ಮನಮಿಡಿಯುತ್ತಿದೆ ಎಡಿಜಿಪಿ ಭಾಸ್ಕರ್ ರಾವ್ ಟ್ವೀಟಿಸಿದ್ದ ಅದ್ಭುತ ಭಾವಚಿತ್ರ!

ಬೆಂಗಳೂರು, ಸೆ.25: ಪೊಲೀಸರಿಗೆ ಭಾವನೆಗಳೇ ಇರುವುದಿಲ್ಲ ಎಂದು ದೂರುವವರಿದ್ದಾರೆ. ಹಲವು ನಿದರ್ಶನಗಳೂ ಇರಬಹುದು. ಆದರೆ ಪೊಲೀಸರಲ್ಲಿ ಸಹೃದಯತೆ, ಮಾನವೀಯತೆ ಹಾಸು ಹೊಕ್ಕಾಗಿರುತ್ತದೆ. ಅದಕ್ಕೂ ಒಂದು ನಿದರ್ಶನ ಇಲ್ಲಿದೆ.

ವಿಷಯ ಇಷ್ಟೇ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳ ರಾಜ್ಯ ಹೆಚ್ಚವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅವರು ಹೊಸದಾಗಿ ಪೊಲೀಸ್ ಸೇವೆಗೆ ಸೇರಿದ ಸಬ್ ಇನ್ ಸ್ಪೆಕ್ಟರ್ ಒಬ್ಬರು ತಮ್ಮ ತಾಯಿಯ ಕಾಲಿಗೆ ಎರಗಿ ಆಶೀರ್ವಾದ ಪಡೆಯುತ್ತಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

ನಿರ್ಗಮನ ಪಥಸಂಚಲನಕ್ಕೆ ಬರಲು ಸಾಧ್ಯವಾಗದ ತಾಯಿಯನ್ನು ಕಾಣಲು ಬಂದ ಸಬ್‌ ಇನ್‌ಸ್ಪೆಕ್ಟರ್, ಆಕೆ ಕೆಲಸ ಮಾಡುತ್ತಿದ್ದ ಹೊಲಕ್ಕೆ ತೆರಳಿ ಗೌರವ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಭಾಸ್ಕರ್ ರಾವ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADGP Bhaskar Rao gets applause in social media too

ಈ ಚಿತ್ರ ಹಲವಾರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಮಾತೃದೇವೋಭವ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಯಾವ ಹಂತಕ್ಕೆ ಹೋದರು ಕೂಡ ತಂದೆ-ತಾಯಿಯನ್ನು ಗೌರವಿಸುವುದನ್ನು ಮರೆಯಬಾರದು ಅದು ನಮ್ಮ ಸಂಸ್ಕೃತಿ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+