Actor Dolly Dhananjay: ದೊನ್ನೆ ಬಿರಿಯಾನಿ ಸವಿದ ನಟ ಡಾಲಿ ಧನಂಜಯ್: ಜಾತಿ ಪ್ರಶ್ನೆ ಎತ್ತಿದ ನೆಟ್ಟಿಗರು, ಪರ - ವಿರೋಧ ಚರ್ಚೆ
Actor Dolly Dhananjay: ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ನಟ ಧನಂಜಯ್ ದೊನ್ನೆ ಬಿರಿಯಾನಿ ಸವಿದಿದ್ದಾರೆ. ಆದರೆ ಇದು ಪರ - ವಿರೋಧಕ್ಕೆ ಕಾರಣವಾಗಿದೆ. ಆಹಾರ ಸೇವನೆ ಅವರವರ ಹಕ್ಕು. ಈಚೆಗೆ ಬಾಡೇ ನಮ್ಮ ಗಾಡು ಎನ್ನುವ ಅಭಿಯಾನವೇ ಕರ್ನಾಟಕದಲ್ಲಿ ನಡೆದಿತ್ತು. ಇದೀಗ ಧನಂಜಯ್ ಅವರ ವಿಚಾರದಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ಕೆಲವು ಕಮೆಂಟ್, ಬರಹ ನೋಡೋಣ.
ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ವಿಚಾರಕ್ಕೆ ಬಹುತೇಕ ವಿರೋಧ ವ್ಯಕ್ತವಾಗಿದೆ. ಇದೆಲ್ಲವೂ ಚರ್ಚೆ ಆಗಬೇಕಾದ ವಿಷಯವೇ ಅಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಹವ್ಯಾಸಿ ಬರಹಗಾರ ಶರೀಫ್ ಕಾಡುಮಠ ಎನ್ನುವವರು, "ಜನರ ರೋಗವೇ ಅರ್ಥವಾಗಲ್ಲ. ಇಂತಹ ಮನಸ್ಥಿತಿಯಿಂದ ಜನ, ಅದರಲ್ಲೂ ಕನ್ನಡಿಗರು ಹೊರಬರಲು ಸಾಧ್ಯವೇ ಇಲ್ಲ ಅಂತ ಅನಿಸ್ತದೆ. ಡಾಲಿ ಧನಂಜಯ್ Non Veg ತಿಂದ ತಕ್ಷಣ, 'ವಿಭೂತಿ ಹಚ್ಕೊಂಡು ಮದುವೆ ಆದದ್ದು ಖುಷಿಯಾಗಿತ್ತು. ಆದರೆ ಈತ ಇಂಥ ಲಿಂಗಾಯತ ಅಂತ ಅಂದ್ಕೊಂಡಿರಲಿಲ್ಲ', 'ಬಡವರ ಮಗ ಬೆಳೆದಾಯ್ತು, ಇನ್ನೇನ್ ಬೇಕಾದ್ರೂ ತಿನ್ನಬಹುದು' ಹೀಗೆ ಹಲವು ಟೀಕೆ. ಅಲ್ಲ, ಮನುಷ್ಯರಿಗೆ ಒಂದಿಷ್ಟಾದ್ರೂ ಕಾಮನ್ ಸೆನ್ಸ್ ಅನ್ನುವುದು ಇರಬೇಕುಅಲ್ವಾ? ಯಾರದ್ದೋ ಹೊಟ್ಟೆಗೆ ಸೇರುವ ಅನ್ನ, ಮಾಂಸದ ಬಗ್ಗೆ ಇನ್ನೊಬ್ಬರು ಯಾಕೆ ಚಿಂತೆ ಮಾಡ್ಬೇಕು? ಎಷ್ಟು ಸಣ್ಣ ವಿಷಯ ಇದು, ಅದು ಹೇಗೆ ಇನ್ನೊಬ್ಬರಿಗೆ Uncomfortable ಅನಿಸುತ್ತೆ ?
ಯಾವ ಲೋಕದಲ್ಲಿ ಇದ್ದೇವೆ ನಾವು?
