ನಟ ಧನಂಜಯ್ ಮಾಂಸಾಹಾರ ಸೇವನೆ: ನಾನ್ ವೆಜ್ ತಿನ್ನುವವರು ಶಿವಭಕ್ತರಲ್ಲವೇ, ಲಿಂಗಾಯತರನ್ನು ಗುರಿ ಮಾಡಿ ಟ್ರೋಲ್ ಬೇಡ - ಚರ್ಚೆ
ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದಕ್ಕೆ ಕೆಲವರು ವಿರೋಧಿಸಿದ್ದಾರೆ. ಆದರೆ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡುವುದು ಅವರ ಆಯ್ಕೆ ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದಕ್ಕೆ ಕೆಲವರು ಜಾತಿ ಪ್ರಶ್ನೆ ಮಾಡಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕ್ಷಣದಲ್ಲಿ ಚರ್ಚೆ ಆಗಿರುವುದೇನು ಎನ್ನುವ ವಿವರ ಇಲ್ಲಿದೆ.
ಉಪನ್ಯಾಸಕಿ, ಸಾಹಿತಿ ದೀಪಾ ಹಿರೇಗುತ್ತಿ ಅವರು, ನಾನ್ ವೆಜ್ ತಿನ್ನುವವರು ಶಿವಭಕ್ತರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಆಹಾರ ಅನ್ನೋದು ಅವರವರ ಹಕ್ಕು ಮತ್ತು ಅವರವರ ಇಷ್ಟ. ನಾನ್ ವೆಜ್ ತಿನ್ನುವ ಜಾತಿಯಲ್ಲಿ ಹುಟ್ಟಿದವರು ಅದನ್ನು ತಿನ್ನದೇ ಇರಲು ಹೇಗೆ ಅವಕಾಶವಿದೆಯೋ ತಿನ್ನದ ಜಾತಿಯವರು ತಿನ್ನಲೂ ಸ್ವಾತಂತ್ರ್ಯವಿದೆ. ಡಾಲಿ ಧನಂಜಯ್ ಊಟ ಮಾಡುತ್ತಿರುವ ಫೋಟೋ ಇಟ್ಟುಕೊಂಡು ಕೆಲವರು ಮಾಡುತ್ತಿರುವ ಕಾಮೆಂಟ್‌ಗಳನ್ನು ನೋಡಿ ನಗು ಬಂತು.
ನಿಜವಾಗಿಯೂ ನೋಡಿದರೆ ಈ ವಿಷಯವೇ ಸಿಲ್ಲಿ. ಅವನು ಅದು ತಿಂದ, ಇವಳು ಇದು ತಿಂದಳು ಯಾಕೆ ? ನಿಮಗೆ ಬೇಕಾ ತಿನ್ನಿ, ಬೇಡವಾ ಬಿಡಿ. ಬೇರೆಯವರ ಬಾಳೆಲೆಯಲ್ಲಿ ಬಿದ್ದ ನೊಣ ಹುಡುಕುವ ಮುನ್ನ ನಿಮ್ಮ ತಟ್ಟೆ ನೋಡಿಕೊಳ್ಳಿ. ಹಾ, ಮೊದಲು ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನಾನಲ್ಲ, ಬಸವಣ್ಣ ಹೇಳಿದ್ದು ಎಂದು ಬರೆದುಕೊಂಡಿದ್ದಾರೆ.
ಸಸ್ಯದಲ್ಲೂ ಜೀವವಿದೆ, ಪ್ರಾಣಿಯಲ್ಲೂ ಜೀವವಿದೆ
ಡಾಲಿ ಧನಂಜಯ ತಿಂದರು ಮಾಂಸವ; ಅದಕ್ಕೆ ಯಾಕೆ ಮಾಡಬೇಕು ದ್ವೇಷವ ಕನ್ನಡ್ವಿರಾಟ ಎನ್ನುವ ಎಕ್ಸ್‌ಖಾತೆಯಿಂದ ಟ್ವೀಟ್‌ವೊಂದನ್ನು ಮಾಡಲಾಗಿದೆ. ಆಹಾರ ಅನ್ನೋದು ವೈಯಕ್ತಿಕ ಆಯ್ಕೆ, ಅಲ್ಲಿ ದ್ವೇಷಕ್ಕೆ ಜಾಗವೇಕೆ. ಆಹಾರ ಸೇವನೆಯಲ್ಲೂ ದ್ವೇಷ ಸಾರೋದು ಯಾಕೆ, ಮನುಷ್ಯ ತನಗೆ ಬೇಕಾದುದ್ದನ್ನು ತಿನ್ನಲು ಧರ್ಮ ಹಾಗು ಜಾತಿಯ ಅಪ್ಪಣೆ ಕೇಳಬೇಕೇ, ಆಹಾರ ಆಯ್ಕೆಯನ್ನು,ವ್ಯಕ್ತಿ ನಿರ್ಧಾರ ಮಾಡಬೇಕು ಹೊರೆತು ಹಳೆಯ ಕಟ್ಟುಪಾಡುಗಳಲ್ಲ, ಇಂತಹ ಅವೈಜ್ಞಾನಿಕ ಕಟ್ಟುಪಾಡುಗಳನ್ನು ದಾಟಿ ಆತ ಸೇವನೆ ಮಾಡುವತ್ತ ಮನ ಮಾಡಿದ್ದಾನೆ ಅಂದರೆ ಅವನು ಈ ಮೂಡ ಕಟ್ಟುಪಾಡುಗಳಿಂದ ಹೊರಬಂದು, ಪ್ರಗತಿಯತ್ತ ಮುಖ ಮಾಡಿರುವ ಎಂದು ಅರ್ಥ.

