ಪತ್ನಿಯನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ಪತಿರಾಯ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ,23: ಪತಿಯೊಬ್ಬ ಪತ್ನಿಯನ್ನು ಮಾರಕಾಸ್ತ್ರದಲ್ಲಿ ಕೊಚ್ಚಿ ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಹಾನೂರು ಸಮೀಪದ ಹುಲ್ಲೇಪುರ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಪತಿಯಿಂದ ಕೊಲೆಯಾದ ಪತ್ನಿಯೇ ರಾಧ. ಈಕೆಯ ಪತಿ ಮಹದೇವ ಕೊಲೆಗೈದ ಆರೋಪಿ. ಈತ ಹುಲ್ಲೇಪುರ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಕೊಲೆ ಮಾಡಿದ ಆರೋಪಿ ಮಹದೇವನನ್ನು ಪೊಲೀಸರು ಬಂಧಿಸಿದ್ದಾರೆ.[ವ್ಯಾಕ್, ಗಬ್ಬು ನಾರುತ್ತಿರುವ ಚಾಮರಾಜನಗರ ಜಿಲ್ಲಾಸ್ಪತ್ರೆ!]

Chamarajanagar

ರಾಧಾಳ ಪತಿ ಮಹದೇವ ಆಕೆಯ ಶೀಲದ ಮೇಲೆ ಸದಾ ಶಂಕೆ ವ್ಯಕ್ತಪಡಿಸಿ ಸದಾ ಹಿಂಸಿಸುತ್ತಿದ್ದನು. ಆದರೂ ರಾಧ ಆತನ ಹಿಂಸೆಯನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದಳು.[ಚಾಮರಾಜನಗರದಲ್ಲಿ ಸಿಕ್ಕಿದ್ದು ಎಷ್ಟು ಚಿನ್ನದ ನಾಣ್ಯ?]

ಗುರುವಾರ ಮದ್ಯ ಸೇವಿಸಿ ಬಂದಿದ್ದ ಮಹದೇವ ನಡು ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದಾನೆ. ಗಲಾಟೆ ತಾರಕ್ಕಕ್ಕೇರಿದ ಪರಿಣಾಮ ಮನೆಯಲ್ಲಿದ್ದ ಮಚ್ಚಿನಿಂದ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ರಾಧಾಳಿಗೆ ಇಬ್ಬರು ಗಂಡು ಮಕ್ಕಳಿದ್ದು, ಪತಿ ಮಹದೇವ ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಜಗಳ ತೆಗೆಯುತ್ತಿದ್ದನು ಎಂದು ಗ್ರಾಮಸ್ಥರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹನೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A husband Mahadeva murdered his wife Radha in Hullepura Village, Kollegal Taluk, Chamarajanagar on Friday, January 22nd mid night.
Please Wait while comments are loading...