ಕನ್ನಡವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಈ ಕೆಲಸ ಬೇಡವಾಗಿತ್ತು: ನಟಿ ರಮ್ಯಾ !
ಕನ್ನಡವನ್ನು ಉಳಿಸಿಕೊಳ್ಳುವ ಹಾಗೂ ಬೆಳೆಸುವ ಹೋರಾಟವನ್ನು ರಾಜ್ಯದಲ್ಲಿ ಕನ್ನಡಿಗರು ಮಾಡುತ್ತಿದ್ದಾರೆ. ಈ ರೀತಿಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಈ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದೆ. ಅಥವಾ ಈ ರೀತಿಯ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಅವಶ್ಯಕತೆಯೇ ಇರಲಿಲ್ಲ ಎಂದು ನಟಿ ರಮ್ಯಾ ಅವರು ಅಭಿಪ್ರಾಯಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ಕಳೆದ ಬಾರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ನಟಿ ರಮ್ಯಾ ಅವರು ಟೀಕೆಗೆ ಒಳಗಾಗಿದ್ದರು.
ನಟಿ ರಮ್ಯಾ ಅವರು ಮೈಸೂರು ಸ್ಯಾಂಡಲ್ ಸೋಪ್‌ನ ವಿಚಾರದಲ್ಲಿ ಮತ್ತೊಮ್ಮೆ ಮಾತನಾಡಿದ್ದಾರೆ. ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಿ ಆಯ್ಕೆ ಮಾಡುವ ಅವಶ್ಯಕತೆ ಇರಲಿಲ್ಲ ಇದು ಕನ್ನಡಿಗರ ಹಣ ವ್ಯರ್ಥ ಅಥವಾ ಪೋಲು ಮಾಡುವ ನಿರ್ಧಾರ ಎಂದು ಇದಕ್ಕೂ ಮೊದಲು ಅವರು ಅಭಿಪ್ರಾಯಪಟ್ಟಿದ್ದರು.

ಇದೀಗ ಸೋಮವಾರ ಮತ್ತೊಮ್ಮೆ ಪೋಸ್ಟ್ ಮಾಡಿರುವ ನಟಿ ರಮ್ಯಾ ಅವರು, KSDL ಅನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಶ್ಲಾಘಿಸುತ್ತೇನೆ. ಆದರೆ ಇದನ್ನು ಕಾರ್ಯಗತಗೊಳಿಸಲು ಆಯ್ಕೆ ಮಾಡಿಕೊಂಡಿರುವ ವಿಧಾನವು ಕೇವಲ ನಾಮಕಾವಸ್ತೆಯಂತೆ ಕಾಣುತ್ತದೆ ಎಂದಿದ್ದಾರೆ.
ಮುಂದುವರಿದು ವ್ಯವಹಾರದ ದೃಷ್ಟಿಕೋನದಿಂದ ನೋಡಿದರೂ, ವಿಶೇಷವಾಗಿ ಕಂಪನಿಯು ಸಂಕಷ್ಟದಲ್ಲಿ ಇರುವಾಗ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್ ಐಕಾನಿಕ್ ಬ್ರ್ಯಾಂಡ್ ಆಗಿದೆ. ದೊಡ್ಡ ಪರಂಪರೆಯನ್ನು ಹೊಂದಿದ್ದರೂ ಅದಕ್ಕೆ ಬ್ರಾಂಡ್ ಅಂಬಾಸಿಡರ್ ಅಗತ್ಯವಿಲ್ಲ (ಅಮುಲ್, ಆಪಲ್, ಡವ್, ಅಮೆಜಾನ್) ಗಳಂತೆಯೇ ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಮನೆಮಾತಾಗಿದೆ.
