ವಿದ್ಯಾಭರಣ್‌ ಜೊತೆಗಿನ ಫೋಟೋ ವೈರಲ್‌ ಆದ ಬಗ್ಗೆ ವೈಷ್ಣವಿ ಗೌಡ ಹೇಳಿದ್ದೇನು?

ಕಿರುತೆರೆ ನಟಿ, ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ನಟಿ ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಜೊತೆಗೆ ಪೋಟೋ ಕೂಡ ವೈರಲ್‌ ಆಗಿದೆ.

ಕಳೆದ ನಾಲ್ಕೈದು ದಿನಗಳಿಂದ ವೈಷ್ಣವಿ ಗೌಡ ನಿಶ್ಚಿತಾರ್ಥ ಆಗಿದೆ ಎನ್ನುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಅಚ್ಚರಿಪಟ್ಟಿದ್ದರು. ಸದ್ದಿಲ್ಲದೇ ವೈಷ್ಣವಿ ಗೌಡ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಈ ಬಗ್ಗೆ ವೈಷ್ಣವಿ ಗೌಡ ಸ್ಪಷ್ಟನೆ ನೀಡಿದ್ದಾರೆ.

ಫೋಟೋ ವೈರಲ್‌ ಆಗುತ್ತಿದ್ದಂತೆ ಈ ಬಗ್ಗೆ ಮಾತನಾಡಿದ್ದ ವೈಷ್ಣವಿ ಗೌಡ ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ. ಮನೆಯ ಹಿರಿಯವರು ಮಾತನಾಡಿದ್ದಾರೆ. ಅವರು ನನಗೆ ಹೊಸ ವ್ಯಕ್ತಿ ಆಗಿರುವದರಿಂದ ನನಗೂ ಸಮಯಾವಕಾಶ ಬೇಕು ಎಂದು ಹೇಳಿದ್ದರು.

ಇದನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ ಎಂದ ವೈಷ್ಣವಿ ಗೌಡ

ಇದನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ ಎಂದ ವೈಷ್ಣವಿ ಗೌಡ

ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿಗೆ ನಟಿ ವೈಷ್ಣವಿ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಇಂದೊಂದು ನಿಶ್ಚಿತಾರ್ಥ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ವೈಯಕ್ತಿಕ ಜೀವನಕ್ಕೆ ಗೌರವ ಕೊಡಿ ಎಂದು ನಟಿ ವೈಷ್ಣವಿ ಗೌಡ ಎಲ್ಲರಲ್ಲೂ ಮನವಿ ಮಾಡಿದ್ದಾರೆ. ಸದ್ಯ ವೈರಲ್‌ ಆಗಿರುವ ಫೋಟೋವನ್ನು ಯಾರೂ ಇನ್ನು ಮುಂದೆ ಶೇರ್‌ ಮಾಡಬೇಡಿ ಎಂದು ನಟಿ ಮನವಿ ಮಾಡಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ. ಏನಾದರೂ ವಿಚಾರಗಳು ನಡೆದರೆ ಪೋಸ್ಟ್‌ ಮಾಡುವ ಮೂಲಕ ತಿಳಿಸುತ್ತೇನೆ. ನಿಶ್ಚಿತಾರ್ಥ ಎನ್ನುವ ವಿಚಾರವನ್ನು ದಯವಿಟ್ಟು ಮುಂದುವರಿಸಬೇಡಿ. ಈವರೆಗೂ ನನಗೆ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದ ಎಂದು ವೈಷ್ಣವಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮದುವೆ ರದ್ದಾಗಿರುವ ಬಗ್ಗೆ ವೈಷ್ಣವಿ ಗೌಡ ಸ್ಪಷ್ಟನೆ ನೀಡಿದ್ದಾರೆ.

ಇಬ್ಬರು ಹುಡುಗಿಯರಿಗೆ ವಿದ್ಯಾಭರಣ್‌ನಿಂದ ಮೋಸ ಆರೋಪ

ಇಬ್ಬರು ಹುಡುಗಿಯರಿಗೆ ವಿದ್ಯಾಭರಣ್‌ನಿಂದ ಮೋಸ ಆರೋಪ

ಉದ್ಯಮಿ ಹಾಗೂ ನಟರಾಗಿರುವ ವಿದ್ಯಾಭರಣ್‌ ಜೊತೆ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದಿದೆ ಎನ್ನಲಾಗಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ವಿದ್ಯಾಭರಣ್‌ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿದ್ಯಾಭರಣ್‌ ವಿರುದ್ಧ ನಟಿ ಆರೋಪ ಮಾಡಿದ್ದು, ವಿದ್ಯಾಭರಣ್‌ ಇಬ್ಬರು ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ದಾರೆ ಎನ್ನುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಿಂದ ಮೊದಲ ಮಾತುಕತೆ ಹಂತದಲ್ಲೇ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್‌ ಮದುವೆ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ.

