ಎಸಿಬಿ ದಾಳಿ; ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದು 82 ಲಕ್ಷ ರೂ.!

ಬೆಂಗಳೂರು, ಆಗಸ್ಟ್ 28: ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮೂವರು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ. ದಾಳಿಯ ವೇಳೆ ಒಟ್ಟು 82 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

Recommended Video

      ಅಧಿಕಾರಿಗಳ ಮನೆಯಲ್ಲಿ ಭ್ರಷ್ಟಾಚಾರದ 82 ಲಕ್ಷ ನಗದು ವಷ | Oneindia Kannada

      ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುರುವಾರ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಎಸಿಬಿ ಎಸ್ಪಿ ಕಲಾ ಕೃಷ್ಟಮೂರ್ತಿ ಡಿವೈಎಸ್ಪಿ ರವಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

      ಮಂಡಳಿ ಪ್ರಧಾನ ವ್ಯವಸ್ಥಾಪಕ ನಾಗೇಶ್, ಸಹಾಯಕ ವ್ಯವಸ್ಥಾಪಕರಾದ ಮಂಜುಳಾ ಮತ್ತು ಸುಬ್ಬಯ್ಯ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಣದ ಜೊತೆ ಮಹತ್ವದ ದಾಖಲೆಗಳು ಸಿಕ್ಕಿವೆ.

      ACB Raid On Three Officials 32 Lakh Money Seized

      ಸರ್ಕಾರದಿಂದ ಜಮೀನು ಖರೀದಿಸಿ ಅದನ್ನು ಪರಿಶಿಷ್ಟ ಪಂಗಡದ ಭೂರಹಿತ ಪಲಾನುಭವಿಗಳಿಗೆ ಮಂಜೂರು ಮಾಡುವ ಯೋಜನೆಯಲ್ಲಿ ಈ ಮೂವರು ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಜಮೀನಿಗೆ ಬೆಲೆ ನಿಗದಿ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇದೆ.

      ನಿಯಮಗಳನ್ನು ಗಾಳಿಗೆ ತೂರಿ ಕಳೆಪೆ ಗುಣಮಟ್ಟದ ಜಮೀನನ್ನು ಮಧ್ಯವರ್ತಿಗಳ ಮೂಲಕ ಕೃಷಿಕರಿಂದ ಖರೀದಿ ಮಾಡಲಾಗುತ್ತದೆ. ಬಳಿಕ ಇದನ್ನು ನಿಗದಿಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುವ ಹಗರಣವಿದಾಗಿದೆ.

      ಎಸಿಬಿ ದಾಳಿಯ ವೇಳೆ ಪ್ರಧಾನ ವ್ಯವಸ್ಥಾಪಕ ನಾಗೇಶ್ ಮನೆಯಲ್ಲಿ 32 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಸಹಾಯಕ ಮ್ಯಾನೇಜರ್ ಸುಬ್ಬಯ್ಯ ಮನೆಯಲ್ಲಿ 27 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಎಲ್ಲಾ ಅಧಿಕಾರಿಗಳ ಬಳಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಕಂಡು ಬಂದ ಕಾರಣ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+