ಸಸ್ಯ ತಿನ್ನುವವನು ಸಸ್ಯಾಹಾರಿ ಪ್ರಾಣಿ ಮಾಂಸ ತಿನ್ನುವವನು ಮಾಂಸಾಹಾರಿ ಸಸ್ಯದಲ್ಲೂ ಕೂಡ ಜೀವವಿದೆ.ಪ್ರಾಣಿಯಲ್ಲೂ ಕೂಡ ಜೀವವಿದೆ. ಜೀವ ತಗೆದೆನೆ ತಿನ್ನುವೆವು ಅಂದ ಮೇಲೆ ಎರಡು ಕಡೆ ಹಿಂಸೆ ಇದೆ, ಬದುಕಲು ಆಹಾರ ಮುಖ್ಯ, ನಮಗೆ ಆಹಾರ ಸಿಗಲು ಸಸ್ಯ ಹಾಗು ಪ್ರಾಣಿಗಳನ್ನು ಉಪಯೋಗಿಸಿಕೊಳ್ಳೋದು ತಪ್ಪು ಅಲ್ಲ ಅಪರಾಧವು ಅಲ್ಲ.
ಸಸ್ಯಾಹಾರಿಗಳು ಸಸ್ಯ ತಿಂದುಕೊಂಡು ನಾವು ಹಿಂಸೆ ಮಾಡೋಲ್ಲ ಅಂದರೆ ಅದು ಅವರ ಮೂರ್ಖತನ. ಆಹಾರ ಬದುಕಲು ಅನಿವಾರ್ಯ ಆಹಾರ ಆಯ್ಕೆ ಪ್ರೆಶ್ನೆ ಮಾಡೋದು ಯಾಕ್ರಯ್ಯ ಎಂದು ಪ್ರಶ್ನೆ ಮಾಡಲಾಗಿದೆ.
🚨ಡಾಲಿ ಧನಂಜಯ ತಿಂದರು ಮಾಂಸವ
— ಕನ್ನಡ್ವಿರಾಟ (@kohlificationn) January 25, 2026
ಅದಕ್ಕೆ ಯಾಕೆ ಮಾಡಬೇಕು ದ್ವೇಷವ🚨
ಆಹಾರ ಅನ್ನೋದು ವೈಯಕ್ತಿಕ ಆಯ್ಕೆ, ಅಲ್ಲಿ ದ್ವೇಷಕ್ಕೆ ಜಾಗವೇಕೆ? 🍽️
ಆಹಾರ ಸೇವನೆಯಲ್ಲೂ ದ್ವೇಷ ಸಾರೋದು ಯಾಕೆ, ಮನುಷ್ಯ ತನಗೆ ಬೇಕಾದುದ್ದನ್ನು ತಿನ್ನಲು ಧರ್ಮ ಹಾಗು ಜಾತಿಯ ಅಪ್ಪಣೆ ಕೇಳಬೇಕೇ🤔
ಆಹಾರ ಆಯ್ಕೆಯನ್ನು,ವ್ಯಕ್ತಿ ನಿರ್ಧಾರ ಮಾಡಬೇಕು ಹೊರೆತು ಹಳೆಯ… pic.twitter.com/gcYdwgRcfM
ಸುಭಾನು ರಾರಾವಿ ಅವರು, ಲಿಂಗಾಯತರು ಮಾಂಸಾಹಾರ ಸೇವಿಸಬಹುದು. ಲಿಂಗಾಯತ ತತ್ವವು ಸಂಕುಚಿತವಲ್ಲ, ವಿಶಾಲ ಆಶಯಗಳನ್ನು ಹೊಂದಿದೆ. ಬಸವ ತತ್ವ ಅನುಯಾಯಿಯಾಗಿರುವ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವಿಸುತ್ತಿರುವ ವಿಡಿಯೋವನ್ನು ಗಮನಿಸಬಹುದು ಎಂದು ಹೇಳಿದ್ದಾರೆ.
