ಬಿದ್ದ ಯಡಿಯೂರಪ್ಪ ಸರಕಾರ, ಚಂದ್ರಬಾಬು ನಾಯ್ಡು ಸಂಭ್ರಮ
ಬೆಂಗಳೂರು, ಮೇ 19: ಕರ್ನಾಟದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ದೇಶದಾದ್ಯಂತ ಕಮಲ ವಿರೋಧಿ ಪಕ್ಷಗಳು ಸಂಭ್ರಮಿಸಿವೆ.
ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. 'ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರೆಲ್ಲಾ ಸಂತೋಷಗೊಂಡಿದ್ದಾರೆ,' ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
"ಈ ಬೆಳವಣಿಗೆ ಬಗ್ಗೆ ಎಲ್ಲರೂ ಖುಷಿಯಾಗಿದ್ದಾರೆ. ಗಣತಂತ್ರವನ್ನೇ ಹತ್ತಿಕ್ಕಲು ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷರು ಹೊರಟಿದ್ದರು. ಭ್ರಷ್ಟರನ್ನು ಬೆಂಬಲಿಸುವ ಮೂಲಕ ಅವರು ಏನು ಸಂದೇಶ ನೀಡಲು ಹೊರಟಿದ್ದರು? ಜನಾರ್ದನ ರೆಡ್ಡಿಯನ್ನು ಬಿಜೆಪಿ ಮತ್ತೆ ಮುಂಚೂಣಿಗೆ ತಂದು ರಾಜಕಾರಣ ಮಾಡಲು ಮುಂದಾಗಿತ್ತು," ಎಂದು ನಾಯ್ಡು ಕಿಡಿಕಾರಿದ್ದಾರೆ.













Click it and Unblock the Notifications