Darshan Thoogudeepa: ನಟ ದರ್ಶನ್ ಆರೋಗ್ಯ ವರದಿ ಹೈಕೋರ್ಟ್‌ಗೆ, ವರದಿಯಲ್ಲಿದೆ ಸ್ಫೋಟಕ ಅಂಶ!

ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣಾಧೀನ ಕೈದಿ ಹಾಗೂ ಎ2 ಆರೋಪಿ ದರ್ಶನ್ ಆರೋಗ್ಯ ವರದಿ (ವೈದ್ಯಕೀಯ ಅಂಶ)ಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ದರ್ಶನ್ ಅವರು ಬೆನ್ನುನೋವಿನ ಸಮಸ್ಯೆಯಿಂದ ತೀವ್ರ ಬಳಲುತ್ತಿದ್ದಾರೆ. ಅವರಿಗೆ ನಡೆಯಲು ಸಹ ಸಾಧ್ಯವಾಗದ ಪರಿಸ್ಥಿತಿ ಇದೆ. ಈಚೆಗೆ ಅವರು ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆರು ವಾರಗಳ ಕಾಲ ಬೇಲ್ ಮೇಲೆ ಇದ್ದಾರೆ. ಅವರ ಆರೋಗ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಸರಣಿ ಟೆಸ್ಟ್‌ಗಳು ನಡೆಯುತ್ತಿವೆ. ಕೋರ್ಟ್‌ ಸಹ ಅವರಿಗೆ ಮಧ್ಯಂತ ಜಾಮೀನು ನೀಡುವ ಸಂದರ್ಭದಲ್ಲೇ ಪ್ರಮುಖ ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ..

ದರ್ಶನ್‌ ಅವರ ಆರೋಗ್ಯ ವರದಿಯೂ ಪ್ರಮುಖವಾಗಿತ್ತು. ಒಂದು ವಾರದ ಅವಧಿಯ ಒಳಗಾಗಿ ದರ್ಶನ್ ಆರೋಗ್ಯ ವರದಿಯನ್ನು ಕೋರ್ಟ್‌ಗೆ ಮಂಡನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆ ನಿರ್ದೇಶನವನ್ನು ಪಾಲಿಸಲಾಗಿದ್ದು, ದರ್ಶನ್ ತೂಗುದೀಪ್‌ ಆರೋಗ್ಯ ವರದಿಯನ್ನು ಬುಧವಾರ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಇನ್ನು ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡುವಾಗ ದರ್ಶನ್‌ಗೆ ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕು ಹಾಗೂ ಎಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಶ್ಯಕತೆ ಇದೆ ಎನ್ನುವ ಮಾಹಿತಿಗಳನ್ನು ನೀಡುವಂತೆ ತಿಳಿಸಿತ್ತು.

Actor Darshans health report to the High Court the report contains an explosive element

ಅಲ್ಲದೇ ಚಿಕಿತ್ಸೆ ಯಾವ ರೀತಿ (ನಿರ್ದಿಷ್ಟವಾಗಿ ಯಾವ ಚಿಕಿತ್ಸೆ) ಎನ್ನುವ ವಿವರಗಳನ್ನು ದರ್ಶನ್‌ ಅವರು ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಬಂದ (ಬಿಡುಗಡೆಯಾಗಿ) ಒಂದು ವಾರದಲ್ಲಿ ಕೋರ್ಟ್‌ಗೆ ವರದಿ ನೀಡಬೇಕು ಎಂದು ಸೂಚಿಸಲಾಗಿತ್ತು. ಇನ್ನು ಕೋರ್ಟ್‌ ದರ್ಶನ್‌ಗೆ ಜಾಮೀನು ನೀಡುವ ಸಂದರ್ಭದಲ್ಲಿ 8 ಪ್ರಮುಖ ಷರತ್ತುಗಳನ್ನು ವಿಧಿಸಿತ್ತು.

ದರ್ಶನ್ ಆರೋಗ್ಯ ವರದಿ: ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ

ಇನ್ನು ದರ್ಶನ್‌ ಅವರ ಆರೋಗ್ಯ ವರದಿಯನ್ನು ಕೋರ್ಟ್‌ಗೆ ನೀಡಲಾಗಿದೆ. ಇದರಲ್ಲಿ ವೈದ್ಯರು ಈಗಾಗಲೇ ಮಾಧ್ಯಮಗಳಿಗೆ ತಿಳಿಸಿರುವ ಮಾಹಿತಿಗಳು ಇದೆಯಾದರೂ, ದರ್ಶನ್ ಆಪರೇಷನ್‌ಗೆ ಒಪ್ಪಿಗೆ ಸೂಚಿಸಿಲ್ಲ ಎನ್ನುವ ಪ್ರಮುಖ ಅಂಶವಿದೆ. ಇನ್ನು ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಇಲ್ಲಿಯವರೆಗೆ ಆಗಿಲ್ಲ ಎಂದು ಕೋರ್ಟ್‌ಗೆ ಕೊಟ್ಟಿರುವ ವೈದ್ಯಕೀಯ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ದರ್ಶನ್‌ಗೆ ಈಗ ಫಿಸಿಯೋಥೆರಪಿ ನಡೆಯುತ್ತಿದೆ. ಆದರೆ, ಇದೇ ಚಿಕಿತ್ಸೆ ಅಂತಿಮವಲ್ಲ. ಇದು ಅವರ ಬೆನ್ನು ಹಾಗೂ ಕಾಲು ನೋವಿನ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಪರೀಕ್ಷಿಸಲಾಗುತ್ತಿದೆ. ಒಂದೊಮ್ಮೆ ಈ ಚಿಕಿತ್ಸೆಯಿಂದ ಅವರ ಆರೋಗ್ಯ ಸುಧಾರಿಸದೆ ಇದ್ದರೆ, ಮುಂದಿನ ಹಂತದಲ್ಲಿ ಅವರಿಗೆ ಆಪರೇಷನ್‌ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಆಪರೇಷನ್‌ ಬೇಡ ಅಂತಿದ್ದಾರೆ ದರ್ಶನ್: ಇನ್ನು ದರ್ಶನ್ ಅವರಿಗೆ ಆಪರೇಷನ್‌ ಮಾಡುವ ಅವಶ್ಯಕತೆ ಇದೆ. ಆದರೆ, ದರ್ಶನ್ ಅವರು ಆಪರೇಷನ್‌ ಬೇಡ ಅಂತಿದ್ದಾರೆ ಅಂತ ಹೇಳಲಾಗಿತ್ತು. ಇದೇ ಅಂಶವನ್ನು ಇದೀಗ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆಪರೇಷನ್‌ ಬಗ್ಗೆ ದರ್ಶನ್‌ಗೆ ಮಾಹಿತಿ ಕೊಟ್ಟಿದ್ದೇವೆ. ಆದರೆ, ಅವರು ಆಪರೇಷನ್‌ಗೆ ಒಪ್ಪಿಕೊಂಡಿಲ್ಲ. ದರ್ಶನ್‌ ಒಪ್ಪಿಕೊಂಡರೆ ಮಾತ್ರ ಆಪರೇಷನ್‌ ದಿನಾಂಕ ನಿಗದಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಎಂದು ಬಿಜಿಎಸ್‌ ವೈದ್ಯರು ನೀಡಿರುವ ವರದಿಯಲ್ಲಿ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+