ಲಿಂಗಾಯತರನ್ನು ಗುರಿ ಮಾಡಿ ಟ್ರೋಲ್ ಮಾಡಬೇಡಿ
ಬೆಳಗಾವಿ ಎನ್ನುವ ಖಾತೆಯಿಂದ ಲಿಂಗಾಯತರನ್ನು ಗುರಿ ಮಾಡಿ ಟ್ರೋಲ್ ಮಾಡಬೇಡಿ ಎಂದು ಹೇಳಲಾಗಿದೆ. ಲಿಂಗಾಯತರು ಚಿಕನ್, ಮಟನ್ ತಿಂತಾರಾ ? ಈ ತೆರನಾದ Caption ಹಾಕಿ, ಡಾಲಿ ಧನಂಜಯ ಅವರು ಊಟ ಮಾಡೋದನ್ನಾ ಕೆಲವ್ರು ಟ್ರೋಲ್ ಮಾಡ್ತಾ ಇದಾರೆ. ಇಂದಿನ ಕಾಲದಲ್ಲಿ ಮಾಂ*ಸಹಾರ ಬಹುತೇಕ ಎಲ್ಲಾ ಜಾತಿ/ಧರ್ಮ ದವರು ತಿಂತಾರೆ. ಆದರೆ ಕೇವಲ ಲಿಂಗಾಯತ ಸಮಾಜವನ್ನಾ ಗುರಿ ಮಾಡಿ, ಈ ತೆರನಾಗಿ ಟ್ರೋಲ್ ಮಾಡೋದು ಸರಿ ಅಲ್ಲಾ ಎಂದು ಅಭಿಪ್ರಾಯಪಡಲಾಗಿದೆ.
ಲಿಂಗಾಯತರು ಚಿಕನ್, ಮಟನ್ ತಿಂತಾರಾ ?
— Belagavi - ಬೆಳಗಾವಿ (@BelagaviKA) January 25, 2026
ಈ ತೆರನಾದ Caption ಹಾಕಿ, ಡಾಲಿ ಧನಂಜಯ ಅವರು ಊಟ ಮಾಡೋದನ್ನಾ ಕೆಲವ್ರು ಟ್ರೋಲ್ ಮಾಡ್ತಾ ಇದಾರೆ.
ಇಂದಿನ ಕಾಲದಲ್ಲಿ ಮಾಂ*ಸಹಾರ ಬಹುತೇಕ ಎಲ್ಲಾ ಜಾತಿ/ಧರ್ಮ ದವರು ತಿಂತಾರೆ. ಆದರೆ ಕೇವಲ ಲಿಂಗಾಯತ ಸಮಾಜವನ್ನಾ ಗುರಿ ಮಾಡಿ, ಈ ತೆರನಾಗಿ ಟ್ರೋಲ್ ಮಾಡೋದು ಸರಿ ಅಲ್ಲಾ. pic.twitter.com/in9iHzqIcy
Team Daali Dhananjaya ಎನ್ನುವ ಖಾತೆಯಿಂದ
ಚೆಂದ ಕೋಳಿ ಸಾರು
ಅಷ್ಟೆ ಚೆಂದ ಕೀರು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಚೆಂದ ಸುಟ್ಟ ಮೀನು
ಅಷ್ಟೆ ಚೆಂದ ಗಿಣ್ಣು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಹಸಿವು ದ್ಯಾವರಲ್ವ
ಹಸಿರು ದ್ಯಾವರಲ್ವ
ರುಚಿಯು ದ್ಯಾವರಲ್ಲವೆ..
ಸಿನಿಮಾ ಹೆಸರು "ಟಗರು ಪಲ್ಯ"
ಸಾಹಿತ್ಯ ಬರೆದವರು "ಡಾಲಿ ಧನಂಜಯ" ಎನ್ನುವ ಸಾಲುಗಳನ್ನು ಹಂಚಿಕೊಳ್ಳಲಾಗಿದೆ.
ಚೆಂದ ಕೋಳಿ ಸಾರು
— Team Daali Dhananjaya (@Team_Dhananjaya) January 25, 2026
ಅಷ್ಟೆ ಚೆಂದ ಕೀರು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಚೆಂದ ಸುಟ್ಟ ಮೀನು
ಅಷ್ಟೆ ಚೆಂದ ಗಿಣ್ಣು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಹಸಿವು ದ್ಯಾವರಲ್ವ
ಹಸಿರು ದ್ಯಾವರಲ್ವ
ರುಚಿಯು ದ್ಯಾವರಲ್ಲವೆ..
ಸಿನಿಮಾ ಹೆಸರು "ಟಗರು ಪಲ್ಯ"
ಸಾಹಿತ್ಯ ಬರೆದವರು "ಡಾಲಿ ಧನಂಜಯ"#DaaliDhananjaya #Dhananjayafans pic.twitter.com/J4kXVxuw98












Click it and Unblock the Notifications