ಇಂಡಿಯಾ ಒಕ್ಕೂಟದ ಮುನ್ನಡೆಗೆ ಖರ್ಗೆ ಶ್ರಮ ಸ್ಮರಣೀಯ: ಸೋತಿದ್ದ ಕಾಂಗ್ರೆಸ್‌ಗೆ ಚೈತನ್ಯವಾದ ಹಿರಿಯ ನಾಯಕ
ಬೆಂಗಳೂರು, ಜೂನ್ 08: ಕಳೆದ ಎರಡು ಅವಧಿಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೂರರ ಗಡಿಗೆ ಹೋಗಿರುವುದು ಒಂದು ಸಾಧನೆಯೇ... ಇದೀಗ ಈ ಸಾಧನೆಯ ವಿಜೃಂಭಣೆ ನಡೆಯುತ್ತಿದೆ. ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಅದನ್ನು ಒಪ್ಪಿಕೊಳ್ಳಲೇ ಬೇಕು. ಆದರೆ ಎಲ್ಲೊ ಒಂದು ಕಡೆ ಈ ಸಾಧನೆ ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಆಗಿದೆ ಎಂಬುದು ಕೂಡ ಅಷ್ಟೇ ಸತ್ಯವಾಗಿದೆ.
ಲೋಕ ಅಖಾಡದಲ್ಲಿ ಘಟಾನುಘಟಿ ನಾಯಕರ ಸಾಧನೆ ಏನು ಎಂಬುದನ್ನು ಚುನಾವಣಾ ಫಲಿತಾಂಶ ನಮ್ಮ ಮುಂದೆ ತೆರೆದಿಟ್ಟಿದೆ. ಕೆಲವು ನಾಯಕರು ಬೇರೆ ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಂಡು ಬರುವುದಿರಲಿ ತಮ್ಮ ಕ್ಷೇತ್ರಗಳಲ್ಲಿಯೇ ಗೆಲ್ಲುವುದಕ್ಕೆ ಪ್ರಯಾಸವಾಗಿದ್ದನ್ನು ನಾವು ನೋಡಿದ್ದೇವೆ. ಇಲ್ಲಿ ಎಲ್ಲರ ಅತಿಯಾದ ಆತ್ಮವಿಶ್ವಾಸಕ್ಕೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರತಿ ಚುನಾವಣೆ ಬೇರೆ, ಬೇರೆ ಅನುಭವಗಳು ರಾಜಕೀಯ ನಾಯಕರಿಂದ ಆರಂಭವಾಗಿ ಕಾರ್ಯಕರ್ತರು, ಮತದಾರರ ತನಕ ಆಗುತ್ತಲೇ ಇರುತ್ತದೆ.

ಸೋತವರು ಆತ್ಮಾವಲೋಕನ ಮಾಡುತ್ತೇವೆ ಎಂದರೆ ಗೆದ್ದವರು ನಮ್ಮದೇ ಸಾಧನೆ ಎಂಬಂತೆ ಗೆಲುವಿನ ಹಾದಿಯನ್ನೇ ಮರೆತು ಬಿಡುತ್ತಾರೆ. ಇಲ್ಲಿ ಮತದಾರರು ಯಾವುದನ್ನು ಇಷ್ಟಪಟ್ಟಿದ್ದಾರೆ? ಯಾರನ್ನು ಏಕೆ ಕೈಹಿಡಿದಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಗೆದ್ದಾಗ ನನ್ನಿಂದಲೇ ಆಯಿತು ಎಂದು ಬೆನ್ನು ತಟ್ಟಿಕೊಳ್ಳುವವರು ಸೋತಾಗಲೂ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಆಗ ಅವರನ್ನು ಒಬ್ಬ ನಾಯಕ ಎಂದು ಒಪ್ಪಿಕೊಂಡಿದ್ದಕ್ಕೆ ಸಾರ್ಥಕ ಎನಿಸುತ್ತದೆ.