ಯಾರೋ ಯಾರನ್ನೋ ಜಾತಿ ಮೀರಿ ಮದುವೆ ಆದ್ರು. ಅದು ಇವರ ಕಣ್ಣಿಗೆ, ಕುಟುಂಬದವರ ಕಣ್ಣಿಗೆ Comfortable ಅನಿಸುತ್ತಿಲ್ಲ ಅಂದ್ರೆ ಏನರ್ಥ? ಇವರಿಗೆ ಚಂದ ಕಾಣ್ಲಿಕ್ಕೆ ನೀವು ಮದುವೆ ಆಗ್ಬೇಕಾ? ಯಾವ ಲೋಕದಲ್ಲಿ ಇದ್ದೇವೆ ನಾವು? 21ನೇ ಶತಮಾನ ಅಂತ ಹೇಳ್ತೀವಿ. ಯಾವ ಕರ್ಮಕ್ಕೆ? ದರಿದ್ರ ಜಾತಿ ರೋಗ, ಧರ್ಮದ ಅಮಲು ಇಷ್ಟೊತ್ತಿಗೆ ಜನರಿಗೆ ಮರೆತೇ ಹೋಗ್ಬೇಕಿತ್ತು. ದುರಂತ ಏನಂದ್ರೆ ಅದಕ್ಕೆ ವಿರುದ್ಧವಾದದ್ದೇ ಆಗಿದೆ. ಧರಿಸುವ ಚಪ್ಪಲಿಯಿಂದ ಹಿಡಿದು, ತಿನ್ನುವ ಅನ್ನದವರೆಗೆ ಜಾತಿಯಿಂದ ಅಳೆಯುವುದು ಬಿಟ್ಟಿಲ್ಲ. ಮತ್ತೆ ಜಾತಿ ಬಗ್ಗೆ ಸಿನಿಮಾ ಬಂದ್ರೆ 'ಅದೇ ಹಳಸಲು, ಜಾತಿ ವಿಷಯ ಇಟ್ಕೊಂಡು ಸಿನಿಮಾ ಮಾಡಿದ್ದಾರೆ' ಅಂತ ಕಾರಿಕೊಳ್ಳುತ್ತಾರೆ.
ನೀವು ತಿನ್ನುವ ಆಹಾರ ನಮ್ಮ ಕಣ್ಣಿಗೆ ಹಿತವಾಗಿರಬೇಕು, ನಿಮ್ಮ ತಟ್ಟೆಯಲ್ಲಿರುವ ಎಲ್ಲವೂ ಜಾತಿಯ ಮಿತಿಯೊಳಗಿರಬೇಕು. ಅದನ್ನು ಮೀರಿ ಹೋಗಬಾರದು. ನಿಮ್ಮ ಮದುವೆಯೂ ಹಾಗೆಯೇ, ನಾವು ನಿರೀಕ್ಷಿಸಿದ ಹಾಗೆಯೇ ನಡೀಬೇಕು. ನೀವು ಶಾಸ್ತ್ರ ತಪ್ಪಿಸಬಾರದು, ಜಾತಿಯೊಳಗಿನ ಹೆಣ್ಣನ್ನೇ/ ಗಂಡನ್ನೇ ಮದುವೆ ಆಗ್ಬೇಕು. ಅದು ನಮ್ಮ ಕಣ್ಣಿಗೆ ಹಿತ. ಅದು ಬಿಟ್ಟು ನೀವು ಜಾತಿಯಿಂದಾಚೆ ಬೇರೆಯವರನ್ನು ಮದುವೆಯಾಗುವುದು ನಮ್ಮ ಕಣ್ಣಿಗೆ ಕಿರಿಕಿರಿ. ಮದುವೆಯಾದ್ಮೇಲೆ ನೀವು ಹೇಗೆ ಬದುಕ್ತಿದ್ದೀರಿ ಅಂತ ಸ್ವತಃ ಕುಟುಂಬದವರಿಗೂ ಬೇಕಾಗಲ್ಲ. ಇದು ಈ ಜಾತಿರೋಗಪೀಡಿತರ ಬಯಕೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಸನಾತನ ಎನ್ನುವ ಖಾತೆಯಿಂದ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, "ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ?" ಎಂದು ಪ್ರಶ್ನೆ ಮಾಡಲಾಗಿದೆ.
