ಮೂಲ ಬಿಜೆಪಿ VS ವಲಸೆ ಬಿಜೆಪಿ: ಬಿಎಸ್ ವೈಗೂ ಭಿನ್ನಮತದ ಬಿಸಿ

Written By:
Subscribe to Oneindia Kannada

ಬೆಂಗಳೂರು, ಜೂನ್. 28: ರಾಜ್ಯಸಭೆ ಮತದಾನದ ನಂತರ ಜೆಡಿಎಸ್ ನಲ್ಲಿ ಭಿನ್ನಮತ, ಸಂಪುಟ ವಿಸ್ತರಣೆ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಇದೀಗ ಶಿಸ್ತಿನ ಪಕ್ಷ ಎನ್ನುವ ಬಿಜೆಪಿಯಲ್ಲೂ ಭಿನ್ನಮತ ಆರಂಭವಾಗಿದೆ.

ಯುಗಾದಿಗೆ ಯಡಿಯೂರಪ್ಪ ಅಧ್ಯಕ್ಷ ಗಾದಿ ಪಡೆದ ನಂತರ ಅಲ್ಲಲ್ಲಿ ಹೊಗೆಯಾಡುತ್ತಿದ್ದ ಅತೃಪ್ತರ ಮಾತುಗಳು ಇದೀಗ ಜೋರಾಗಿ ಕೇಳಲು ಆರಂಭವಾಗಿದೆ. ಯಡಿಯೂರಪ್ಪ ಹೊಸ ತಂಡವನ್ನು ಕಟ್ಟಿಕೊಂಡ ನಂತರ ಭಿನ್ನಮತ ಇದೀಗ ಹೊರಗೆ ಬಂದಿದೆ.[ಆಂತರಿಕ ಕಚ್ಚಾಟದಿಂದ ಸಿದ್ದರಾಮಯ್ಯ ಸರ್ಕಾರದ ಅವನತಿ]

bsy

ಮೂಲ ಬಿಜೆಪಿಗರು ಮತ್ತು ವಲಸೆ ಬಿಜೆಪಿಗರ ನಡುವೆ ಸಂಘರ್ಷ ಉಂಟಾಗುತ್ತಿದೆ. ಕೆಜೆಪಿಯಿಂದ ವಲಸೆ ಬಂದಿರುವ ಮುಖಂಡರು ಹಾಗೂ ಕಾರ್ಯಕರ್ತರಿಗೇ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳಲ್ಲಿ ಹೆಚ್ಚಿನ ಸ್ಥಾನ ನೀಡಲಾಗಿದೆ ಎಂಬುದೇ ಭಿನ್ನಮತದ ಮೂಲ ಹುಟ್ಟಿಕೊಳ್ಳಲು ಕಾರಣವಾಗಿದೆ.[ಅಹಿಂದ ನಾಯಕ ಸಿದ್ದರಾಮಯ್ಯಗೆ ಲಿಂಗಾಯತರ ಮೇಲೆ ಕಣ್ಣು!]

ಮಂಗಳವಾರ ಮಧ್ಯಾಹ್ನ ಬೆಂಗಳೂರು ಮಲ್ಲೇಶ್ವರಂ ನ ಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು ಜಿಲ್ಲಾ ಘಟಕದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾವಾರು ಘಟಕದ ನಾಯಕರ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಆಲಿಸಲಾಗುವುದು ಎಂದು ಹೇಳಲಾಗಿದೆ. ವಿಧಾನಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಅತೃಪ್ತರ ದೂರುಗಳನ್ನು ಆಲಿಸಲಿದ್ದಾರೆ.

ಪಾದಾಧಿಕಾರಿಗಳ ನೇಮಕದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗಿದೆ ಎಂದು ಆಪಾದಿಸಿರುವ ಮೂಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಸಭೆ ನಡೆಸಲಿದ್ದಾರೆ. ಆದರೆ ಹಿರಿಯ ನಾಯಕರು ಪಾಲ್ಗೊಳ್ಳುವುದು ಅನುಮಾನವಾಗಿದ್ದು ಭಾಗವಹಿಸುವ ಜಿಲ್ಲಾವಾರು ಮುಖಂಡರ ಅಹವಾಲುಗಳನ್ನು ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ನಿರ್ಮಲ್ ಕುಮಾರ್ ಸುರಾನಾ ತೆಗೆದುಕೊಂಡು ಹಿರಿಯ ನಾಯಕರಿಗೆ ವರದಿ ನೀಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru: After JDS and Congress dissidence started in Karnataka BJP.
Please Wait while comments are loading...