ಮಲ್ಲಿಕಾರ್ಜುನಖರ್ಗೆಯವರದು ದೊಡ್ಡ ಪಾತ್ರ
ರಾಜಕೀಯ ಕ್ಷೇತ್ರದಲ್ಲಿ ಗೆಲುವನ್ನು ಒಪ್ಪಿಕೊಳ್ಳುವಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸೋತಲ್ಲಿಯೇ ಗೆದ್ದು ಬರುವುದು ಕೆಲವರಿಗೆ ಕಷ್ಟವಾಗುತ್ತಿದೆ. ಈ ಬಾರಿ ಐಎನ್ ಡಿಐಎ ನಮ್ಮದು ಒಳ್ಳೆಯ ಸಾಧನೆ ಎಂದು ಹೇಳಿಕೊಳ್ಳುತ್ತಿದೆ. ರಾಜಕೀಯವಾಗಿ ನೋಡಿದ್ದೇ ಆದರೆ ಐಎನ್ ಡಿಐಎ ನಾಯಕರು ಚುನಾವಣೆಯಲ್ಲಿ ಗೆದ್ದು ಸೋತಿದ್ದರೆ, ಎನ್ ಡಿಎ ನಾಯಕರು ಗೆದ್ದು ಸೋತಿದ್ದಾರೆ. ಇಲ್ಲಿ ಎರಡು ಒಕ್ಕೂಟದ ನಾಯಕರಿಗೆ ಇದು ಬಹುದೊಡ್ಡ ಪಾಠವಾಗಿದೆ. ಐಎನ್ ಡಿಐಎ ಚೇತರಿಕೆ ಕಾಣಲು ಅದರಲ್ಲೂ ಕಾಂಗ್ರೆಸ್ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುವಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪಾತ್ರವಿದೆ.

ಕರ್ನಾಟಕದಲ್ಲಿ ಅವರು ಪ್ರತಿನಿಧಿಸುವ ಕಲ್ಯಾಣ ಕರ್ನಾಟಕ ಭಾಗದ ಗೆಲುವು ಕಾಂಗ್ರೆಸ್ ಗೆ ಬಲತಂದಿದೆ. ಜತೆಗೆ ಇಡೀ ಒಕ್ಕೂಟವನ್ನು ತಮ್ಮ ಸಾರಥ್ಯಿದಲ್ಲಿ ಒಟ್ಟಾಗಿ ಚುನಾವಣೆಗೆ ಕೊಂಡೊಯ್ದಿದ್ದು ದೊಡ್ಡದೊಂದು ಸಾಧನೆ. ಅದಕ್ಕಿಂತ ಹೆಚ್ಚಾಗಿ ಚುನಾವಣೆಗಳಲ್ಲಿ ಸೋಲು ಕಂಡು ಪಕ್ಷ ಹೀನಾಯ ಸ್ಥಾನದಲ್ಲಿದ್ದಾಗ ಖರ್ಗೆ ಅವರು ಪಕ್ಷದ ಸಾರಥ್ಯಧವನ್ನು ವಹಿಸಿಕೊಂಡಿದ್ದರು. ಅವರ ಸಾರಥ್ಯುದಲ್ಲಿಯೇ ಪಕ್ಷ ಚುನಾವಣೆಗೆ ಹೋಗಿತ್ತು. ಅಷ್ಟೇ ಅಲ್ಲದೆ ಅವರ ಸಾರಥ್ಯಧದಲ್ಲಿಯೇ ಹೆಚ್ಚಿನ ಸ್ಥಾನಗಳು ಬಂದಿವೆ ಎನ್ನುವುದನ್ನು ನಾವ್ಯಾರು ತಳ್ಳಿಹಾಕುವಂತಿಲ್ಲ.
ಎರಡು ಹುದ್ದೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು
ಈ ನಡುವೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ, ನ್ಯಾಯ್ ಯಾತ್ರೆಗಳು ಪಕ್ಷದ ಸಂಘಟನೆಗೆ ಸಹಕಾರಿ ಆಗಿಲ್ಲ ಎಂದು ಹೇಳಲಾಗುವುದಿಲ್ಲ. ಅದರಿಂದ ಉಪಯೋಗವಾಗಿದೆ. ಆದರೆ ಅತ್ತ ರಾಹುಲ್ ಗಾಂಧಿ ಅವರು ಪಾದಯಾತ್ರೆಗಳಲ್ಲಿ ತಿಂಗಳುಗಟ್ಟಲೆ ತೊಡಗಿಸಿಕೊಳ್ಳುತ್ತಿದ್ದರೆ, ಇತ್ತ ಪಕ್ಷವನ್ನು ಮುನ್ನಡೆಸಿದ್ದು ಖರ್ಗೆಯವರು. ಮೇಲ್ಮನೆಯಲ್ಲಿ ಪ್ರತಿಪಕ್ಷದ ನಾಯಕ ಸ್ಥಾ ನವನ್ನು ವಹಿಸಿಕೊಂಡು ಮೋದಿ ಸರ್ಕಾರಕ್ಕೆ ಟಕ್ಕರ್ ಕೊಡುತ್ತಾ ಬಂದಿದ್ದರು. ಅವರ ಶ್ರಮವೂ ಪಕ್ಷದ ಸಂಘಟನೆಗೆ ಕಾರಣವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ತವರು ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲಾಗದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪ್ರಚಾರ ನಡೆಸಿ ಭಾವನಾತ್ಮಕ ಮಾತುಗಳಿಂದ ಮತದಾರರನ್ನು ಕಟ್ಟಿ ಹಾಕಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಶಕ್ತಿ ತುಂಬಿದ ಮಲ್ಲಿಕಾರ್ಜುನ ಖರ್ಗೆ ಅವರ ಸಾಧನೆ ಇಲ್ಲಿ ಸ್ಮರಣೀಯವಾಗಿದೆ.
