ನಕಲಿ ಖಾತೆಯಿಂದ ಕೆಟ್ಟ ಸಂದೇಶ, ಜಗ್ಗೇಶ್ ನೀಡಿದ ಸ್ಪಷ್ಟನೆ

ಬೆಂಗಳೂರು, ಫೆಬ್ರವರಿ 24: ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರೋಧಿ ಹೇಳಿಕೆ, ಟ್ವೀಟ್, ಫೇಸ್ ಬುಕ್ ಪೋಸ್ಟ್ ಗಳು ಅಧಿಕವಾಗಿದ್ದು, ಅದರಲ್ಲೂ ಸೆಲೆಬ್ರಿಟಿಗಳು ನೀಡುವ ಪ್ರತಿ ಹೇಳಿಕೆ ಬಗ್ಗೆ ಸಾರ್ವಜನಿಕರ ಗಮನ ಇದ್ದೇ ಇರುತ್ತವೆ. ಈ ನಡುವೆ ನಕಲಿ ಖಾತೆ ಬಳಸಿ ಅವಹೇಳನಕಾರಿ ಪೋಸ್ಟ್, ಟ್ರಾಲ್ ಮಾಡುವವರ ಸಂಖ್ಯೆಯು ಅಧಿಕವಾಗುತ್ತಿದೆ.

ನಟ ಕಮ್ ರಾಜಕಾರಣಿ ಜಗ್ಗೇಶ್ ಅವರಿಗೂ ಈ ನಕಲಿ ಪೋಸ್ಟ್ ಬಿಸಿ ತಟ್ಟಿದೆ. ಜಗ್ಗೇಶ್ ಅವರ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು. ಇದೆಲ್ಲವೂ ಸುಳ್ಳು ನಾನು ಎಂದಿಗೂ ಈ ರೀತಿ ಪದ ಬಳಸಿದವನಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.

Actor- Politician Jaggesh clarification on Fake Facebook Twitter post

ಆತ್ಮೀಯರಿಗೆ ನನ್ನ ಬಿನ್ನಹ,
ಚುನಾವಣೆ ಹತ್ತಿರ ಸಮಿಪಿಸಿದಂತೆ ಯಾರೋ fake ಕಿಡಿಗೇಡಿಗಳು ನನ್ನ Photoshopಮಾಡಿ ಕೆಟ್ಟಸಂದೇಶ ಹಾಕಿ ನನ್ನಹೆಸರು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ!ನನ್ನಗುಣನಡತೆ ನಿಮಗೆ ಅರಿವಿದೆ ಎಂದು ಭಾವಿಸುವೆ! ಪ್ರತಿಮಾತು ಜವಾಬ್ದಾರಿಯಿಂದ ನಾನು ಇಲ್ಲಿ ಲಗತ್ತಿಸುವೆ! Fakeಗಳು ಎಂದು fakeಗಳೆ!policeಗು ಮಾತಾಡಿರುವೆ ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+