belagavika ಎನ್ನುವ ಖಾತೆಯಿಂದ ನಟ ಡಾಲಿ ಧನಂಜಯ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಲಿಂಗಾಯತರು ಚಿಕನ್, ಮಟನ್ ತಿಂತಾರಾ ?,ಈ ತೆರನಾದ Caption ಹಾಕಿ, ಡಾಲಿ ಧನಂಜಯ ಅವರು ಊಟ ಮಾಡೋದನ್ನಾ ಕೆಲವರು ಟ್ರೋಲ್ ಮಾಡ್ತಿದ್ದಾರೆ. ಇಂದಿನ ಕಾಲದಲ್ಲಿ ಮಾಂ*ಸಹಾರ ಬಹುತೇಕ ಎಲ್ಲಾ ಜಾತಿ/ಧರ್ಮ ದವರು ತಿಂತಾರೆ. ಆದರೆ ಕೇವಲ ಲಿಂಗಾಯತ ಸಮಾಜವನ್ನಾ ಗುರಿ ಮಾಡಿ, ಈ ತೆರನಾಗಿ ಟ್ರೋಲ್ ಮಾಡೋದು ಸರಿ ಅಲ್ಲಾ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡ್ರಿ ಎಂದು ಕೇಳಲಾಗಿದೆ.
ಸಂಪತ್ ಕಕ್ಕೇರಿ ಎನ್ನುವವರು, ಒಬ್ಬರು ತಮ್ಮ ಧರ್ಮದ ನಿಯಮಗಳನ್ನು ಪಾಲಿಸಲು ಆಗದಿದ್ದರೆ ಆಯಾ ಧರ್ಮವನ್ನು ತೊರೆದು ಬೇರೆ ಧರ್ಮವನ್ನು ಸೇರುವುದು ಉತ್ತಮ, ಅದು ಬಿಟ್ಟು ನನ್ನ ಸ್ವಾತಂತ್ರ್ಯ ನನಗೆ ಬೇಕಾದ ಊಟ ಮಾಡ್ತೀನಿ, ನನಗೆ ಬೇಕಾದ ಹಾಗೆ ಇರ್ತೀನಿ ಅಂದ್ರೆ, ಬೇರೆಯವರು ನಿಮ್ಮ ಧರ್ಮದ ಬಗ್ಗೆ ಪ್ರಶ್ನೆ ಮಾಡುವವುದರಲ್ಲಿ ತಪ್ಪಿಲ್ಲ ಹಾಗೂ ಅದು ತಪ್ಪು ಎಂದು ಹೇಳುವ ಅಧಿಕಾರವೂ ನಿಮಗೆ ಇರುವುದಿಲ್ಲ, ಧರ್ಮ ಬಿಟ್ಟು ಧರ್ಮದ ಬಗ್ಗೆ ತಪ್ಪು ಮಾತನಾಡಿದವರನ್ನು ಪ್ರಶ್ನಿಸುವುದು ಯಾವ ಧರ್ಮ ಎಂದು ಪ್ರಶ್ನೆ ಮಾಡಿದ್ದಾರೆ.
ಜಾತಿ ಬೆಂಕಿ ಹಚ್ಚುವ ಜನ ಇದ್ದಾರೆ ಎಚ್ಚರ, ಬಸನಗೌಡ ಎನ್ನುವವರು ಹೌದು ಅಣ್ಣ ನಾವು ಲಿಂಗಾಯತರು ಆದ್ರೆ ನಾವು ನಾನ್ ವೆಜ್ ತಿನ್ನೋಲ್ಲಾ ಅಂದ್ರೆ ಬೇರೆ ಅವ್ರಿಗೂ ತಿನ್ಬೇಡಿ ತಿನ್ಬಾರ್ದು ಅಂತಾ ಹೇಳೋದು ತಪ್ಪು ಅವರ ಇಷ್ಟ ಅವರ ಊಟ ಎಂದಿದ್ದಾರೆ.
-
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ












Click it and Unblock the Notifications