ಖರ್ಗೆಯವರದು ಶ್ಲಾಘನೀಯ ಕಾರ್ಯವೈಖರಿ
ಎಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ ತನ್ನ ಪಕ್ಷ ಮತ್ತು ಮಿತ್ರಕೂಟದ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅವರ ಕಾರ್ಯತಂತ್ರಗಳು ಕೆಲಸ ಮಾಡಿವೆ. ಅಷ್ಟೇ ಅಲ್ಲದೆ ಪಕ್ಷವನ್ನು ಮತ್ತು ತಮ್ಮ ವಿರೋಧಪಕ್ಷದ ನಾಯಕ ಸ್ಥಾ ನವನ್ನು ಚೆನ್ನಾಗಿ ನಿಭಾಯಿಸಿಕೊಂಡು ಬಂದಿರುವುದು ಅವರ ಮತ್ತೊಂದು ಸಾಧನೆ. ಬಹುಶಃ ಮಲ್ಲಿಕಾರ್ಜುನ ಖರ್ಗೆಯಲ್ಲಿರುವ ಈ ಗುಣಗಳನ್ನು ನೋಡಿಯೇ ಬಹುಶಃ ಮಿತ್ರಪಕ್ಷದಲ್ಲಿ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿರಬೇಕು.
ಅದು ಏನೇ ಇರಲಿ ನಮ್ಮ ರಾಜ್ಯದ ಒಬ್ಬ ನಾಯಕ ದೆಹಲಿ ಮಟ್ಟದಲ್ಲಿ ತಮ್ಮ ಪಕ್ಷ ಸೇರಿದಂತೆ ಒಕ್ಕೂಟವನ್ನು ನಿಭಾಯಿಸಿ ಎಲ್ಲರನ್ನು ಜೊತೆಯಲ್ಲಿ ಕೊಂಡೊಯ್ದು ಅಧಿಕಾರ ಹಿಡಿಯುತ್ತಿರುವ ಎನ್ ಡಿಎ ಎದುರು ಪ್ರಬಲ ವಿರೋಧಪಕ್ಷವನ್ನು ಕಟ್ಟಿ ನಿಲ್ಲಿಸಿದ್ದಾರೆ ಎಂದರೆ ಅದು ಸಾಮಾನ್ಯದ ಮಾತಲ್ಲ. ಆದರೆ ಅದನ್ನು ಮಾಡಿ ತೋರಿಸಿದ್ದಾರೆ. ಬಹಳಷ್ಟು ಮಂದಿ ರಾಹುಲ್ ಗಾಂಧಿಯವರ ಸಾಧನೆಯನ್ನು ಪುಂಖಾನುಪುಂಖವಾಗಿ ಹೊಗಳುತ್ತಿರುವ ಈ ವೇಳೆ ಮಲ್ಲಿಕಾರ್ಜುನ ಖರ್ಗೆ ನಾಯಕರ ಸಾಧನೆಯನ್ನು ಕೂಡ ನೆನಪಿಸಿಕೊಳ್ಳಲಿ.
-
Cabinet Reshuffle: ಶಾಸಕರ ದೆಹಲಿಗೆ ಭೇಟಿ ತಪ್ಪಿಲ್ಲ, ಸಂಪುಟ ಪುನರ್ರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಿದ್ದರಾಮಯ್ಯ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ












Click it and Unblock the Notifications