'ಮುಂಬೈ ನನ್ನ ಹಾರ್ಟಲ್ಲಿ, ಕರ್ನಾಟಕ ಪ್ರೈವೇಟ್ ಪಾರ್ಟಲ್ಲಿ' ಎಂದು ರೀಲ್ಸ್!
ಸೋಶಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಅವಹೇಳನ ಮಾಡುವುದು, ನಿಂದಿಸುವುದು, ಅವಾಚ್ಯ ಶಬ್ಧಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಮೆರೆಯಲು ಬಂದವರನ್ನು ತಣ್ಣಗಾಗಿಸಿದ ನಿದರ್ಶನಗಳೂ ಸಾಕಷ್ಟಿವೆ. ಈಗ ಮತ್ತೊಬ್ಬ ಇದೇ ರೀತಿ ಕರ್ನಾಟಕದ ಬಗ್ಗೆ ಭಾರಿ ಕೆಟ್ಟದಾಗಿ ಮಾತನಾಡಿದ್ದಾನೆ.
ಇಲ್ಲಿವರೆಗೆ ಕನ್ನಡ ಬರಲ್ಲ, ಮಾತಾಡಲ್ಲ ಎಂದು ಕೆಲವರು ಜಗಳ ಮಾಡಿದ್ದರು. ಇನ್ನೂ ಕೆಲವರು ನಮ್ಮಿಂದಲೇ ಬೆಂಗಳೂರು ಉದ್ಧಾರ ಆಗ್ತಿದೆ ಎಂದು ಉತ್ತರ ಭಾರತದ ಕೆಲ ಜನರು ಬೆನ್ನುತಟ್ಟಿಕೊಂಡು ಕೊನೆಗೆ ತಕ್ಕ ಪಾಠವೂ ಕಲಿತಿದ್ದರು. ಈಗ ಮುಂಬೈ ಮೂಲದ ದೇವ್ ಶರ್ಮಾ ಎನ್ನುವ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ರೀಲ್‌ನಲ್ಲಿ ಕರ್ನಾಟಕವನ್ನು ಆತನ ಖಾಸಗಿ ಅಂಗಕ್ಕೆ ಹೋಲಿಸಿದ್ದಾನೆ.

ರೀಲ್‌ನಲ್ಲಿ ಈತ ಭಾರತದ ನಕ್ಷೆ ತೋರಿಸಿಕೊಂಡು ತನ್ನ ಸ್ನೇಹಿತನಿಗೆ ಬೇರೆ ಬೇರೆ ರಾಜ್ಯಗಳ ಬಗ್ಗೆ ಕೇಳುತ್ತಾನೆ. ಈ ವೇಳೆ ಈ ಕಿಡಿಗೇಡಿ ಮುಂಬೈ ನನ್ನ ಹೃದಯಲ್ಲಿದೆ ಎಂದು ಹೇಳುತ್ತಾನೆ. ಬಳಿಕ ಕರ್ನಾಟಕ ಎಲ್ಲಿದೆ ಎಂದು ಸ್ನೇಹಿತ ಕೇಳಿದಾಗ ತನ್ನ ಖಾಸಗಿ ಅಂಗದಲ್ಲಿದೆ ಎಂದು ಹೇಳಿದ್ದಾನೆ.
ಈ ವಿಡಿಯೋ ಕಂಡು ಉತ್ತರ ಭಾರತೀಯರು ಹಬ್ಬ ಕೂಡ ಮಾಡಿದ್ದಾರೆ. ಆದರೆ, ಕನ್ನಡಿಗರು ಈ ವಿಡಿಯೋ ಮಾಡಿದವನಿಗೆ ಮಾರಿಹಬ್ಬವೇ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈತನ ವಿಡಿಯೋಗೆ ಕನ್ನಡಿಗರು ಕಾಮೆಂಟ್ ಮಾಡುವ ಮೂಲಕ ಫುಲ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಭೂಪ ಮತ್ತಷ್ಟು ವಿಡಿಯೋಗಳನ್ನು ಹಂಚಿಕೊಂಡು, ನೀವು ಕನ್ನಡಿಗರೆಲ್ಲ ನನ್ನ ಅದಕ್ಕೆ ಸಮಾನ, ನಿಮ್ಮಿಂದ ಏನೂ ಕಿತ್ಕೊಳ್ಳೋಕೆ ಆಗಲ್ಲ, ನನ್ನ ಕೈಗೆ ಸಿಕ್ಕರೆ ನಿಮ್ಮ ಖಾಸಗಿ ಅಂಗಗಳಿಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದೆಲ್ಲ ನಾಲ್ಕೈದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.
ಅಷ್ಟೊತ್ತಿಗೆ ಕರ್ನಾಟಕದಲ್ಲಿ ಈತನ ವಿರುದ್ಧ ದೊಡ್ಡ ಸೈನ್ಯವೇ ಹೊಂಚು ಹಾಕಿತ್ತು. ಈತನ ಪತ್ತೆಗೆ ಪ್ಲ್ಯಾನ್ ಕೂಡ ಮಾಡಿತ್ತು. ನೀನೇನಾದ್ರೂ ಕನ್ನಡ ನೆಲದಲ್ಲಿ ಸಿಕ್ಕರೆ, ನಿನ್ ಕಥೆ ಮುಗೀತು ಎಂದೆಲ್ಲ ಚಾಲೆಂಜ್ ಹಾಕಿದ್ದರು. ಈ ವಿಡಿಯೋ ಹಂಚಿಕೊಂಡಿದ್ದ ಹಲವರು ಬೆಂಗಳೂರು ಪೊಲೀಸರು ಹಾಗೂ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದರು.
ಕೊನೆಗೆ ಪೊಲೀಸರು ಈತನ ಮನೆಬಾಗಿಲು ತಟ್ಟಿದ್ದಾರೆ. ಅಲ್ಲಿವರೆಗೆ ಮೆರೆಯುತ್ತಿದ್ದ ಸೋಶಿಯಲ್ ಮೀಡಿಯಾ ಸ್ಟಾರ್, ಕನ್ನಡಿಗರ ವಾರ್‌ಗೆ ಹೆದರಿ ಶರಣಾಗಿದ್ದಾನೆ. ನನ್ನ ಮಾತುಗಳಿಂದ ನಿಮಗೆ ತುಂಬಾ ಹರ್ಟ್ ಆಗಿದೆ. ದಯವಿಟ್ಟು ಕ್ಷಮಿಸಿ ಎಂದು ತಲೆಬಾಗಿ ವಿಡಿಯೋ ಮಾಡಿದ್ದಾನೆ.
ನನ್ನ ತಪ್ಪಿನ ಬಗ್ಗೆ ಅರಿವು ಮೂಡಿಸಿದ್ದಕ್ಕೆ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ. ನಾನು ಕಾಮಿಡಿ ಮಾಡಲು ಹೋಗಿ ಈ ಎಡವಟ್ಟು ಮಾಡಿದೆ. ನನಗೆ ಫಾಲೋವರ್ಸ್ ಜಾಸ್ತಿ ಇದ್ದಿದ್ದರಿಂದ ಅವರನ್ನು ಮನರಂಜಿಸುವ ಉದ್ದೇಶದಿಂದ ಈ ತಪ್ಪು ಕೆಲಸ ಮಾಡಿದೆ. ಮುಂದೆ ಎಂದೂ ಇಂತಹ ಕೆಲಸ ಮಾಡೋಲ್ಲ ಎಂದು ಶರ್ಮಾ ಸೈಲೆಂಟ್ ಆಗಿದ್ದಾನೆ.












Click it and Unblock the Notifications