಇದೀಗ 'ಬೇಳೆ ಕಾಳುಗಳು' ದರ ಹೆಚ್ಚಾಗಿದೆ. ಒಂದು ಕೆ.ಜಿ. ತೊಗರಿ ಬೇಳೆಯ ದರ 170 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಉದ್ದಿನ ಬೇಳೆ 140 ರೂಪಾಯಿ ತಲುಪಿದೆ. ಹೆಸರು ಬೇಳೆ ಬೆಲೆ ಪ್ರತಿ ಕೆ.ಜಿ.ಗೆ 150 ರಿಂದ 160 ರೂಪಾಯಿಗೆ ಬಿಕರಿಯಾಗುತ್ತಿದೆ. ಹಾಲಿನ ದರದಲ್ಲಿ ಬದಲಾವಣೆ ಆಗುತ್ತಲೆ ಇರುತ್ತದೆ.

ವಿವಿಧೆಡೆ ಬೇಳೆ ಬೆಲೆಗಳಲ್ಲಿ ವ್ಯತ್ಯಾಸ

ಬೇಳೆ ಕಾಳುಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಬೆಲೆಯಾದರೆ ಜಿಯೋ ಮಾರ್ಟ್, ಡಿಮಾರ್ಟ್, ರಿಲಯನ್ಸ್ ಮಾರ್ಟ್, ವಿಶಾಲ್ ಮಾರ್ಟ್‌ಗಳಲ್ಲಿ ಈ ದರಲ್ಲಿ ಮತ್ತೆ ವ್ಯತ್ಯಾಸ ಕಾಣಬಹುದು. ಅಲ್ಲದೇ ಮಸಾಲೆ ಪದಾರ್ಥಗಳ ಸಾಲಿಗೆ ಧನಿಯಾ ಪುಡಿ, ಕಾಳು ಮೆಣಸಿನ ಪುಡಿಯಂತಹ ಪದಾರ್ಥಗಳ ದರವು ಹೆಚ್ಚಾಗಿದೆ. ಇವೆಲ್ಲವು ಇದೀಗ ದುಬಾರಿ ದುನಿಯಾದ ವಸ್ತುಗಳ ಸಾಲಿಗೆ ಸೇರ್ಪಡೆಯಾಗಿವೆ.

All Types of Pulses Price Hike in Market, Know Toor Dal and long sorghum price details

ಸಾರಿಗೆ ಬೇಳೆ ಕಾಳುಗಳು ಬೇಕು, ಬೆಳ್ಳುಳ್ಳಿ ಯು ಬೇಕು. ಸದ್ಯ ಇವುಗಳ ದರ ಗಗನಕ್ಕೆ ಏರಿದ್ದು, ಗ್ರಾಹಕಿಗೆ ಆರ್ಥಿಕ ಹೊರೆ ಉಂಟಾಗಿದೆ. ಗ್ಯಾಸ್ ಬೆಲೆ ಏರಿಕೆಗೆ ಕಿಡಿ ಕಾರುತ್ತಿದ್ದ ಹೋಟೆಲ್ ಮಾಲೀಕರು ಇದೀಗ ಬೇಳೆ ಕಾಳುಗಳು ಸೇರಿದಂತೆ ಇನ್ನಿತರ ದಿನಸಿ ವಸ್ತುಗಳ ದರ ಕಂಡು ಚಿಂತಿಗೀಡಾಗಿದ್ದಾರೆ. ಏಕೆಂದರೆ ಈಗಾಗಲೇ ಹೋಟೆಲ್ ತಿಂಡಿ-ತಿನಿಸುಗಳ ದರ ಹೆಚ್ಚಾಗಿದೆ. ಇದೀಗ ಮತ್ತೆ ಹೆಚ್ಚಿಸಲು ಆಗದು, ಹಾಗಂತ ಬಿಡಲು ಆಗದ ಸ್ಥಿತಿಯಲ್ಲಿದ್ದಾರೆ.