ಕುಟುಂಬದ ವರ್ಚಸ್ಸನ್ನು ಹಾಳು ಮಾಡುವ ದೃಷ್ಟಿಯಿಂದ ಆರೋಪ

ಕುಟುಂಬದ ವರ್ಚಸ್ಸನ್ನು ಹಾಳು ಮಾಡುವ ದೃಷ್ಟಿಯಿಂದ ಆರೋಪ

ಇನ್ನು ತಮ್ಮ ಮೇಲಿನ ಆರೋಪ ಹಾಗೂ ವೈಷ್ಣವಿ ಗೌಡ ಜೊತೆ ನಿಶ್ಚಿತಾರ್ಥದ ಬಗ್ಗೆ ವಿದ್ಯಾಭರಣ್‌ ಕೂಡ ಮಾತನಾಡಿದ್ದಾರೆ. "ನನ್ನ ಮೇಲೆ ಬಂದಿರುವುದು ಸುಳ್ಳು ಆರೋಪ. ನಮ್ಮ ಕುಟುಂಬದ ವರ್ಚಸ್ಸನ್ನು ಹಾಳು ಮಾಡುವ ದೃಷ್ಟಿಯಿಂದ ಈ ರೀತಿ ಆರೋಪ ಮಾಡಿದ್ದಾರೆ. ಮದುವೆ ಮಾತುಕತೆ ನಡೆದ ಸಮಯದಲ್ಲೇ ಆರೋಪ ಮಾಡಿರುವ ಈ ಆಡಿಯೋ ವೈರಲ್‌ ಮಾಡಿದ್ದಾರೆ. ಇದರ ಬಗ್ಗೆ ಕಮಿಷನರ್‌ಗೆ ದೂರು ಕೊಡುತ್ತೇನೆ. ನನ್ನ ಮೇಲೆ ಆರೋಪ ಮಾಡುವ ಬದಲು ಆಕೆಯೇ ಪೊಲೀಸರಿಗೆ ದೂರು ನೀಡಬಹುದಿತ್ತು. ನಮ್ಮ ಏಳಿಗೆ ಸಹಿಸದವರು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ. ಇನ್ನು ವೈಷ್ಣವಿ ಗೌಡ ಜೊತೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬಗಳ ನಡುವೆ ಮೊದಲ ಹಂತದ ಮಾತುಕತೆ ನಡೆದಿದೆ. ಆ ಫೋಟೋ ಹೇಗೆ ವೈರಲ್‌ ಆಗಿದೆ ಗೊತ್ತಿಲ್ಲ" ಎಂದಿದ್ದಾರೆ.

ವೈಷ್ಣವಿ ಗೌಡ ಜೊತೆ ಫೋಟೋದಲ್ಲಿದ್ದ ವಿದ್ಯಾಭರಣ್‌ ಯಾರು

ವೈಷ್ಣವಿ ಗೌಡ ಜೊತೆ ಫೋಟೋದಲ್ಲಿದ್ದ ವಿದ್ಯಾಭರಣ್‌ ಯಾರು

ದೇವಿ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ವೈಷ್ಣವಿ ಗೌಡ, ಅಗ್ನಿಸಾಕ್ಷಿ ಧಾರವಾಹಿ ಸನ್ನಿಧಿ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು. ಸನ್ನಿಧಿ ಪಾತ್ರವನ್ನು ಜನರು ಮನಸಾರೆ ಮೆಚ್ಚುಗೊಂಡಿದ್ದರು. ಅಗ್ನಿಸಾಕ್ಷಿ ಧಾರವಾಹಿ ಬಳಿಕ ವೈಷ್ಣವಿ ಗೌಡ ಅವರು ಬಿಗ್‌ಬಾಸ್‌ ಸ್ಫರ್ಧಿಯಾಗಿ ಕಿರುತೆರೆ ಲೋಕದಲ್ಲಿ ಹೊಸ ಪಯಣ ಆರಂಭಿಸಿದ್ದರು. ಬಿಗ್‌ಬಾಸ್‌ನಲ್ಲೂ ಸೈ ಎನಿಸಿಕೊಂಡಿದ್ದ ಅವರು ತಮ್ಮ ಇರುವೆ ಆನೆ ಕಥೆ ಮೂಲಕ ಎಲ್ಲರನ್ನೂ ನಗಿಸುತ್ತಾ ಮೆಚ್ಚುಗೆ ಪಡೆದಿದ್ದರು. ವೈಷ್ಣವಿ ಗೌಡ ಅವರ ವ್ಯಕ್ತಿತ್ವ ಏನು ಎನ್ನುವುದು ಬಿಗ್‌ ಬಾಸ್‌ ಮೂಲಕ ಎಲ್ಲರಿಗೂ ಪರಿಚಯವಾಗಿತ್ತು.

ಇನ್ನು ವೈಷ್ಣವಿ ಗೌಡ ಜೊತೆ ನಿಶ್ಚಿತಾರ್ಥ ಆಗಿದೆ ಎನ್ನುವ ವಿದ್ಯಾಭರಣ್‌ ಯಾರು ಎನ್ನುವ ಕುತೂಹಲ ಎಲ್ಲರಿಗಿತ್ತು. ಬೆಂಗಳೂರು ಮೂಲದ ವಿದ್ಯಾಭರಣ್‌, ನಟ ಹಾಗೂ ಉದ್ಯಮಿ ಆಗಿದ್ದಾರೆ. ವಿದ್ಯಾಭರಣ್‌ ಬೆಂಗಳೂರಿನ ಬಿಎಂಎಸ್‌ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ಬಳಿಕ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ನಟನೆಯಲ್ಲೂ ಆಸಕ್ತಿ ಹೊಂದಿದ್ದ ವಿದ್ಯಾಭರಣ್‌, 2018ರಲ್ಲಿ ತೆರೆಕಂಡ ವಿರಾಜ್‌ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+