• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಟಿ ರಮ್ಯಾ - ರಾಫೆಲ್ ಲವ್ ಬ್ರೇಕ್ ಅಪ್: ಕಾರಣ ನೀಡಿದ ರಮ್ಯಾ ತಾಯಿ

|
   ಮದುವೆ, ಬ್ರೇಕ್ ಅಪ್, ಬಾಯ್ ಫ್ರೆಂಡ್ ಬಗ್ಗೆ ರಮ್ಯಾ ತಾಯಿ ಬಿಚ್ಚಿಟ್ಟ ಸತ್ಯ! | FILMIBEAT KANNADA

   ಬೆಂಗಳೂರು, ಆ 22: ಮಂಡ್ಯದ ಮಾಜಿ ಸಂಸದೆ ಕಮ್ ಚಿತ್ರನಟಿಯೂ ಆಗಿರುವ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಮದುವೆ ವಿಚಾರದಲ್ಲಿ ಹರಿದಾಡುತ್ತಿದ್ದ ಸುದ್ದಿಯ ಬಗ್ಗೆ ಅವರ ತಾಯಿ ಸ್ಪಷ್ಟನೆಯನ್ನು ನೀಡಿದ್ದಾರೆ.

   " ನನ್ನ ಮಗಳ ಮದುವೆಯನ್ನು ಎಲ್ಲರಿಗೂ ತಿಳಿಸಿಯೇ ಮಾಡುತ್ತೇನೆ. ಕದ್ದುಮುಚ್ಚಿ ಮದುವೆ ಮಾಡಿಕೊಳ್ಳುವ ಯಾವ ಅವಶ್ಯಕತೆಯೂ ನಮಗಿಲ್ಲ" ಎಂದು ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.

   ಸದ್ಯದಲ್ಲೇ ದುಬೈಯಲ್ಲಿ ರಾಫೆಲ್ ಜೊತೆ ರಮ್ಯಾ ಮದುವೆ! ಸುದ್ದಿ ನಿಜಾನಾ?

   " ರಮ್ಯಾ ಮತ್ತು ರಾಫೆಲ್ ಇಬ್ಬರು ಬ್ರೇಕ್-ಅಪ್ ಮಾಡಿಕೊಂಡಿದ್ದಾರೆ. ಆದರೆ, ನಾವು ಅವರ ಕುಟುಂಬದ ಜೊತೆಗೆ ಅನ್ಯೋನ್ಯವಾಗಿಯೇ ಇದ್ದೇವೆ. ವಿದೇಶದಲ್ಲಿ ಸೆಟ್ಲ್ ಆಗಲು ರಮ್ಯಾಗೆ ಮನಸ್ಸಿಲ್ಲದ ಕಾರಣ ಲವ್ ಬ್ರೇಕ್ ಆಗಿದೆ' ಎಂದು ರಮ್ಯಾ ತಾಯಿ ಹೇಳಿದ್ದಾರೆ.

   " ನನ್ನ ಮಗಳು ರಾಜಕೀಯದಲ್ಲಿ ಬ್ಯೂಸಿ, ರಾಫೆಲ್ ವ್ಯಾಪಾರದಲ್ಲಿ ಬ್ಯೂಸಿ. ಹಾಗಾಗಿ, ಇವರಿಬ್ಬರಿಗೂ ಸಮಯ ಹೊಂದಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ, ಬೇರೆಯಾಗಿದ್ದಾರೆ" ಎಂದು ರಮ್ಯಾ ಮದುವೆ ವಿಚಾರದಲ್ಲಿ ಹರಿದಾಡುತ್ತಿದ್ದ ಎಲ್ಲಾ ಸುದ್ದಿಗೆ ತೆರೆ ಎಳೆದಿದ್ದಾರೆ.

   ರಮ್ಯಾ ತಮ್ಮ ಬಹುಕಾಲದ ಸ್ನೇಹಿತ ಪೋರ್ಚುಗಲ್ ದೇಶದ ರಾಫೆಲ್ ಎಂಬ ಉದ್ಯಮಿಯನ್ನು ಕೈಹಿಡಿಯಲಿದ್ದಾರೆ. ಸದ್ಯದಲ್ಲೇ ದುಬೈಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿತ್ತು.

   " ರಮ್ಯಾ ಮದುವೆ ವಿಚಾರದಲ್ಲಿ ಯಾರೂ ಸುಳ್ಳು ಸುದ್ದಿಯನ್ನು ದಯವಿಟ್ಟು ಹಬ್ಬಿಸಬೇಡಿ" ಎಂದು ರಮ್ಯಾ ತಾಯಿ ರಂಜಿತಾ ಮನವಿ ಮಾಡಿದ್ದಾರೆ.

   English summary
   Actor Turned Politician Ramya' aka Divya Spandana's Mother Given Clarification About Her Daughter Marriage.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X