• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನ ಮದರಸಾಗೆ ಅಕ್ರಮ ಪ್ರವೇಶ, ಪೂಜೆ; 9 ಜನರ ವಿರುದ್ಧ ಪ್ರಕರಣ, ನಾಲ್ವರ ಬಂಧನ

|
Google Oneindia Kannada News

ಬೀದರ್‌, ಅ. 07: ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು ಗುರುವಾರ ಬೀದರ್‌ನ ಮದರಸಾ ಮತ್ತು ಮಸೀದಿಗೆ ನುಗ್ಗಿ, ಪೂಜೆ ಸಲ್ಲಿಸಿ, ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾನವಾಗಿದ್ದು, ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲಾ ಆರೋಪಿಗಳನ್ನು ಶುಕ್ರವಾರದೊಳಗೆ ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಸಂಘಟನೆಗಳು ಬೆದರಿಕೆ ಹಾಕಿವೆ.

Video: ಬೀದರ್‌ನಲ್ಲಿ ದಸರಾ ಆಚರಿಸಲು ಮದರಸಾಗೆ ನುಗ್ಗಿದ ಗುಂಪು!Video: ಬೀದರ್‌ನಲ್ಲಿ ದಸರಾ ಆಚರಿಸಲು ಮದರಸಾಗೆ ನುಗ್ಗಿದ ಗುಂಪು!

ಬೀದರ್‌ನ ಮಹಮೂದ್ ಗವಾನ್ ಮದರಸಾ ಮತ್ತು ಮಸೀದಿಗೆ ದಸರಾ ಮೆರವಣಿಗೆಯ ಭಾಗವಾಗಿದ್ದ ಗುಂಪೊಂದು ಅಕ್ರಮವಾಗಿ ಪ್ರವೇಶಿಸಿ, ಘೋಷಣೆಗಳನ್ನು ಕೂಗಿ ಕಟ್ಟಡದ ಮೂಲೆಯಲ್ಲಿ ಪೂಜೆ ಸಲ್ಲಿಸಿದೆ.

1460 ರ ದಶಕದಲ್ಲಿ ನಿರ್ಮಿಸಲಾದ ಬೀದರ್‌ನಲ್ಲಿರುವ ಮಹ್ಮದ್ ಗವಾನ್ ಮದರಸಾವು ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಗೊತ್ತುಪಡಿಸಿದ ಪಾರಂಪರಿಕ ತಾಣವಾಗಿದೆ. ಈ ಮದರಸವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳಲ್ಲಿ ಪಟ್ಟಿಮಾಡಲಾಗಿದೆ.

ಮದರಸಾ ಮೆಟ್ಟಿಲುಗಳ ಮೇಲೆ ನಿಂತು ಆಕ್ಷೇಪಾರ್ಹ ಘೋಷಣೆ

ಮದರಸಾ ಮೆಟ್ಟಿಲುಗಳ ಮೇಲೆ ನಿಂತು ಆಕ್ಷೇಪಾರ್ಹ ಘೋಷಣೆ

ಗುಂಪು ಮದರಸಾದ ಬೀಗ ಒಡೆದು ಒಳಗೆ ನುಗ್ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಜೆ ಮಾಡಲು ಒಂದು ಮೂಲೆಗೆ ತೆರಳುವ ಮೊದಲು ಮದರಸಾದ ಮೆಟ್ಟಿಲುಗಳ ಮೇಲೆ ನಿಂತ ಗುಂಪು "ಜೈ ಶ್ರೀ ರಾಮ್" ಮತ್ತು "ಹಿಂದೂ ಧರ್ಮ ಜೈ" ಘೋಷಣೆಗಳನ್ನು ಕೂಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತಿರುವ ಈ ದೊಡ್ಡ ಗುಂಪು ಒಳಗೆ ಹೋಗಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

ಬೀದರ್‌ನ ಹಲವಾರು ಮುಸ್ಲಿಂ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆಗಳನ್ನು ನಡೆಸಿವೆ. ಎಲ್ಲಾ ಆರೋಪಿಗಳನ್ನು ಬಂಧಿಸದಿದ್ದರೆ ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಗೋಡೆಗಳ ಮೇಲೆ ಕಸದ ತ್ಯಾಜ್ಯಾ ಎಸೆದ ಆರೋಪ

