ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 8 ರ ಸಭೆಗೆ ಹಾಜರಾಗಲೇ ಬೇಕು: ಸಿದ್ದರಾಮಯ್ಯ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 06: ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಎಂಟು ಕಾಂಗ್ರೆಸ್ ಶಾಸಕರು ಗೈರಾಗಿದ್ದಕ್ಕೆ ಸಿಟ್ಟಾಗಿರುವ ಸಿದ್ದರಾಮಯ್ಯ ಗೈರಾಗಿರುವ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಫೆಬ್ರವರಿ 8 ರಂದು ಅಧಿವೇಶನಕ್ಕೆ ಎಲ್ಲ ಶಾಸಕರು ಖಡ್ಡಾಯವಾಗಿ ಹಾಜರಾಗಬೇಕು ಇಲ್ಲದಿದ್ದರೆ ಸದಸ್ಯತ್ವ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಜೆಟ್ ಮಂಡನೆ ದಿನವೇ ಸಿಎಲ್‌ಪಿ ಸಭೆ ಕರೆದ ಸಿದ್ದರಾಮಯ್ಯ!ಬಜೆಟ್ ಮಂಡನೆ ದಿನವೇ ಸಿಎಲ್‌ಪಿ ಸಭೆ ಕರೆದ ಸಿದ್ದರಾಮಯ್ಯ!

ಫೆಬ್ರವರಿ 8 ರಂದು ಎಲ್ಲ ಸಚಿವರು, ಶಾಸಕರು , ವಿಧಾನಪರಿಷತ್ ಸದಸ್ಯರು ಖಡ್ಡಾಯವಾಗಿ ಸದನಕ್ಕೆ ಮುಚಿನ ಕಾಂಗ್ರೆಸ್ ಸಭೆಗೆ ಹಾಗೂ ಸದನಕ್ಕೆ ಖಡ್ಡಾಯವಾಗಿ ಹಾಜರಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

All Congress MLAs should be present in Vidhan Soudha on February 08: Siddaramaiah

ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ಒಂದೆರಡೆ ಶಾಸಕರು ಬಿಜೆಪಿಯ ಆಮಿಷಕ್ಕೆ ಬಲಿ ಆಗಿದ್ದಾರೆ, ಅವರಿಗೆ ಈಗಲೂ ಅವಕಾಶ ಇದೆ, ಅವರು ತಮ್ಮ ನಿರ್ಣಯ ಬದಲಾಯಿಸಿಕೊಳ್ಳಬಹುದು ಎಂದು ಅತೃಪ್ತ ಶಾಸಕರಿಗೆ ಅವಕಾಶ ನೀಡಿದ್ದಾರೆ.

ಅತೃಪ್ತರಿಗೆ ಮೂಗುದಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್‌ಅತೃಪ್ತರಿಗೆ ಮೂಗುದಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್‌

ಎರಡು ಬಾರಿ ನೊಟೀಸ್ ನೀಡಿದ್ದರು ಸಹ ಕೆಲವು ಶಾಸಕರು ನೇರವಾಗಿ ಬಂದು ಭೇಟಿ ಆಗಿಲ್ಲ, ವಿಪ್ ಸಹ ಜಾರಿ ಮಾಡಲಾಗಿದೆ. ಇದೆಲ್ಲ ಆದ ಬಳಿಕವೂ ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳದೆ ಬೇರೆ ದಾರಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಜೆಟ್ ಜಂಟಿ ಅಧಿವೇಶನಕ್ಕೆ ಎಷ್ಟು ಮಂದಿ ಶಾಸಕರು ಗೈರು ಹಾಜರಿ?ಬಜೆಟ್ ಜಂಟಿ ಅಧಿವೇಶನಕ್ಕೆ ಎಷ್ಟು ಮಂದಿ ಶಾಸಕರು ಗೈರು ಹಾಜರಿ?

ಬಿಜೆಪಿ ನಾಯಕರು 20-25 ಶಾಸಕರನ್ನು ಭೇಟಿ ಮಾಡಿ ಹಣದ ಆಮಿಷ ಒಡ್ಡಿದ್ದಾರೆ. ನಿನ್ನೆ ಸಹ ಜೆಡಿಎಸ್‌ ಶಾಸಕರೊಬ್ಬರಿಗೆ 320 ಕೋಟಿ ಹಣದ ಆಮಿಷ ಒಡ್ಡಿದ್ದಾರೆ ಎಂದು ಹೊಸ ಬಾಂಬ್ ಎಸೆದಿದ್ದಾರೆ.

ಮತ್ತೊಬ್ಬ ಶಾಸಕರ ಮನೆಯಲ್ಲಿ 5 ಕೋಟಿ ಇಟ್ಟು ಆಮೇಲೆ ಮಾತನಾಡೋಣ ಎಂದು ಹೇಳಿ ಹೋಗಿದ್ದಾರೆ. ಇವರಿಗೆ ಇಷ್ಟೆಲ್ಲಾ ಹಣ ಎಲ್ಲಿಂದ ಬರುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

English summary
Siddaramaiah said all congress MLAs and ministers should present on February 085 in Vidhan Soudha said Siddaramaiah. If any one absent he should expel from the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X