ಬೆಂಗಳೂರು ಬಿಜೆಪಿ ವಕ್ತಾರರಾಗಿ ಜಗ್ಗೇಶ್ ನೇಮಕ
ಬೆಂಗಳೂರು, ಫೆಬ್ರವರಿ 25: ಕರ್ನಾಟಕದ ಭಾರತೀಯ ಜನತಾ ಪಕ್ಷ(ಬಿಜೆಪಿ) ಘಟಕ ಹೊಸ ವಕ್ತಾರರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕ್ಯಾ. ಗಣೇಶ್ ಕಾರ್ಣಿಕ್ ಮುಖ್ಯ ವಕ್ತಾರರಾಗಿ ಮಂಗಳೂರು ವಿಭಾಗಕ್ಕೆ ನೇಮಕಗೊಂಡಿದ್ದರೆ, ನಟ ಜಗ್ಗೇಶ್ ಅವರು ಬೆಂಗಳೂರು ವಿಭಾಗದ ವಕ್ತಾರರಾಗಿದ್ದಾರೆ.
''ನನಗೆ ರಾಜ್ಯ ಭಾಜಪ ವಕ್ತಾರನಾಗಿ ನೇಮಸಿದ ಪಕ್ಷದ ಹಿರಿಯರಿಗೆ ಧನ್ಯವಾದ.. ಕಾಯವಾಚಮನ ಶುದ್ಧಾತ್ಮನಾಗಿ ಕಾಯಕಮಾಡುವೆ..'' ಎಂದು ಜಗ್ಗೇಶ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಗಳಾದ ಬಿ.ಎಲ್ ಸಂತೋಷ್, ಆರೆಸ್ಸೆಸ್ ಸಹ ಕಾರ್ಯವಾಹ ಮುಕುಂದ ಸಿ. ಅರ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಜಗ್ಗೇಶ್ ಅವರು ಧನ್ಯವಾದ ಅರ್ಪಿಸಿದ್ದಾರೆ.

ವಕ್ತಾರರ ನೇಮಕ:
ಕ್ಯಾ. ಗಣೇಶ್ ಕಾರ್ಣಿಕ್-ಮಂಗಳೂರು
ಜಗ್ಗೇಶ್- ಬೆಂಗಳೂರು
ರಾಜೂಗೌಡ(ನರಸಿಂಹ ನಾಯಕ್)-ಯಾದಗಿರಿ
ಚಲವಾದಿ ನಾರಾಯಣ ಸ್ವಾಮಿ-ಬೆಂಗಳೂರು
ರಾಜಕುಮಾರ್ ಪಾಟೀಲ್ ತೆಲ್ಕೂರ-ಕಲಬುರಗಿ
ತೇಜಸ್ವಿನಿ ಗೌಡ-ಬೆಂಗಳೂರು
ಗಿರಿಧರ ಉಪಾಧ್ಯಾಯ-ಬೆಂಗಳೂರು
ಪಿ ರಾಜೀವ್-ಬೆಳಗಾವಿ
ಎಂ. ಬಿ ಜಿರಲಿ- ಬೆಳಗಾವಿ
ಮಹೇಶ್-ಮೈಸೂರು
ನನಗೆ ರಾಜ್ಯ ಭಾಜಪ ವಕ್ತಾರನಾಗಿ ನೇಮಸಿದ ಪಕ್ಷದ ಹಿರಿಯರಿಗೆ ಧನ್ಯವಾದ..
— ನವರಸನಾಯಕ ಜಗ್ಗೇಶ್ (@Jaggesh2) February 25, 2021
ಕಾಯವಾಚಮನ ಶುದ್ಧಾತ್ಮನಾಗಿ
ಕಾಯಕಮಾಡುವೆ..@blsanthosh@MUKUNDAckpura@BSYBJP@BJP4Karnataka @nalinkateel
ಶುಭದಿನ ಶುಭೋದಯ:) pic.twitter.com/wFdrhh3qRu
ಜಗ್ಗೇಶ್ ರಾಜಕೀಯ ಪಯಣ: 'ಮಾತಿನ ಮಲ್ಲ' ಜಗ್ಗೇಶ್ ಅವರು ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಸ್ಪೀಕರ್ ಆಗಿದ್ದ ಕಾಲದಲ್ಲಿ ಶಾಸಕ ಸ್ಥಾನ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಕೆಎಸ್ಸಾರ್ಟಿಸಿ ಉಪಾಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಹುದ್ದೆ ನಿಭಾಯಿಸಿದರು. ಕರ್ನಾಟಕ ಬಿಜೆಪಿಯ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದರು. ಯಶವಂತಪುರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾರೆ. 2010ರ ಫೆಬ್ರವರಿ 03ರಂದು ಕರ್ನಾಟಕ ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡಲಾಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಸಕ್ರಿಯವಾಗಿರುವ ರಾಜಕಾರಣಿಗಳ ಪೈಕಿ ಒಬ್ಬರು.












Click it and Unblock the Notifications