ಉತ್ತರ ಭಾರತೀಯ ಗ್ರಾಹಕರ ಮಾರುಕಟ್ಟೆಯನ್ನು ಗುರಿಯಾಗಿಸಲು ಕನ್ನಡೇತರರನ್ನು ಬ್ರಾಂಡ್ ರಾಯಭಾರಿಯಾಗಿ ತೆಗೆದುಕೊಳ್ಳುವ ಮೂಲಕ ಅವರು ತನ್ನದೇ ಆದ ಜನರನ್ನು, ಅದರ ಪ್ರಮುಖ ನಿಷ್ಠಾವಂತ ಗ್ರಾಹಕ ನೆಲೆಯನ್ನು - ಕನ್ನಡಿಗನನ್ನು ದೂರವಿಟ್ಟಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ನಟಿ ರಮ್ಯಾ ಅವರು ಕಟುವಾಗಿ ಟೀಕಿಸಿದ್ದಾರೆ.
ನಾವು ನಮ್ಮ ಕನ್ನಡ ಹೆಮ್ಮೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಸಮಯದಲ್ಲಿ ಸರ್ಕಾರದ ಈ ನಿರ್ಧಾರವು ನಮ್ಮ ಹೋರಾಟಕ್ಕೆ ಎದುರಾದ ಹಿನ್ನಡೆ ಅಂತಲೇ ಭಾವಿಸಬೇಕಾಗುತ್ತದೆ ಅಥವಾ ಪ್ರಮುಖ ಹಿನ್ನಡೆ ಅಂತಲೇ ನಾವು ಭಾವಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರು ಶತಮಾನಗಳಿಂದ ಮತದಾನದ ಹಕ್ಕುಗಳಿಂದ ಹಿಡಿದು ಅವಾಸ್ತವಿಕ ಸೌಂದರ್ಯ ಮಾನದಂಡಗಳವರೆಗೆ ಚರ್ಮದ ಆರೈಕೆಯವರೆಗೆ ಸಮಾನ ವೇತನದವರೆಗೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಹೋರಾಡಿದ್ದಾರೆ. ಇಲ್ಲಿ ನಮಗೆ ಇನ್ನೂ ಚರ್ಮದ ಬಣ್ಣದ ಬಗ್ಗೆ ಹಾಗೂ ಬೆಳ್ಳಗಿದ್ದರೆ ಮಾತ್ರ ಸೌಂದರ್ಯ ಎಂಬರ್ಥದ ಸಂದೇಶ ಸಾರುತ್ತಿದ್ದಾರೆ ಎನ್ನುವುದನ್ನು ಮಾರ್ಮಿಕವಾಗಿ ರಮ್ಯಾ ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್‌ನ ಹಿರಿಮೆ ಅದರೊಂದಿಗೆ ಜನ ಕನೆಕ್ಟ್ ಆಗಿರುವುದರೊಂದಿಗೆ ಇದೆ. ಈಗ ಬ್ರ್ಯಾಂಡ್ ಅಂಬಾಸಿಡರ್ ಆಗಿರುವವರು ಇದರಿಂದ ದೂರವಿದ್ದಾರೆ. ಕನ್ನಡ ಅಥವಾ ಕರ್ನಾಟಕದ ಐತಿಹಾಸಿಕ ಹಿನ್ನೆಲೆಯ ಒಂದು ಬ್ರ್ಯಾಂಡ್‌ಗೆ ಅದರ ಸಂಪರ್ಕ ಅಥವಾ ಹಿರಿಮೆಯೇ ಗೊತ್ತಿಲ್ಲದವರು ಪ್ರಚಾರ ಮಾಡಲು ನೇಮಕ ಮಾಡಿಕೊಳ್ಳಲಾಗಿದೆ ಎಂಬರ್ಥದಲ್ಲಿ ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಬೇರೆ ಯಾವುದೇ ಸೋಪ್ ಅಲ್ಲ. ಈ ವಿಚಾರದಲ್ಲಿ ಕನ್ನಡಿಗರೊಂದಿಗೆ ಸೂಕ್ಷ್ಮತೆಯಿಂದ ವ್ಯವಹರಿಸಬೇಕು ಎಂದೂ ಅವರು ಎಚ್ಚರಿಸಿದ್ದಾರೆ.












Click it and Unblock the Notifications