Get Updates
Get notified of breaking news, exclusive insights, and must-see stories!

Prakash Raj: ಮೋದಿ ವ್ಯಂಗ್ಯಚಿತ್ರ ಹಂಚಿಕೊಂಡ ಪ್ರಕಾಶ್‌ ರಾಜ್‌: ಕಾಂಗ್ರೆಸ್‌ಗೂ ಕ್ಲಾಸ್‌!

Prakash Raj: ನಟ ಪ್ರಕಾಶ್‌ರಾಜ್‌ ಅವರು ಏಕಕಾಲಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಕ್ಲಾಸ್‌ ತೆಗೆದುಕೊಂಡಿದ್ದು. ಈ ವಿಚಾರದಲ್ಲಿ ಜನ ಅವರನ್ನು ಮೆಚ್ಚಿಕೊಂಡಿದ್ದಾರೆ. ನಟ ಪ್ರಕಾಶ್‌ರಾಜ್‌ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದು ಹಾಗೂ ವಿಮರ್ಶೆ ಮಾಡುವುದನ್ನು ಮಾಡುತ್ತಿರುತ್ತಾರೆ. ಇಷ್ಟು ದಿನ ಅವರು ಬಿಜೆಪಿಯ ವಿರುದ್ಧ ಮಾತ್ರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಪರವಾದ ಒಲವು ಹೊಂದಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದವು. ಬಿಜೆಪಿಯ ಬಗ್ಗೆ ಮಾತ್ರ ಟೀಕೆ ಮಾಡುತ್ತಿದ್ದು ಕಾಂಗ್ರೆಸ್‌ ಪರವಾಗಿ ಇದ್ದಾರೆ ಎನ್ನುವ ಆರೋಪವೂ ಇತ್ತು. ಆದರೆ, ಇದೀಗ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಮಾತನಾಡಿರುವುದು ವೈರಲ್ ಆಗುತ್ತಿದೆ. ಅದರ ವಿವರ ಇಲ್ಲಿದೆ.

ದೇಶದಲ್ಲಿ ಕೆಲವೇ ಕೆಲವು ನಟರು ಮಾತ್ರ ಸರ್ಕಾರದ ತಪ್ಪು ಹಾಗೂ ತಪ್ಪು ನಿರ್ಧಾರಗಳನ್ನು ವಿಮರ್ಶೆ ಮಾಡುತ್ತಾರೆ. ಈ ರೀತಿ ವಿಮರ್ಶೆ ಮಾಡುವವರಲ್ಲಿ ನಟ ಪ್ರಕಾಶ್‌ರಾಜ್‌ ಅವರು ಸಹ ಒಬ್ಬರು. ಇದೀಗ ನಟ ಪ್ರಕಾಶ್‌ರಾಜ್‌ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ಟೀಕೆ ಮಾಡಿದ್ದಾರೆ. ಬಿಜೆಪಿಯ ಬಗ್ಗೆ ಅವರು ಟೀಕೆ ಮಾಡುವುದು ಹೊಸದೇನು ಅಲ್ಲ. ಆದರೆ, ಕಾಂಗ್ರೆಸ್‌ನ ಬಗ್ಗೆ ಹಾಗೂ ಕರ್ನಾಟಕ ಕಾಂಗ್ರೆಸ್‌ನ ಬಗ್ಗೆ ಟೀಕೆ ಮಾಡಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಅದೇನು ಅಂತ ನೋಡೋಣ.

Actor Prakash Raj Shared Modi Caricature Class for Congress Party too

ವಿರೋಧ ಪಕ್ಷ ಅಧಿಕಾರಕ್ಕೆ ಬರಲ್ಲ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರಕಾಶ್‌ ರಾಜ್‌ ಅವರು ಗುಡುಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಅಧಿಕಾರಕ್ಕೆ ಬರಲ್ಲ. ಆಡಳಿತ ಪಕ್ಷಗಳು ಬದಲಾಗುತ್ತವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಬಿಜೆಪಿ ಮಾಡಿದ ತಪ್ಪನ್ನೇ ಕಾಂಗ್ರೆಸ್‌ ಸಹ ಮಾಡಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಜನ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ಗೆ ಭರ್ಜರಿ ಕ್ಲಾಸ್‌: ಸರ್ಕಾರವು ಲಾಸ್‌ನಲ್ಲಿ ಇದೆ ಎಂದು ಕೆಲವೊಂದು ಸೇವೆಗಳನ್ನು ಬೆಲೆ ಏರಿಕೆ ಮಾಡಿರುವುದಕ್ಕೆ ಪ್ರಕಾಶ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಲಾಸ್‌ ಆಗುತ್ತಿದೆ ಎನ್ನುವುದಕ್ಕೆ ನೀವೇನು ಬ್ಯುಸಿನೆಸ್ ನಡೆಸುತ್ತಿದ್ದೀರಾ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಸರ್ಕಾರಿ ಸಂಸ್ಥೆ ನಷ್ಟವಾಗಿದೆ ಎಂದು ಜನರ ಮೇಲೆ ತೆರಿಗೆ ಹಾಕಿದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಗೂ ತರಾಟೆ

ಇನ್ನು ಇದೇ ಸಂದರ್ಭದಲ್ಲಿ ಪ್ರಕಾಶ್‌ರಾಜ್‌ ಅವರು ಬಿಜೆಪಿಗೂ ತರಾಟೆ ತೆಗೆದುಕೊಂಡಿದ್ದಾರೆ. ಅಮೆರಿಕದಲ್ಲಿರುವ ಅಕ್ರಮ ಭಾರತೀಯರನ್ನು ಅಮಾನವೀಯ ವಾಪಸ್‌ ಕಳುಹಿಸಿದ ನಡೆಗೆ ಈಗಾಗಲೇ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ತಮಿಳು ಮಾಧ್ಯಮವೊಂದು ಪ್ರಧಾನಿ ನರೇಂದ್ರ ಮೋದಿ ಅವರ ವ್ಯಂಗ್ಯಚಿತ್ರವನ್ನು ರಚಿಸಿದ್ದು. ಈ ವ್ಯಂಗ್ಯ ಚಿತ್ರಕ್ಕಾಗಿ ಆ ನಿರ್ದಿಷ್ಟ ಮಾಧ್ಯಮದ ಪ್ರಸಾರವನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ. ಇದಕ್ಕೆ ಪ್ರಕಾಶ್‌ ರಾಜ್‌ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಅವರು, ದಯವಿಟ್ಟು ಗಮನಿಸಿ:- ಈ ವ್ಯಂಗ್ಯಚಿತ್ರವನ್ನು ನಾಯಕರು (ಕೇಂದ್ರ ಬಿಜೆಪಿ ಸರ್ಕಾರ) ನಿಷೇಧಿಸಿದೆ.. ಸಾಮಾನ್ಯ ಜನರಿಗೆ ಮಾತ್ರ ಕೈಕೋಳ ಹಾಕಬೇಕು.. ನಾಯಕನಿಗೆ ಅಲ್ಲ.. ದಯವಿಟ್ಟು ಇದನ್ನು ಮರು ಟ್ವೀಟ್ ಮಾಡುವ ಮೂಲಕ ಅಥವಾ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿ ಎಂದು ಟ್ವೀಟ್ ಮಾಡುವ ಮೂಲಕ ವ್ಯಂಗ್ಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+