ಗೋಡೆಗಳ ಮೇಲೆ ಕಸದ ತ್ಯಾಜ್ಯಾ ಎಸೆದ ಆರೋಪ

ಉದ್ಯಮಿ ಮೊಹಮ್ಮದ್ ಶಫಿಯುದ್ದೀನ್ (69) ನೀಡಿದ ದೂರಿನ ಪ್ರಕಾರ, ಪುರಾತತ್ವ ಸ್ಮಾರಕವಾಗಿರುವ ಮದರಸಾಕ್ಕೆ ಗುರುವಾರ ಮುಂಜಾನೆ 2 ಗಂಟೆಗೆ ಕೆಲವರು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅವರನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿ ಮತ್ತು ಇತರರನ್ನು ಬೆದರಿಸಿದ್ದಾರೆ. ಅವರು ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಉದ್ದೇಶದಿಂದ ಪ್ರವೇಶಿಸಿದ್ದಾರೆ. ಇತರ ಸಮುದಾಯದ ಸದಸ್ಯರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.

ಮದರಸಾಗೆ ಪ್ರವೇಶಿಸಿದ ಗುಂಪು ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಗೋಡೆಗಳ ಮೇಲೆ ಎಸೆದರು ಎಂದು ಉದ್ಯಮಿ ಮೊಹಮ್ಮದ್ ಶಫಿಯುದ್ದೀನ್ ಆರೋಪಿಸಿದ್ದಾರೆ.

ಬೀದರ್ ಎಸ್‌ಪಿ, 'ಸಂಪ್ರದಾಯದಂತೆ ಮದರಸಾದಲ್ಲಿ ದಸರಾ ಮೆರವಣಿಗೆಯಲ್ಲಿ ಕೆಲವು ಹಿಂದೂಗಳು ಪೂಜೆ ಮಾಡುತ್ತಾರೆ. ಆದರೆ, ಮೂರು ಅಥವಾ ನಾಲ್ಕು ಜನರಿಗೆ ಮಾತ್ರ ಸ್ಥಳಕ್ಕೆ ಪ್ರವೇಶಿಸಲು ಅವಕಾಶವಿದೆ' ಎಂದು ಹೇಳಿದ್ದಾರೆ.

60 ಮಂದಿ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

60 ಮಂದಿ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

"ಮೊಹಮ್ಮದ್ ಶಫಿಯುದ್ದೀನ್ ನೀಡಿದ ದೂರಿನ ಆಧಾರದ ಮೇಲೆ ನಾವು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ, ನಾವು ಇತರರಿಗಾಗಿ ಹುಡುಕುತ್ತಿದ್ದೇವೆ" ಎಂದು ಬೀದರ್ ಎಸ್‌ಪಿ ಹೇಳಿದ್ದಾರೆ.

ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನರೇಶ್ ಗೌಳಿ, ಪ್ರಕಾಶ್ ಮೆಕ್ಯಾನಿಕ್, ವಿನು ಮೆಕಾನಿಕ್, ಮುನ್ನಾ ಚೌಬಾರ, ಸಾಗರ್ ಬಂಟಿ, ಜಗದೀಶ್ ಗೌಳಿ ಗಲ್ಲಿ, ಅರುಣ್ ಗೌಳಿ, ಗಣೇಶ್ ಗೌಳಿ ಮತ್ತು ಗೋರಕ್ ಗೌಳಿ ಸೇರಿದಂತೆ 60 ಮಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೊಹಮ್ಮದ್ ಶಫಿಯುದ್ದೀನ್ ಕೋರಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಓವೈಸಿ ಕಿಡಿ

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಓವೈಸಿ ಕಿಡಿ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರು ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಬೀದರ್ ಪೊಲೀಸರು ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂತಹ ದಾಳಿಗೆ ಹೇಗೆ ಅನುಮತಿ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

"ಬಿಜೆಪಿ [ಭಾರತೀಯ ಜನತಾ ಪಕ್ಷ] ಕೇವಲ ಮುಸ್ಲಿಮರನ್ನು ಕೀಳಾಗಿಸುವುದಕ್ಕಾಗಿ ಇಂತಹ ಚಟುವಟಿಕೆಯನ್ನು ಉತ್ತೇಜಿಸುತ್ತಿದೆ" ಎಂದು ಓವೈಸಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಬರದಂತೆ ಎಚ್ಚರ ವಹಿಸಲು ಪೊಲೀಸರು ಮದರಸಾ ಬಳಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಇನ್ನು, ಆಗಸ್ಟ್‌ನಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗಿತ್ತು.

English summary
Illegal entry into madrasa in Bidar: Case against 9 people, four have been arrested. police registered a case on the basis of a complaint. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X