Belagavi Riots: ಬೆಳಗಾವಿ ಬೆಳವಣಿಗೆ ಬಗ್ಗೆ ನಟ ನವೀನ್ ಶಂಕರ್ ಮಾತಿಗೆ ಮೆಚ್ಚುಗೆ!
ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ನಡೆದಿರುವ ವಿಚಾರ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರದ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು. ಎರಡೂ ರಾಜ್ಯಗಳ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಬೆಳಗಾವಿ ವಿಚಾರವಾಗಿ ಗಡಿ ವಿವಾದ ಹಲವು ದಶಕಗಳಿಂದ ಇದೆ. ಇನ್ನು ಇದೀಗ ಮೊದಲ ಬಾರಿ ಎನ್ನುವಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಇದೀಗ ಭಾಷಾ ವಿವಾದ ಶುರುವಾಗಿದ್ದು. ಭಾಷಾ ವಿವಾದದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಳಗಾವಿಯಲ್ಲಿ ಇಷ್ಟೆಲ್ಲ ವಿವಾದಗಳ ಹೊರತಾಗಿಯೂ ಕನ್ನಡ ಚಿತ್ರರಂಗ ಯಾವೊಬ್ಬರ ನಟ ಅಥವಾ ನಟಿಯೂ ಈ ವಿಚಾರದ ಬಗ್ಗೆ ಮಾತನಾಡಿಲ್ಲ ಎನ್ನುವ ಆಕ್ರೋಶ ಕನ್ನಡಿಗರಲ್ಲಿ ಇತ್ತು. ಇದೀಗ ಈ ವಿಚಾರದ ಬಗ್ಗೆ ನಟ ನವೀನ್ ಶಂಕರ್ ಅವರು ಮೌನ ಮುರಿದಿದ್ದಾರೆ.
ಕರ್ನಾಟಕದ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಮರಾಠಿ ಪುಂಡರ ಹಾವಳಿ ಹೆಚ್ಚಾಗಿದೆ. ಇಲ್ಲಿ ಸಮಸ್ಯೆ ಶುರುವಾಗುವ ಪ್ರತಿ ಬಾರಿಯೂ ಮಹಾರಾಷ್ಟ್ರ ಹಾಗೂ ಮರಾಠಿಗರೇ ಕಾಲು ಕೆರೆದುಕೊಂಡು ಬರುತ್ತಾರೆ ಎನ್ನುವ ಆರೋಪ ಕನ್ನಡಿಗರದ್ದು. ಇಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗೆಲ್ಲವೂ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ಧ್ವನಿ ಎತ್ತಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಯಾವೊಬ್ಬ ನಟ - ನಟಿಯೂ ಈ ವಿಚಾರವಾಗಿ ಮಾತನಾಡೆ ಇರುವುದು ಹಾಗೂ ಕನ್ನಡ ಸಾಹಿತಿಗಳು ಇಲ್ಲಿಯ ವರೆಗೆ ಧ್ವನಿ ಎತ್ತದೆ ಇರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ನಟ ನವೀನ್ ಶಂಕರ್ ಅವರು ಮಾತನಾಡಿದ್ದಾರೆ. ನವೀನ್ ಶಂಕರ್ ಅವರು ಈ ವಿಚಾರವಾಗಿ ಮಾತನಾಡಿರುವುದು ಕನ್ನಡಿಗರ ಮನಸ್ಸು ಗೆದ್ದಿದೆ. ಕನ್ನಡಿಗರು ಈ ವಿಷಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ವಿಚಾರ ನಟ ನವೀನ್ ಶಂಕರ್ ಹೇಳಿದ್ದೇನು ?
ಬೆಳಗಾವಿಯಲ್ಲಿ ಕಳೆದ 5 ದಿನಗಳಿಂದಲೂ ಉದ್ವಿಗ್ನ ಪರಿಸ್ಥಿತಿ ಇದೆ. ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ಮಾರಾಮಾರಿ, ಮಸಿ - ಕೇಸರಿ ಬಳಿಯುವುದು. ಸರ್ಕಾರಿ ಬಸ್‌ಗಳ ಮೇಲೆ ದಾಳಿಯಂತಹ ಪ್ರಕರಣಗಳು ನಡೆಯುತ್ತಿವೆ. ಆದರೆ, ಇದನ್ನು ವಿರೋಧಿಸಿ ಕನ್ನಡ ಚಿತ್ರರಂಗದಿಂದ ಒಂದೇ ಒಂದು ಹೇಳಿಕೆ / ಪೋಸ್ಟ್ ಸಹ ಕಾಣಿಸಿಲ್ಲ.
ಕನ್ನಡದ ನಟ ನವೀನ್ ಶಂಕರ್ ಅವರು ಪೋಸ್ಟ್ ಮಾಡಿದ್ದಾರೆ. ಬೆಳಗಾವಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಆತಂಕ ಮೂಡಿಸುತ್ತಿವೆ. ಕನ್ನಡಿಗರನ್ನು ಅವಮಾನಿಸಿದವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಪದೇ ಪದೇ ತೊಂದರೆ ಅನುಭವಿಸುತ್ತಿರುವ ಕನ್ನಡಿಗರಿಗೆ, ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. #ಸಿರಿಗನ್ನಡಂ_ಗೆಲ್ಗೆ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡಿಗರ ಮೆಚ್ಚುಗೆ: ನವೀನ್ ಅವರ ಟ್ವೀಟ್‌ಗೆ ಹಲವು ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ. ನೀವಾದರೂ ನಮ್ಮ ಬೆಳಗಾವಿಯ ಪರವಾಗಿ ಧ್ವನಿ ಎತ್ತಿದ್ದೀರಿ ತುಂಬಾ ಧನ್ಯವಾದಗಳು. ❤️🙏, ಕನ್ನಡಿಗರ ಪರವಾಗಿ ದನಿ ಎತ್ತಿದ್ದಕ್ಕೆ ನಿಮಗೆ ನನ್ನೀಗಳು ಸರ್ 🙏🏼🙏 , ಚಿತ್ರರಂಗದಿಂದ ಒಬ್ಬರಾದರು ಧ್ವನಿ ಎತ್ತಿದ್ರಲ್ಲ ಧನ್ಯವಾದಗಳು ಸರ್ . @KicchaSudeep @TheNameIsYash ನೀವು ಇದರ ಬಗ್ಗೆ ಧ್ವನಿ ಎತ್ತಬೇಕು. ಕನ್ನಡದ ಪ್ರೇಕ್ಷಕರಿಂದ ಗಳಿಸಿದ ಹಣ ಕೀರ್ತಿ ಯಶಸ್ಸು ಮಾತ್ರ ಬೇಕು. ಅದೇ ಕನ್ನಡಿಗರಿಗೆ ಆದ ಅವಮಾನ, ನೋವು ಸಂಕಟದ ಬಗ್ಗೆ ಮಾತನಾಡಲು ಸಮಯವಿಲ್ಲ, ಜಾಣ ಕುರುಡು ಹಾಗೂ ಕಿವುಡು ಪ್ರದರ್ಶನ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications