ದರ್ಶನ್ ಮೇಲೆ ಚಾರ್ಜ್‌ಶೀಟ್ ಹಾಕಿದ ಬಳಿಕ ಕಾದಿದೆ ಸಂಕಷ್ಟ!
ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದು, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಶನಿವಾರ ಜುಲೈ ಮೂರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ದರ್ಶನ್, ಪ್ರೇಯಸಿ ಗೆಳತಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಸಭ್ಯ ಮೆಸೇಜ್ ಕಳುಹಿಸಿದ್ದಾರೆಂದು, ನಟ ತನ್ನ ಅಭಿಮಾನಿಗಳ ಮೂಲಕ ಅವನನ್ನು ಬೆಂಗಳೂರಿಗೆ ಕರಿಸಿಕೊಂಡು, ಪಟ್ಟಣಗೆರೆ ಶೆಡ್ಡನಲ್ಲಿ ಹಲ್ಲೆ ನಡೆಸಿದ್ದಾರೆ. ರೇಣುಕಾಸ್ವಾಮಿ ಹಲ್ಲೆಯ ವೇಳೆ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಜೂನ್ 11 ರಂದು ಬಂಧಿಸಲಾಗಿತ್ತು. ಶನಿವಾರ ಪೊಲೀಸ್ ಕಸ್ಟಡಿಯಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸದ್ಯ ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ದರ್ಶನ್ ಜೈಲಿನಲಿರುವ ಸುದ್ದಿ ಸದ್ಯ ಕರ್ನಾಟಕದಲ್ಲಿ ಬಿಸಿಬಿಸಿ ಚರ್ಚಾ ವಿಷಯವಾಗಿದೆ. ಸದ್ಯ ನಟನ ಮೇಲೆ ದರ್ಶನ್ ಅವರ ಮೇಲೆ ಚಾರ್ಜಶೀಟ್ ಸಲ್ಲಿಕೆ ಆದ ಮೇಲೆ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಈ ಸುದ್ದಿ ಚಿತ್ರರಂಗದಲ್ಲಿರುವ ಹಲವರಿಗೆ ಆಘಾತ ತರಲಿದೆ. ದರ್ಶನ್ ಅವರನ್ನು ಹಾಕಿಕೊಂಡು ಚಿತ್ರ ಮಾಡುವವರು ಎರಡು ಕೈಗಳನ್ನು ಹಿಚಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಏಕೆ ಸಂಕಷ್ಟ?
ದರ್ಶನ್ ಕರ್ನಾಟಕದಲ್ಲಿ ಪ್ರಭಾವಿ ವ್ಯಕ್ತಿ. ಇವರ ಮೇಲೆ ಚಾರ್ಜ್‌ಶೀಟ್ ಆದಮೇಲೆ ಇವರ ಪಾಸ್ ಪೋರ್ಟ್ ರದ್ದಾಗಲಿದೆ. ಕೊಲೆ ಆರೋಪವನ್ನು ಹೊಂದಿರುವವರು ಬೇರೆ ದೇಶಗಳಿಗೆ ಹೋಗಿ ಎಸ್ಕೇಪ್ ಆಗಬಹುದು ಎಂಬ ಕಾರಣದಿಂದ ಪಾಸ್ ಪೋರ್ಟ್ ರದ್ದತಿಗೆ ಪೊಲೀಸರು ಪತ್ರ ಬರೆಯುತ್ತಾರೆ ಎನ್ನಲಾಗಿದೆ. ಆರೋಪಿ ಎಂದ ಮೇಲೆ ಅವರು ಎಷ್ಟು ಪ್ರಭಾವಿ ಎಂದು ನೋಡುವುದಿಲ್ಲ. ಆರೋಪಿ, ಆರೋಪಿನೇ.. ಇನ್ನು ಆರೋಪಿ ಪರಾರಿ ಆಗದಂತೆ ಪೊಲೀಸರು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಅದನೆಲ್ಲಾ ವಹಿಸುತ್ತಾರೆ.

ದರ್ಶನ್ ಮುಂದಿನ ಚಿತ್ರಗಳ ಕಥೆ?
ನಟ ದರ್ಶನ್ ಅವರನ್ನು ಹಾಕಿಕೊಂಡು ಚಿತ್ರವನ್ನು ಮಾಡಲು ಬಯಸುವವರು ಇನ್ನು ಮುಂದೆ ತಮ್ಮ ಸಿನಿಮಾದ ಶೂಟಿಂಗ್ ಭಾರತದಲ್ಲೇ ನಡೆಯುವಂತೆ ನೋಡಿಕೊಳ್ಳಬೇಕು. ಏಕೆಂದರೆ ಇವರ ಪಾಸ್‌ಪೋರ್ಟ್ ರದ್ದು ಮಾಡಲು ಪೊಲೀಸರು ಮುಂದಾದರೆ, ಇವರು ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಚಿತ್ರ ಶೂಟಿಂಗ್ ಮಾಡಲು ಆಗದು. ದರ್ಶನ್ ಜಾಮೀನು ಮೇಲೆ ರಿಲೀಸ್ ಆದ್ಮೇಲೆ ವಿದೇಶದಲ್ಲಿಯ ಶೂಟಿಂಗ್‌ಗೆ ಬ್ರೇಕ್ ಬೀಳುತ್ತದೆ. ಅಲ್ಲದೆ ಈಗಿನ ಟ್ರೆಂಡ್‌ಗೆ ವಿರುದ್ಧವಾಗಿ ನಿರ್ಮಾಪಕರು ಯೋಚಿಸಬೇಕು.
ಈಗಂತೂ ಚಿತ್ರಗಳ ಶೂಟಿಂಗ್ ಹಾಗೂ ಧಾರವಾಹಿಗಳ ಶೂಟಿಂಗ್ ವಿದೇಶದಲ್ಲಿ ಮಾಡುವುದು ಒಂದು ಟ್ರೆಂಡ್.. ದರ್ಶನ್‌ರನ್ನು ಹಾಕಿಕೊಂಡು ಚಿತ್ರ ಮಾಡುವ ನಿರ್ಮಾಪಕರು ಇನ್ನು ಮುಂದೆ ವಿದೇಶಿ ಫ್ಲೈಟ್ ಹತ್ತಿ ಶೂಟ್ ಮಾಡಬೇಕೆಂದಿದ್ದರೆ, ಕೋರ್ಟ್ ಅನುಮತಿ ಪಡೆಯಬೇಕಾಗುತ್ತದೆ. ಕೋರ್ಟ್ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಇಲ್ಲದೇ ಇದ್ದಲ್ಲಿ ಭಾರತದಲ್ಲೇ ಶೂಟಿಂಗ್ ಮುಗಿಸಬೇಕು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications