ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ವರು ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಭ್ರಷ್ಟ ಸರಕಾರಿ ಅಧಿಕಾರಿಗಳ ಮೇಲೆ ಶುಕ್ರವಾರ ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ರಾಜ್ಯದ ನಾನಾಕಡೆ ದಾಳಿ ನಡೆಸಿದೆ.

ರಾಜ್ಯದ 4 ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದೆ.

ಕುಂದಾಪುರ ತಾಪಂ ಜೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ ಕುಂದಾಪುರ ತಾಪಂ ಜೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ

ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡಸಲಾದ ಜಾಗಗಳ ಮತ್ತು ಸರ್ಕಾರಿ ಅಧಿಕಾರಿಗಳ ಮಾಹಿತಿಯನ್ನು ನೋಡುವುದಾದರೆ, ಸಂಗಪ್ಪ ಐ ಸೂದಿ, ಕಂದಾಯ ನಿರೀಕ್ಷಕರು, ಮುಧೋಳ ತಾಲ್ಲೂಕ, ಬಾಗಲಕೋಟೆ ಜಿಲ್ಲೆ.
ಇವರ ಮಹಾಲಿಂಗಪುರದಲ್ಲಿರುವ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ, ಲಕ್ಷ್ಮೀಪತಿ.ಬಿ, ಎಕ್ಸಿಕ್ಯೂಟಿವ್ ಅಫೀಸರ್, ತಾಲ್ಲೂಕ ಪಂಚಾಯತ್, ಚಿತ್ರದುರ್ಗ.ಇವರ ಮಗ ಮೈಯನಹಟ್ಟಿಯಲ್ಲಿ ಹಾಗೂ ಬಾಗಲಕೋಟೆಯಲ್ಲಿರುವ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ ಮೇಲೆ ದಾಳಿ ನಡೆದಿದೆ.

ACB raided four corrupt officials in the state

ಮುನಿವೆಂಕಟಪ್ಪ, ಶಿರಸ್ತೆದಾರ, ಕಂದಾಯ ಇಲಾಖೆ, ಜಿಲ್ಲಾಧಿಕಾರಿ ಕಛೇರಿ, ಕೋಲಾರ. ಇವರ ಮುತ್ಯಾಲಪೇಟೆ, ಮುಳಬಾಗಿಲಿನಲ್ಲಿರುವ ವಾಸದ ಮನೆ ಸೇರಿ ೨ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ. ಗಣೇಶ ಮೂರ್ತಿ ಎಂ.ಎಲ್, ಸೆಕ್ಷನ್ ಸೂಪರಿಟೆಂಡೆಂಟ್, ಕಮ್ಯೂನಿಟಿ ಹೆಲ್ತ್ ಸೆಂಟರ್, ಸೋಲೂರು ಮಾಗಡಿ ತಾಲ್ಲೂಕು. ಇವರ ಕುದೂರು ಟೌನನಲ್ಲಿರುವ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ ಮೇಲೆ ದಾಳಿ ನಡೆಸಲಾಗಿದೆ.

English summary
Anti Corruption Bureau has raided 10 different places of four government officials who were facing corruption charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X