ಕನಿಷ್ಠ 10 ರೂ ಏರಿಕೆ

ತಿಂಗಳುಗಳ ಹಿಂದೆ ಇದ್ದ ಹೋಟೆಲ್ ತಿಂಡಿ ತಿನಿಸುಗಳ ದರದಲ್ಲಿ ಸುಮಾರು ಕನಿಷ್ಠ 10 ರೂಪಾಯಿ ಏರಿಕೆ ಆಗಿದೆ. ಉದ್ದಿನ ಬೇಳೆ ಬಳಸಿ ಮಾಡುವ ಇಡ್ಲಿ, ದೋಸೆಗಳ ದರ ಸಹ ಏರಿಕೆ ಆಗಿವೆ. ಇದೆಲ್ಲ ದರ ಏರಿಕೆಯ ಪರಿಣಾಮ ಸಾರ್ವಜನಿಕರ ಮೇಲಾಗುತ್ತಿದೆ. ಇಂದಿನ ದುಬಾರಿ ದಿನಗಳಲ್ಲಿ ಗ್ರಾಹಕರ ಆರ್ಥಿಕ ಸ್ಥಿತಿಗತಿ ದಿನದಿಂದ ದಿನಕ್ಕೆ ಸೊರಗುತ್ತಿದೆ.

ರೈತರು-ಬಡವರಿಗೆ ಸಂಕಷ್ಟ

ಕಾಲಕಾಲಕ್ಕೆ ಮಳೆ ಬಾರದೇ ಬೆಳೆ ಬೆಳೆ ಕೈಗೆ ಸಿಗದೇ ರೈತರು ಒದ್ದಾಡುತ್ತಿದ್ದಾರೆ. ಬರುವ ಅಲ್ಪ ಸ್ವಲ್ಪ ಬೆಳೆಗೆ ಉತ್ತಮ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಇನ್ನೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸರಿಯಾಗಿ ಪೂರೈಕೆ ಆಗಿಲ್ಲ, ಎಂದು ತರಕಾರಿ, ದಿನಸಿ ಉತ್ಪನ್ನ ಹಾಗೂ ಇನ್ನಿತರ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತಿವೆ. ಇದು ಬಡ ಮತ್ತು ಮಧ್ಯಮ ವರ್ಗದ ಜನರ ಕೈ ಸುಡುತ್ತಿವೆ. ಜೀವನ ನಡೆಸುವುದೇ ದುಸ್ತರ ಎಂಬ ವಾತಾವರಣ ನಿರ್ಮಾಣವಾಗಿದೆ.

ಸದ್ಯ ಮಾರುಕಟ್ಟೆಗಳಲ್ಲಿ ಅಗತ್ಯ ತರಕಾರಿಗಳು ಈ ಮೊದಲಿನಂತೆ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಮಳೆ ಕೊರತೆಯಿಂದ ಬೆಳ್ಳುಳ್ಳಿ ಆವಕ ಕಡಿಮೆ ಆಗಿದೆ. ಇತ್ತ ವಿದ್ಯುತ್ ದರ ಏರಿಕೆ ಆಗಿದ್ದರೆ ಮತ್ತೊಂದೆಡೆ ಅಡುಗೆ ಅನಿಲ ದರ ಮೊದಲಿಂದಲೂ ಅಗ್ರ ಸ್ಥಾನ ಪಡೆದುಕೊಂಡಿದೆ. ಸರ್ಕಾರದ ಸಬ್ಸಿಡಿ ಸಹ ನಿಂತಿದೆ.

ತರಕಾರಿ, ಬೇಳೆಯ ಅಧಿಕ ದರ ಮುಂದುವರಿಕೆ

ಬೆಂಗಳೂರಿನಂತಹ ಪ್ರದೇಶಗಳಲ್ಲಿ ಮನೆ ಬಾಡಿಗೆಗಳು ಹೆಚ್ಚಾಗಿವೆ. ವರ್ಷಗಳಿಂದ ಕಟ್ಟಡದ ಬಾಡಿಗೆ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ ಹೆಚ್ಚಿಸದವರು ಈ ಹೊಸ ವರ್ಷದಿಂದ ಹೆಚ್ಚಿಗೆ ಮಾಡಲು ಚಿಂತನೆ ನಡೆಸಿದ್ದಾರೆ. ಒಟ್ಟಾರೆ ಇಂದಿನ ದಿನಮಾನಗಳಲ್ಲಿ ಜನರು ಬಡವರು, ಮಧ್ಯಮ ವರ್ಗದವರು ಬದುಕುವುದೇ ದುಸ್ತರವಾಗಿದೆ.

ಹೊಸ ವರ್ಷಾಂತ್ಯದಲ್ಲಿ ಏರಿಕೆ ಕಂಡ ಬೇಳೆ ಕಾಳುಗಳು ಮತ್ತು ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಇನ್ನಿತರ ತರಕಾರಿಗಳ ಬೆಲೆಗಳು ಇನ್ನೂ ಕೆಲವು ದಿವಸಗಳ ಕಾಲ ಹೀಗೆ ಯಥಾಸ್ಥಿತಿಯಲ್ಲಿರಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+