ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ನಟಿ ತಾರಾ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಏ. 03: ಕೊರೊನಾ ವೈರಸ್ ಇಡೀ ಜಗತ್ತಿಗೆ ಸಂಕಷ್ಟ ತಂದೊಡ್ಡಿದೆ. ಇದೇ ಕಾರಣಕ್ಕೆ ಇಡೀ ದೇಶ ಕಳೆದ 9 ದಿನಗಳಿಂದ ಲಾಕ್‌ಡೌನ್ ಆಗಿದೆ. ಬಡವರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮೂರನೇ ಬಾರಿಗೆ ಮಾತನಾಡಿದ್ದಾರೆ. ಬಡವರ ಬಗ್ಗೆ ಕಳಕಳವಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜನ ಸಮಾನ್ಯರಿಗೆ ಸಂದೇಶವನ್ನು ಕೊಟ್ಟಿದ್ದಾರೆ. ಕೊರೊನಾ ವೈರಸ್ ಹರಡುವ ಚೈನ್ ಮುರಿಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ರಾಮಬಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದಲ್ಲದೆ ಇದೇ ಏಪ್ರೀಲ್ 5 ರಂದು ರಾತ್ರಿ ಪ್ರತಿ ಮನೆಯಲ್ಲೂ ಮೊಂಬತ್ತಿ ಬೆಳಗುವ ಮೂಲಕ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಿನ್ನು ಪ್ರದರ್ಶಿಸೋಣ ಎಂದಿದ್ದಾರೆ.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ

ಇನ್ನು ಪ್ರಧಾನಿ ಮೋದಿ ಅವರ ಸಂದೇಶಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ವಿಧಾನ ಪರಿಷತ್ ಮಾಜಿ ಸದಸ್ಯೆ, ಹಿರಿಯ ಚಿತ್ರನಟಿ ತಾರಾ ಅನೂರಾಧಾ ಅವರು ಮೋದೀಜಿ ನಾವು ನಿಮ್ಮೊಂದಿಗಿದ್ದೇವೆ ಎಂದಿದ್ದಾರೆ. ಕೊರೋನಾ ವಿರುದ್ದ ಏಪ್ರೀಲ್ 5ರಂದು ದೀಪ ಬೆಳಗಿಸುವ ವಿಚಾರವಾಗಿಯೂ ನಟಿ ತಾರಾ ಮಾತನಾಡಿದ್ದಾರೆ, ಅವತ್ತು ಪ್ರತಿ ಮನೆಯಲ್ಲಿ ದೀಪ ಹಚ್ಚುವ ಮೂಲಕ ನಾವೆಲ್ಲರೂ ಒಂದೇ ಎಂಬ ಒಗ್ಗಟನ ಕೊಡೊಣ.

Actress Tara Anooradha has said that Prime Minister Narendra Modis message should be followed

ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶ ತಪ್ಪದೇ ಪಾಲಿಸೋಣ. ಸಾವಿರಾರು ವರ್ಷಗಳ ಹಿಂದಿನಿಂದ ನಮ್ಮ ಹಿರಿಯರು, ಋಷಿ ಮುನಿಗಳು ಹೇಳಿದ್ದನ್ನೆ ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ದೀಪ ಹಚ್ಚುವ ಮೂಲಕ ಅಂಧಕಾರ ಓಡಿಸೋಣ, ಕೊರೋನಾ ನಾಶವಾಗಲಿ, ನಮ್ಮ ದೇಶ ಬಿಟ್ಟು ತೊಲಗಲಿ ಎಂದು ಪ್ರಾರ್ಥಿಸೋಣ ಎಂದು ತಾರಾ ಹೇಳಿದ್ದಾರೆ.

English summary
Actress Tara Anooradha has said that Prime Minister Narendra Modi's message should be followed. Prime Minister Modi has said that our elders and sage munis have said thousands of years ago .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X